ಹೊಸ ಫೋನ್ ಖರೀದಿ ಯೋಚನೆಯಲ್ಲಿದ್ದೀರಾ..? ಕಮ್ಮಿ ಬೆಲೆಗೆ ಸೂಪರ್ ಫೋನ್..!

author-image
Ganesh
Updated On
ಹೊಸ ಫೋನ್ ಖರೀದಿ ಯೋಚನೆಯಲ್ಲಿದ್ದೀರಾ..? ಕಮ್ಮಿ ಬೆಲೆಗೆ ಸೂಪರ್ ಫೋನ್..!
Advertisment
  • Vivo Y19s ಸ್ಮಾರ್ಟ್​ಫೋನ್ ಈ ಮಾರುಕಟ್ಟೆಗೆ ಲಗ್ಗೆ
  • ಯುನಿಸಾಕ್ ಪ್ರೊಸೆಸರ್ ಹೊಂದಿರುವ ಈ ಫೋನ್
  • ಹೊಸ ವಿವೋ ಫೋನ್​​​​ ಹೇಗಿದೆ? ಏನೆಲ್ಲ ವ್ಯವಸ್ಥೆ ಇದೆ?

Vivo ಹೊಸ ಸ್ಮಾರ್ಟ್‌ಫೋನ್ Vivo Y19s ಥೈಲ್ಯಾಂಡ್‌ನಲ್ಲಿ ಬಿಡುಗಡೆಯಾಗಿದೆ. ಇದು ಯುನಿಸಾಕ್ ಪ್ರೊಸೆಸರ್ ಇರುವ ಈ ಫೋನ್, 6 GB RAM ಹೊಂದಿದೆ. 5500mAh ಬ್ಯಾಟರಿಯ ಸಾಮರ್ಥ್ಯವಿದ್ದು, 15W ಚಾರ್ಜಿಂಗ್ ಸಪೋರ್ಟ್ ಮಾಡಲಿದೆ.

ಛಾಯಾಗ್ರಹಣಕ್ಕಾಗಿ 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶೀಘ್ರದಲ್ಲೇ ಎಲ್ಲಾ ಮಾರುಕಟ್ಟೆಯಲ್ಲೂ ಲಭ್ಯ ಇರಲಿದೆ.

Vivo Y19s
Vivo Y19s 1680 x 720 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು HD+ ಗುಣಮಟ್ಟ ಮತ್ತು 90Hz ರಿಫ್ರೆಶ್ ರೇಟ್​ನೊಂದಿಗೆ 6.68-ಇಂಚಿನ LCD ಡಿಸ್​ಪ್ಲೇ ಹೊಂದಿದೆ. ಕ್ಯಾಮೆರಾ ಸೆಟಪ್‌ನಲ್ಲಿ ಡ್ಯುಯಲ್ ಕ್ಯಾಮೆರಾವನ್ನು 50-ಮೆಗಾಪಿಕ್ಸೆಲ್, ಸೆಲ್ಫಿಗಾಗಿ 5 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ. ಇದು Unisock T612 ಪ್ರೊಸೆಸರ್. ಜೊತೆಗೆ 6GB LPDDR4x RAM ಮತ್ತು 4GB RAM ಆಯ್ಕೆಯೂ ಇದೆ. ಈ ಫೋನ್​ನಲ್ಲಿ 128GB ವರೆಗಿನ ಇಂಟರನಲ್ ಸ್ಟೋರೇಜ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: BSNL: ಹೊಸ ಲೋಗೋ ಪರಿಚಯಿಸಿದ ಬಿಎಸ್​​ಎನ್​ಎಲ್​! ಏನು ವಿಶೇಷತೆ ಗೊತ್ತಾ?

Vivo Y19sಗೆ SD ಕಾರ್ಡ್ ವ್ಯವಸ್ಥೆಗೆ ಅವಕಾಶ ನೀಡಲಾಗಿದೆ. ಅದರೊಂದಿಗೆ ಸ್ಮಾರ್ಟ್‌ಫೋನ್‌ನ ಸ್ಟೋರೇಜ್ ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು. ಭದ್ರತೆಗಾಗಿ ಫೋನ್ ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಸೌಲಭ್ಯ ಇದೆ. 3.5 ಎಂಎಂ ಆಡಿಯೋ ಜಾಕ್ ನೀಡಲಾಗಿದೆ. ಡ್ಯುಯಲ್ ಸ್ಪೀಕರ್‌ ಲಭ್ಯವಿದೆ. ಕೇವಲ 198 ಗ್ರಾಂ ತೂಕ ಹೊಂದಿದೆ.

Vivo Y19s ಬೆಲೆ
ಥೈಲ್ಯಾಂಡ್‌ನಲ್ಲಿ Vivo Y19s ನ 4GB + 128GB ಬೆಲೆ 10,796 ರೂಪಾಯಿ ಆಗಿದೆ. 6GB + 128GB ಬಲೆ 12,269 ರೂಪಾಯಿ ಆಗಿದೆ. ಗ್ಲಾಸಿ ಬ್ಲ್ಯಾಕ್, ಪರ್ಲ್ ಸಿಲ್ವರ್ ಮತ್ತು ಗ್ಲೇಸಿಯರ್ ಬ್ಲೂ ಬಣ್ಣಗಳಲ್ಲಿ ಫೋನ್ ಲಭ್ಯ ಇವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment