/newsfirstlive-kannada/media/post_attachments/wp-content/uploads/2025/02/Mobile-Using.jpg)
ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ಗಳಲ್ಲಿ ಒಂದಾದ ಕಂಪನಿ ವೊಡಾಫೋನ್ ಐಡಿಯಾ. ಈಗ ವೊಡಾಫೋನ್ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ದೊಡ್ಡ ಹೆಜ್ಜೆ ಒಂದಿಟ್ಟಿದೆ. ಕೇವಲ 19 ರೂಪಾಯಿಯ ಹೊಸ ಡೇಟಾ ಪ್ಲಾನ್ ಅನ್ನು ಪರಿಚಯಿಸಿದೆ. ನೂತನ ಪ್ಲಾನ್ ಹೇಗಿದೆ ಗೊತ್ತಾ?
ವಿಐ 19 ರೂಪಾಯಿ ಬೆಲೆ ಪ್ರಿಪೇಯ್ಡ್ ಪ್ಲಾನ್ ಅನ್ನು ಘೋಷಿಸಿದೆ. ಇದು ಹೆಚ್ಚುವರಿ ಬ್ಯಾಲೆನ್ಸ್ ಅನ್ನು ಸೇರಿಸುವ ಯೋಜನೆಯಾಗಿದೆ. ಆದರೆ ಯಾವುದೇ ಕರೆ ಪ್ರಯೋಜನವನ್ನು ಈ ಪ್ಲಾನ್ ಒದಗಿಸುವುದಿಲ್ಲ.
ವೊಡಾಫೊನ್ 19 ರೂಪಾಯಿ ಪ್ಲಾನ್
ನಿಮ್ಮ ದೈನಂದಿನ ಪ್ಲಾನ್ ಮುಗಿದು 19 ರೂಪಾಯಿ ಪ್ಲಾನ್ ರೀಚಾರ್ಜ್ ಮಾಡಿದರೆ 1ಜಿಬಿ ಡೇಟಾ ಸಿಗಲಿದೆ. ಇದು ಇಂಟರ್ನೆಟ್ ಬಳಕೆದಾರರಿಗೆ ಪ್ರಯೋಜನವಾಗಲಿದೆ. ಮೊದಲ ಹೇಳಿದಂತೆ ಇದರಲ್ಲಿ ಕರೆ ಮಾಡಲು ಸಾಧ್ಯವಾಗುವುದಿಲ್ಲ.
ವಿಐ ಇದಕ್ಕೂ ಮುನ್ನ 49 ರೂಪಾಯಿ ಪ್ಲಾನ್ ಪರಿಚಯಿಸಿತ್ತು. ಈ ಯೋಜನೆ ಮೂಲಕ 20ಜಿಬಿಬ ಡೇಟಾ ನೀಡುತ್ತಿದೆ. ಇದೀಗ 19 ರೂಪಾಯಿ ಪ್ಲಾನ್ ಪರಿಚಯಿಸುವ ಮೂಲಕ ಗ್ರಾಹಕರ ಮನಗೆದ್ದಿದೆ. ಸದ್ಯ ಟೆಲಿಕಾಂ ಕಂಪನಿಗಳ ಪೈಪೋಟಿಗಳ ನಡುವೆ ವಿಐ ತನ್ನ ಗ್ರಾಹಕರನ್ನು ಸೆಳೆಯಲು ಕಡಿಮೆ ಬೆಲೆಯ ಪ್ಲಾನ್ಗಳನ್ನು ಪರಿಚಯಿಸುತ್ತಿದೆ.
ಇದನ್ನೂ ಓದಿ:ಕೆ.ಎಲ್ ರಾಹುಲ್ಗೆ ಬಿಗ್ ಶಾಕ್; ಸ್ಟಾರ್ ಬ್ಯಾಟರ್ ರಿಷಬ್ ಪಂತ್ಗೆ ಭರ್ಜರಿ ಗುಡ್ನ್ಯೂಸ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ