newsfirstkannada.com

ಅಮೆರಿಕಾ ಚುನಾವಣೆಯಲ್ಲಿ ಅಚ್ಚರಿಯ ನಡೆ.. ರೇಸ್‌ನಿಂದ ಹಿಂದೆ ಸರಿದ ವಿವೇಕ್ ರಾಮಸ್ವಾಮಿ; ಕಾರಣವೇನು?

Share :

Published January 16, 2024 at 2:31pm

Update January 16, 2024 at 2:35pm

  ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಆಗಿದ್ದ ವಿವೇಕ್

  ಒಬಾಮಾ, ಬುಷ್ ಹಾದಿಯಲ್ಲಿ ಮತ್ತೆ ಡೊನಾಲ್ಡ್‌ ಟ್ರಂಪ್ ಗೆಲ್ಲುತ್ತಾರಾ?

  ಅಯೋವಾ ಕಾಕಸ್‌ ಚುನಾವಣೆಯಲ್ಲಿ ಗೆದ್ದು ಬೀಗಿದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್‌: ಇದೇ ವರ್ಷ ನಡೆಯುವ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಭಾರೀ ಕುತೂಹಲ ಕೆರಳಿಸಿದೆ. ಜೋ ಬೈಡನ್ ಬಳಿಕ ಪ್ರೆಸಿಡೆಂಟ್ ಪಟ್ಟ ಯಾರಿಗೆ ಒಲಿದು ಬರಲಿದೆ ಅನ್ನೋದು ಬಹಳ ಮುಖ್ಯವಾಗಿದೆ. ಈ ಕುತೂಹಲದ ಮಧ್ಯೆ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಅವರು ಅಮೆರಿಕಾ ಅಧ್ಯಕ್ಷೀಯ ಚುನಾವಣಾ ರೇಸ್‌ನಿಂದ ಹಿಂದೆ ಸರಿದು ಅಚ್ಚರಿ ಮೂಡಿಸಿದ್ದಾರೆ.

38 ವರ್ಷದ ವಿವೇಕ್ ರಾಮಸ್ವಾಮಿ ಅವರು ಈ ಬಾರಿಯ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಬಲ ಪ್ರತಿಸ್ಪರ್ಧಿಯಾಗಿದ್ದರು. ಆದರೆ ರಿಪಬ್ಲಿಕನ್ ಪಕ್ಷದ ಪ್ರೈಮರಿ ಚುನಾವಣೆಯಿಂದ ಹಿಂದೆ ಸರಿಯುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಮೂಲದ ಡಾ. ವಿವೇಕ್ ಮೂರ್ತಿಗೆ WHO ಜವಾಬ್ದಾರಿ ನೀಡಲು ಜೋ ಬೈಡನ್ ಶಿಫಾರಸು..!

2024ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಅಯೋವಾ ಕಾಕಸ್‌ನಲ್ಲಿ ಎಲೆಕ್ಷನ್ ನಡೆದಿದೆ. ಈ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್‌ ಅವರು ಜಯಭೇರಿ ಬಾರಿಸಿದರು. ಅಯೋವಾ ಕಾಕಸ್ ಗೆದ್ದವರಿಗೆ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲುವುದು ಮಹತ್ವದ್ದಾಗಿದೆ. 1972ರಿಂದ ಅಯೋವಾ ಕಾಕಸ್‌ನಲ್ಲಿ ಗೆದ್ದ ಒಬಾಮಾ ಹಾಗೂ ಜಾರ್ಜ್ ಬುಷ್ ಅವರು ಅಮೆರಿಕಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಟ್ರಂಪ್‌ ಅವರ ಈ ಗೆಲುವಿನ ಹಿನ್ನೆಲೆಯಲ್ಲಿ ರಿಪಬ್ಲಿಕನ್ ಸ್ಪರ್ಧಿ ವಿವೇಕ್ ರಾಮಸ್ವಾಮಿ ಅವರು ಚುನಾವಣೆಯಿಂದ ಹಿಂದೆ ಸರಿಯು ನಿರ್ಧಾರ ಘೋಷಣೆ ಮಾಡಿದರು.

ಡೊನಾಲ್ಡ್ ಟ್ರಂಪ್‌ ಗೆಲುವನ್ನು ಸ್ವಾಗತಿಸಿರುವ ವಿವೇಕ್ ರಾಮಸ್ವಾಮಿ ಅವರು, ಸಕ್ಸಸ್ ಈಗ ಶುರುವಾಗಿದೆ. ಟ್ರಂಪ್ ಅವರ ಗೆಲುವನ್ನು ನಾನು ಅಭಿನಂದಿಸುತ್ತೇನೆ. ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನೇ ಬೆಂಬಲಿಸುವುದಾಗಿ ಘೋಷಣೆ ಮಾಡಿದ್ದಾರೆ. ಈ ನಿರ್ಧಾರದಿಂದ ಡೋನಾಲ್ಡ್ ಟ್ರಂಪ್ ಮುಂದೆ ಅಮೆರಿಕಾದ ಅಧ್ಯಕ್ಷರಾದರೇ ವಿವೇಕ್ ರಾಮಸ್ವಾಮಿ ಉಪಾಧ್ಯಕ್ಷರಾಗುವ ಸಾಧ್ಯತೆ ಇದೆ. ಅಮೆರಿಕಾದ ಓಹಿಯೋ ನಿವಾಸಿಯಾಗಿರುವ ವಿವೇಕ್ ರಾಮಸ್ವಾಮಿ ಅವರ ಪೋಷಕರು ಭಾರತದ ಕೇರಳದಲ್ಲಿ ನೆಲೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮೆರಿಕಾ ಚುನಾವಣೆಯಲ್ಲಿ ಅಚ್ಚರಿಯ ನಡೆ.. ರೇಸ್‌ನಿಂದ ಹಿಂದೆ ಸರಿದ ವಿವೇಕ್ ರಾಮಸ್ವಾಮಿ; ಕಾರಣವೇನು?

https://newsfirstlive.com/wp-content/uploads/2024/01/Vivek-Ramaswamy-Donald-Trump.jpg

Load More