ಜಾತಿಗಣತಿ ಬಗ್ಗೆ ಒಕ್ಕಲಿಗ ಶಾಸಕರ ಸಭೆ.. ಡಿಕೆಶಿ ನೇತೃತ್ವದ ಮೀಟಿಂಗ್​​ನಲ್ಲಿ ಆಗಿದ್ದೇನು..?

author-image
Ganesh
Updated On
ಜಾತಿಗಣತಿ ಬಗ್ಗೆ ಒಕ್ಕಲಿಗ ಶಾಸಕರ ಸಭೆ.. ಡಿಕೆಶಿ ನೇತೃತ್ವದ ಮೀಟಿಂಗ್​​ನಲ್ಲಿ ಆಗಿದ್ದೇನು..?
Advertisment
  • ವರದಿಯ ಸಾಧಕ-ಬಾಧಕಗಳ ಬಗ್ಗೆ ಮಾತು..ಮಂಥನ
  • ಜಾತಿ ಗಣತಿ ವರದಿ ಸಂಬಂಧ ಒಕ್ಕಲಿಗರ ಶಾಸಕರ ಮೀಟಿಂಗ್
  • ಸಮುದಾಯದ ಹಿತಕ್ಕೆ ಸಿದ್ಧ ಎಂಬ ಸಂದೇಶ ರವಾನಿಸಿದ ಡಿಕೆಶಿ

ಕಾಂಗ್ರೆಸ್ ಸರ್ಕಾರದಲ್ಲೇ ಜಾತಿ ಗಣತಿ ಜಟಾಪಟಿ ತಾರಕಕ್ಕೇರಿದೆ. ಲಿಂಗಾಯತ, ಒಕ್ಕಲಿಗ ಸೇರಿ ಪ್ರಬಲ ಸಮುದಾಯಗಳು ವಿರೋಧ ವ್ಯಕ್ತಪಡಿಸಿವೆ. ಜಾತಿ ಗಣತಿ ವಿಚಾರ ರಾಜ್ಯದಲ್ಲಿ ರಾಜಕೀಯ ವಾಕ್ಸಮರಕ್ಕೆ ಪಾಯ ತೋಡಿದೆ. ಈ ನಡುವೆ ಡಿ.ಕೆ ಶಿವಕುಮಾರ್ ಒಕ್ಕಲಿಗರ ಶಾಸಕರ ಜೊತೆಗೆ ಚರ್ಚೆ ನಡೆಸಿದ್ದಾರೆ.

ಜಾತಿಗಣತಿ ಬಗ್ಗೆ ಒಕ್ಕಲಿಗ ಶಾಸಕರ ಜೊತೆ ಡಿಕೆಶಿ ಸಭೆ

ಜಾತಿಗಣತಿ ಜಟಾಪಟಿಗೆ ಪ್ರಬಲ ಒಕ್ಕಲಿಗ ಸಮುದಾಯದ ವಿರೋಧವೂ ಕಾರಣ. ಈ ನಿಟ್ಟಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಕಾಂಗ್ರೆಸ್ ಒಕ್ಕಲಿಗ ಶಾಸಕರ ಸಭೆ ನಡೆಸಿದ್ರು.

ಡಿಕೆಶಿ ಒಕ್ಕಲಿಗರ ಸಭೆ!

ಜಾತಿ ಗಣತಿ ವರದಿ ಸಂಬಂಧ ಡಿಕೆಶಿ, ಒಕ್ಕಲಿಗರ ಶಾಸಕರ ಮೀಟಿಂಗ್ ನಡೆಸಿದ್ದು, ಒಕ್ಕಲಿಗ ಸಮುದಾಯದ ಹಿತಕ್ಕೆ ಸಿದ್ಧ ಎಂಬ ಸಂದೇಶ ರವಾನೆ ಮಾಡಿದ್ದಾರೆ. ಈ ಮೀಟಿಂಗ್​​ಗೂ ಮೊದಲು ನಿರ್ಮಲಾನಂದನಾಥ ಶ್ರೀಗಳನ್ನು ಭೇಟಿಯಾಗಿ ಡಿಕೆಶಿ ಚರ್ಚೆ ನಡೆಸಿದ್ರು. ಈ ವೇಳೆ ಸಮುದಾಯದ ಹಿತ ಕಾಯುವಂತೆ ಶ್ರೀಗಳ ನಿರ್ದೇಶನ ನೀಡಿದ್ರು ಅನ್ನೋ ಮಾಹಿತಿ ಸಿಕ್ಕಿದೆ. ಈ ಬೆನ್ನಲ್ಲೇ ಒಕ್ಕಲಿಗರ ಸಭೆ ನಡೆಸಿದ ಡಿಸಿಎಂ ಡಿಕೆ ಶಿವಕುಮಾರ್ ಜಾತಿಗಣತಿ ವರದಿಯ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿದ್ರು. ವರದಿಯ ಸಾರಾಂಶದ ಬಗ್ಗೆ ಶಾಸಕರಿಗೆ ಮನವರಿಕೆ ಮಾಡಿಕೊಡಲಾಯ್ತು. ಈ ವರದಿಗೆ ಸಂಬಂಧಿಸಿದಂತೆ ಶಾಸಕರು ತಮ್ಮ ತಮ್ಮ ಅಭಿಪ್ರಾಯಗಳನ್ನ ತಿಳಿಸಿದ್ದಾರೆ. ಇದು ಒಕ್ಕಲಿಗ ನಾಯಕರ ಒಕ್ಕೊರಲ ಮಾತಾದ್ರೆ ಅತ್ತ ಲಿಂಗಾಯತ ಸಮುದಾಯವಂತೂ ಜಾತಿಗಣತಿಗೆ ಸಂಪೂರ್ಣ ವಿರೋಧವಾಗಿ ನಿಂತಿದೆ.

ಇದನ್ನೂ ಓದಿ: 1ನೇ ತರಗತಿ ಮಕ್ಕಳಿಗೆ ಅಡ್ಮಿಷನ್ ಗೊಂದಲ.. ಶಿಕ್ಷಣ ಸಚಿವರಿಂದ ಇಂದು ಗುಡ್‌ನ್ಯೂಸ್‌?

publive-image

ಸಿದ್ದರಾಮಯ್ಯ ಸರ್ಕಾರಕ್ಕೆ ಶಾಮನೂರು ನೇರ ವಾರ್ನಿಂಗ್

ಜಾತಿಗಣತಿ ವರದಿ ಜಾರಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ವಿರೋಧ ವ್ತಕ್ತಪಡಿಸಿದ್ದಾರೆ. ರಾಜ್ಯದಲ್ಲಿ ವೀರಶೈವ ಲಿಂಗಾಯತರನ್ನು ಹಾಗು ಒಕ್ಕಲಿಗರನ್ನು ಎದುರಾಕಿಕೊಂಡು ರಾಜ್ಯಭಾರ ಮಾಡೋಕೆ ಆಗುತ್ತಾ ? ಅಂತಾ ಪ್ರಶ್ನೆ ಮಾಡಿದ್ದಾರೆ. ಈ ರಾಜ್ಯದಲ್ಲಿ ಹೆಚ್ಚಿರೋದು ಲಿಂಗಾಯತರು, ನಂತರ ಬರೋದು ಒಕ್ಕಲಿಗರು.. ನಾವಿಬ್ಬರು ಸೇರಿ ಹೋರಾಟ ಮಾಡುತ್ತೇವೆ ಅಂತಾ ಶಾಮನೂರು ಶಿವಶಂಕರಪ್ಪ ಸಮರ ಸಂದೇಶ ರವಾನೆ ಮಾಡಿದ್ದಾರೆ.

ಒಟ್ಟಾರೆ ಜಾತಿಗಣತಿ ವರದಿಗೆ ಕಾಂಗ್ರೆಸ್​ ನಾಯಕರ ಜೊತೆಗೆ ಎಲ್ಲಾ ಪಕ್ಷದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಮುಖವಾಗಿ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯದ ವಿರೋಧಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಸೋನಿಯಾ, ರಾಹುಲ್ ಗಾಂಧಿಗೆ ED ಬಿಗ್ ಶಾಕ್.. ಸಂಚಲನ ಮೂಡಿಸಿದ ಚಾರ್ಜ್‌ಶೀಟ್‌..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment