newsfirstkannada.com

ಹಳೆ ಮೈಸೂರು ಭಾಗದಲ್ಲಿ ಗೌಡ್ರ ಪಾಲಿಟಿಕ್ಸ್​​.. ನಿಜವಾದ ಒಕ್ಕಲಿಗರ ನಾಯಕ ಯಾರು?

Share :

Published April 11, 2024 at 6:25am

    ಹಳೇ ಮೈಸೂರು ಭಾಗದಲ್ಲಿ ಶುರುವಾಯ್ತು ಒಕ್ಕಲಿಗ ಪಾಲಿಟಿಕ್ಸ್​

    ಒಕ್ಕಲಿಗ ಮತಗಳ ಕ್ರೂಢೀಕರಣಕ್ಕೆ ಎನ್‌ಡಿಎ ಮಾಸ್ಟರ್‌ ಪ್ಲಾನ್

    ಕಾಂಗ್ರೆಸ್​ ಬೆನ್ನಲ್ಲೇ ಮೈತ್ರಿ ಪಡೆಯಿಂದಲೂ ಶ್ರೀಗಳ ಭೇಟಿ..!

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಒಕ್ಕಲಿಗ ಪಾಲಿಟಿಕ್ಸ್‌ ಮಹತ್ವ ಪಡೆದುಕೊಂಡಿದೆ. ಮೊದಲ ಹಂತದ ಚುನಾವಣೆ ನಡೆಯುವ ಹಲವು ಕ್ಷೇತ್ರಗಳಲ್ಲಿ ಒಕ್ಕಲಿಗರದ್ದೇ ಪ್ರಾಬಲ್ಯ ಇದೆ. ಎರಡು ಬಣಗಳ ನಡುವೆ ಈ ಪಾಲಿಟಿಕ್ಸ್​​​ ಜೋರಾಗಿದೆ.. ಕಾಂಗ್ರೆಸ್​​ನ ಒಕ್ಕಲಿಗರಿಗೆ ಅನ್ಯಾಯದ ಮಾತಿಗೆ ಮೈತ್ರಿ ಪಡೆ ಕೌಂಟರ್‌ ಕೊಟ್ಟಿದೆ.. ಒಕ್ಕಲಿಗರ ಪರಮಪೂಜ್ಯ ಆದಿಚುಂಚನಗಿರಿ ಮಠದ ಅಂಗಳದಿಂದ ಸಂದೇಶ ನೀಡಿದೆ.

ಭಾರತದ ಪ್ರಜಾಪ್ರಭುತ್ವವೇ ಭಿನ್ನ. ಅದರಲ್ಲಿ ದಕ್ಷಿಣ ಭಾರತ ಗೆಲ್ಲಲು ಮತ ಧ್ರುವೀಕರಣಕ್ಕಿಂತ ಜಾತಿ ಸಮೀಕರಣ ಚದುರಂಗವನ್ನ ಬದಲಿಸಬಲ್ಲ ತಾಕತ್ತು ಹೊಂದಿದೆ. ಹಾಗಾಗೇ ಇಲ್ಲಿ ಎಲೆಕ್ಷನ್​ ಗೆಲ್ಲಲು ಜಾತಿ ಬಲ, ಹಣ ಬಲ, ತೋಳ್ಬಲ ಅನಿವಾರ್ಯ. ಕರ್ನಾಟಕದಲ್ಲಿ ಈ ಅನಿವಾರ್ಯಕ್ಕೆ ಬಿದ್ದ ಪಕ್ಷಗಳು, ಮೊದಲ ಚರಣದ 14 ಕ್ಷೇತ್ರಗಳಲ್ಲಿ ಒಕ್ಕಲಿಗ ಅಸ್ತ್ರದಲ್ಲಿ ನಿರತವಾಗಿವೆ. ಹಳೇ ಮೈಸೂರಿನ ಗೌಡಕಿಗಾಗಿ ಕಾಂಗ್ರೆಸ್​​ ಮತ್ತು ಮೈತ್ರಿ ಪಡೆ ಜಾತಿ ರಾಜಕಾರಣಕ್ಕೆ ಇಳಿದಿವೆ.

ಹಳೇ ಮೈಸೂರು ಭಾಗದಲ್ಲಿ ಶುರುವಾಯ್ತು ಒಕ್ಕಲಿಗ ಪಾಲಿಟಿಕ್ಸ್​!
ಒಕ್ಕಲಿಗ ನಾಯಕತ್ವಕ್ಕೆ ಒಳಗೊಳಗೆ ಶುರುವಾಯ್ತು ಜಂಗೀ ಕುಸ್ತಿ!

ಲೋಕ ಕದನದಲ್ಲಿ ಹಿಂದೆಂದಿಗಿಂತ ಒಕ್ಕಲಿಗ ಪಾಲಿಟಿಕ್ಸ್‌ ಮಹತ್ವ ಪಡೆದಿದೆ. ಮೊದಲ ಹಂತದ ಎಲೆಕ್ಷನ್​​ ನಡೆಯುವ ಹಲವು ಕ್ಷೇತ್ರಗಳಲ್ಲಿ ಒಕ್ಕಲಿಗರದ್ದೇ ಪ್ರಾಬಲ್ಯ ಇದೆ. ಇದೇ ಕಾರಣಕ್ಕೆ ಒಕ್ಕಲಿಗರಿಗೆ ಬಿಜೆಪಿ ಅನ್ಯಾಯ ಮಾಡಿದೆ ಅಂತ ಕಾಂಗ್ರೆಸ್​​​ನ ಅತಿರಥ ನಾಯಕರು ಸರಣಿಯಾಗಿ ಪ್ರಚಾರ ಮಾಡ್ತಿದ್ದಾರೆ. ಅದರಲ್ಲೂ ಸದಾನಂದಗೌಡ, ಪ್ರತಾಪ್‌ ಸಿಂಹ ಹೆಸರೇ ಕಾಂಗ್ರೆಸ್​​ಗೆ ದಾಳವಾಗಿದೆ.

ಒಕ್ಕಲಿಗರ ಪವರ್ ಸೆಂಟರ್ ಆಯ್ತಾ ಆದಿಚುಂಚನಗಿರಿ ಮಠ?
ಒಕ್ಕಲಿಗ ಮತಗಳ ಕ್ರೂಢೀಕರಣಕ್ಕೆ ಎನ್‌ಡಿಎ ಮಾಸ್ಟರ್‌ಪ್ಲಾನ್

ಹಳೆ ಮೈಸೂರು ಭಾಗದ ಅಭ್ಯರ್ಥಿಗಳಿಗೆ ಆದಿಚುಂಚನಗಿರಿ ಮಠ ಪವರ್​ ಸೆಂಟರ್ ಆಗಿದೆ. ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪ್ರಾಬಲ್ಯವನ್ನು ಕೊನೆಗಾಣಿಸಲು ಕಮಲ-ದಳ ಜಂಟಿ ಪ್ಲಾನ್​​​ ಆರಂಭಿಕ ಸಕ್ಸಸ್​​ ಕಂಡಿದೆ. ಒಕ್ಕಲಿಗ ಮತಗಳ ಕ್ರೋಢೀಕರಣದತ್ತ ಮೈತ್ರಿ ದೃಷ್ಟಿ ನೆಟ್ಟಿದೆ. ಆದಿ ಚುಂಚನಗಿರಿ ಮಠಕ್ಕೆ ಭೇಟಿ‌ ನೀಡಿ ಶ್ರೀಗಳ ಆಶೀರ್ವಾದ ಪಡೆಯೋ ನೆಪದಲ್ಲಿ ಸಮುದಾಯಕ್ಕೆ ಸಂದೇಶ ದಾಟಿಸಿದ್ದಾರೆ.

ಚುಂಚನಶ್ರೀ ಸಮ್ಮುಖ ದೋಸ್ತಿಗಳ ಒಗ್ಗಟ್ಟು ಪ್ರದರ್ಶನ!
ಒಕ್ಕಲಿಗ ಸಮುದಾಯಕ್ಕೆ ಮೈತ್ರಿ ಒಗ್ಗಟ್ಟಿನ ಸಂದೇಶ ರವಾನೆ

ಇನ್ನು, ದೋಸ್ತಿ ನಾಯಕರು ಹಮ್ಮುಬಿಮ್ಮು ಬಿಟ್ಟು ಒಟ್ಟಾಗಿ ಮಠಕ್ಕೆ ಆಗಮಿಸಿ ಒಗ್ಗಟ್ಟಿನ ಸಂದೇಶ ನೀಡಿದ್ರು. ಬೆಂಗಳೂರು ನಗರದ ನಾಲ್ಕು ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು, ಹಳೇ ಮೈಸೂರು ಕ್ಷೇತ್ರದ ಮೈತ್ರಿ ಅಭ್ಯರ್ಥಿಗಳಾದ ಯದುವೀರ್ ಒಡೆಯರ್, ತುಮಕೂರು ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ, ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್, ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಸಿ.ಎನ್. ಮಂಜುನಾಥ್ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ್ರು.

ಕಳೆದ ಗುರುವಾರ ಒಕ್ಕಲಿಗ ಅಸ್ತ್ರವನ್ನ ಪ್ರಯೋಗಿಸಿದ್ದ ಕೈಪಡೆ
ಚುಂಚನಗಿರಿ ಮಠಕ್ಕೆ ಭೇಟಿ, ಶ್ರೀಗಳ ಜೊತೆ ಸಿದ್ದು ಮೀಟಿಂಗ್​​​!

ಅಂದ್ಹಾಗೆ ಕಳೆದ ಗುರುವಾರವೂ ಬೆಂಗಳೂರಿನ ವಿಜಯನಗರದಲ್ಲಿರುವ ಆದಿ ಚುಂಚನಗಿರಿ ಮಠ ರಾಜಕೀಯ ಪವರ್​​ ಸೆಂಟರ್​​ ಆಗಿತ್ತು. ಆವತ್ತು ರಾತ್ರಿ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಯ ಆಶೀರ್ವಾದವನ್ನ ಸಿಎಂ ಪಡೆದಿದ್ರು. ಇದಕ್ಕೂ ಮುನ್ನ ಹಳೇ ಮೈಸೂರು ಭಾಗದ ಕೈ ಅಭ್ಯರ್ಥಿಗಳು ಮಠಕ್ಕೆ ಪ್ರದಕ್ಷಿಣೆ ಹಾಕಿದ್ರು. ಇದಕ್ಕೆ ಪ್ರತಿಯಾಗಿ ಒಕ್ಕಲಿಗ ನಾಯಕರಿಂದ ಒಗ್ಗಟ್ಟು ಪ್ರದರ್ಶನ ಆಗಿದೆ. ಒಕ್ಕಲಿಗರಿಗೆ ಅನ್ಯಾಯದ ಮಾತಿಗೆ ಕೌಂಟರ್‌ ನೀಡಲಾಗಿದೆ.

ಒಟ್ಟಾರೆ, ಹೆಚ್ಚು ಸದ್ದು ಮಾಡ್ತಿರುವ ಒಕ್ಕಲಿಗ ಅಸ್ತ್ರವೇ ಎರಡು ಪಕ್ಷಗಳಿಂದ ಪ್ರಯೋಗ ಆಗ್ತಿದೆ. ಕಾಂಗ್ರೆಸ್​​ಗೆ ಪ್ರತಿಯಾಗಿ ಒಕ್ಕಲಿಗ ನಾಯಕರಿಂದ ಶ್ರೀಗಳನ್ನ ಭೇಟಿ ಮಾಡಿ ಒಕ್ಕಲಿಗರಿಗೆ ಅನ್ಯಾಯದ ಮಾತಿಗೆ ಮೈತ್ರಿ ಟೀಂ ಕೌಂಟರ್‌ ಕೊಡ್ತಿದೆ. ಅಷ್ಟಕ್ಕೂ ಸಮುದಾಯದ ಮತ ಕ್ರೋಢೀಕರಣದ ಲೆಕ್ಕಾಚಾರ ಯಾರಿಗೆ ವರವಾಗಲಿದೆ ಅನ್ನೋದು ಬರುವ ದಿನಗಳಲ್ಲಿ ಉತ್ತರ ಸಿಗಲಿದೆ.

ಇದನ್ನೂ ಓದಿ: ಕಾಂಗ್ರೆಸ್‌ ಗೃಹಲಕ್ಷ್ಮಿ ಯೋಜನೆಯ ಹಣ ಸಹಾಯ.. ನ್ಯೂಸ್ ಫಸ್ಟ್‌ಗೆ ಟಾಪರ್‌ ವಿದ್ಯಾರ್ಥಿ ಸಂತಸ; ವಿಡಿಯೋ ವೈರಲ್‌!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಳೆ ಮೈಸೂರು ಭಾಗದಲ್ಲಿ ಗೌಡ್ರ ಪಾಲಿಟಿಕ್ಸ್​​.. ನಿಜವಾದ ಒಕ್ಕಲಿಗರ ನಾಯಕ ಯಾರು?

https://newsfirstlive.com/wp-content/uploads/2023/12/HDK-1-1.jpg

Load More