/newsfirstlive-kannada/media/post_attachments/wp-content/uploads/2024/04/Vodaphone-Idea-Vi.jpg)
ಭಾರತದ 3ನೇ ಅತಿದೊಡ್ಡ ಟೆಲಿಕಾಂ ಕಂಪನಿ ವೊಡಾಫೋನ್ ಐಡಿಯಾ. ಈಗ ಜಿಯೋ ಮತ್ತು ಏರ್ಟೆಲ್ ಮಾರ್ಗದಲ್ಲಿ ನಡೆಯಲು ಮುಂದಾಗಿರೋ ವೊಡಾಫೋನ್ ಇದೆ ಮಾರ್ಚ್ 2025ರಿಂದ 5G ಸೇವೆಯನ್ನು ಶುರು ಮಾಡಲಿದೆ.
ಇನ್ನು, ವೊಡಾಫೋನ್ ಐಡಿಯಾದ 5G ಸೇವೆ ದೆಹಲಿ, ಬೆಂಗಳೂರು, ಚಂಡೀಗಡ, ಮುಂಬೈ ಮತ್ತು ಪಟ್ನಾದಲ್ಲಿ ಆರಂಭಿಸಲು ಸಜ್ಜಾಗಿದೆ. ಇದಾದ ನಂತರ ಹಂತ ಹಂತವಾಗಿ ದೇಶಾದ್ಯಂತ ತಮ್ಮ Vi 5G ಸೇವೆಯನ್ನು ವಿಸ್ತರಿಸಲಿದೆ.
ಜಗಬೀರ್ ಸಿಂಗ್ ಏನಂದ್ರು?
ವೊಡಾಫೋನ್ ಐಡಿಯಾದ ಮುಖ್ಯ ತಂತ್ರಜ್ಞಾನ ಅಧಿಕಾರಿ ಜಗಬೀರ್ ಸಿಂಗ್ ‘17 ಪ್ರದೇಶಗಳಲ್ಲಿ 5G ಸೇವೆಯನ್ನು ಪರಿಚಯಿಸುವುದಾಗಿ ಹೇಳಿದ್ದಾರೆ. ಮೆಟ್ರೋ ನಗರಗಳು ಮತ್ತು ಪ್ರಮುಖ ನಗರ ಪ್ರದೇಶಗಳನ್ನು ಕೇಂದ್ರಿಕರಿಸಿಕೊಂಡು ಪರಿಚಯಿಸಲಿದ್ದೇವೆ’ ಎಂದು ಹೇಳಿದ್ದಾರೆ.
ವೊಡಾಫೋನ್ ಐಡಿಯಾ ಜೂನ್ ತಿಂಗಳಲ್ಲಿ 90 ಪ್ರತಿಶತದಷ್ಟು 4G ವ್ಯಾಪ್ತಿಯನ್ನು ಹೆಚ್ಚಿಸುವ ಗುರಿ ಹೊಂದಿತ್ತು. ಅದರಂತೆಯೇ ಸುಮರು 77 ಪ್ರತಿಶತದಷ್ಟು ಜನಸಂಖ್ಯೆಯನ್ನು ಒಳಗೊಂಡಿದೆ. ಇದೀಗ ಏರ್ಟೆಲ್ ಮತ್ತು ಜಿಯೋ ಕೂಡ ತನ್ನ ನೆಟ್ವರ್ಕ್ ಬಲಪಡಿಸಲು ಬಯಸಿದೆ.
ಇದನ್ನೂ ಓದಿ:ಚಾಂಪಿಯನ್ಸ್ ಟ್ರೋಫಿ; ಟೀಮ್ ಇಂಡಿಯಾದಿಂದಲೇ ಹೊರಬಿದ್ದ ರಿಷಬ್ ಪಂತ್; ಏನಾಯ್ತು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ