Vodafone Idea: 5G ಸೇವೆ ಪ್ರಾರಂಭಿಸಲು ಮುಂದಾದ ವೊಡಾಫೋನ್​ ಐಡಿಯಾ? ಬೆಂಗಳೂರಿಗೆ ಯಾವಾಗ?

author-image
AS Harshith
Updated On
Vodafone Idea: 5G ಸೇವೆ ಪ್ರಾರಂಭಿಸಲು ಮುಂದಾದ ವೊಡಾಫೋನ್​ ಐಡಿಯಾ? ಬೆಂಗಳೂರಿಗೆ ಯಾವಾಗ?
Advertisment
  • ಟೆಲಿಕಾಂ ಕಂಪನಿ ವೊಡಾಫೋನ್​ ಐಡಿಯಾದಿಂದ 5G ಸೇವೆ
  • ಮೆಟ್ರೋ ಮತ್ತು ಪ್ರಮುಖ ನಗರಗಳಲ್ಲಿ ಮೊದಲಿಗೆ ಬರಲಿದೆ ಈ ಸೇವೆ
  • ಬೆಂಗಳೂರಿಗೆ ಯಾವಾಗ? ಇಂಟರ್​ನೆಟ್​ ಸ್ಪೀಡ್​ ಹೆಚ್ಚಾಗುತ್ತಾ?

ವೊಡಾಫೋನ್​ ಐಡಿಯಾ 5G ಸೇವೆಯನ್ನು ಪ್ರಾರಂಭಿಸಲು ಮುಂದಾಗಿದೆ. ಮುಂದಿನ ವರ್ಷ ಮಾರ್ಚ್​ ತಿಂಗಳಿನಲ್ಲಿ 5G ಸೇವೆಯನ್ನು ಗ್ರಾಹಕರಿಗಾಗಿ ಪರಿಚಯಿಸಲಿದೆ. ಅಂದಹಾಗೆಯೇ ಕಂಪನಿ ಮೊದಲಿಗೆ ದೆಹಲಿ ಮತ್ತು ಮುಂಬೈನಲ್ಲಿ ಪ್ರಾರಂಭಿಸಲಿದೆ ಎಂದು ಹೇಳಿದೆ.

ವೊಡಾಫೋನ್​ ಐಡಿಯಾದ ಮುಖ್ಯ ತಂತ್ರಜ್ಞಾನ ಅಧಿಕಾರಿ ಜಗಬೀರ್​ ಸಿಂಗ್​ ‘17 ಪ್ರದೇಶಗಳಲ್ಲಿ 5G ಸೇವೆಯನ್ನು ಪರಿಚಯಿಸುವುದಾಗಿ ಹೇಳಿದ್ದಾರೆ. ಮೆಟ್ರೋ ನಗರಗಳು ಮತ್ತು ಪ್ರಮುಖ ನಗರ ಪ್ರದೇಶಗಳನ್ನು ಕೇಂದ್ರಿಕರಿಸಿಕೊಂಡು ಪರಿಚಯಿಸಲಿದ್ದೇವೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೊಬೈಲ್​ ಟವರ್​ ಬೇಡ! ತಂತಿಗಳ ಅವಶ್ಯಕತೆ ಇಲ್ಲ! Sim Card​ ಇಲ್ಲದೆಯೇ ಕರೆ ಮಾಡುವ ತಂತ್ರಜ್ಞಾನದತ್ತ ಚಿತ್ತ ಹರಿಸಿದ BSNL​!

ವೊಡಾಫೋನ್​ ಐಡಿಯಾ ಜೂನ್​ ತಿಂಗಳಲ್ಲಿ 90 ಪ್ರತಿಶತದಷ್ಟು 4G ವ್ಯಾಪ್ತಿಯನ್ನು ಹೆಚ್ಚಿಸುವ ಗುರಿ ಹೊಂದಿತ್ತು. ಅದರಂತೆಯೇ ಸುಮರು 77 ಪ್ರತಿಶತದಷ್ಟು ಜನಸಂಖ್ಯೆಯನ್ನು ಒಳಗೊಂಡಿದೆ. ಇದೀಗ ಏರ್​ಟೆಲ್​ ಮತ್ತು ಜಿಯೋ ಕೂಡ ತನ್ನ ನೆಟ್​ವರ್ಕ್​ ಬಲಪಡಿಸಲು ಬಯಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment