newsfirstkannada.com

ವಾಟ್ಸ್​ಆ್ಯಪ್​ನಲ್ಲಿ ವೋಟ್​ ಮಾಡಿದ ಸ್ಟೇಟಸ್​.. ಪಾಲಿಕೆ ಸದಸ್ಯನ ಮೇಲೆ ಮತದಾನ ನಿಯಮ ಉಲ್ಲಂಘನೆ‌ ಆರೋಪ

Share :

Published May 7, 2024 at 9:15am

Update May 7, 2024 at 9:20am

    ರಾಜ್ಯದ 14 ಕ್ಷೇತ್ರಗಳಲ್ಲಿಂದು ಲೋಕಸಭಾ ಚುನಾವಣೆ

    ಬಿಜೆಪಿ ಅಭ್ಯರ್ಥಿಗೆ ವೋಟ್ ಮಾಡಿ ಸ್ಟೇಟಸ್ ಹಾಕಿರೋ ಆರೋಪ

    ಪಾಲಿಕೆ ಸದಸ್ಯನೋರ್ವ ಮೇಲೆ ನಿಯಮ ಉಲ್ಲಂಘನೆ‌ ಮಾಡಿರೊ ಆರೋಪ

ಬಳ್ಳಾರಿ: ರಾಜ್ಯದ 14 ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ರಾಜ್ಯದಲ್ಲಿ 2ನೇ ಹಂತದ ಮತದಾನ ಇದಾಗಿದ್ದು, ಇಂದು ಪಾಲಿಕೆ ಸದಸ್ಯನೋರ್ವನಿಂದ ಗೌಪ್ಯ ಮತದಾನ ನಿಯಮ ಉಲ್ಲಂಘನೆ‌ಯಾಗಿರುವ ಆರೋಪ ಕೇಳಿಬಂದಿದೆ.

ಬಳ್ಳಾರಿಯಲ್ಲಿ ಮಹಾನಗರ ಪಾಲಿಕೆ ಸದಸ್ಯ ಕೋನಂಕಿ ತಿಲಕ್ ರಿಂದ ಗೌಪ್ಯ ಮತದಾನ ನಿಯಮ ಉಲ್ಲಂಘನೆ ಆರೋಪ ಕೇಳಿಬಂದಿದೆ. ಪಾಲಿಕೆ ಸದಸ್ಯನೋರ್ವ ಬಿಜೆಪಿ ಅಭ್ಯರ್ಥಿಗೆ ವೋಟ್ ಮಾಡಿ ವಾಟ್ಸಪ್ ಸ್ಟೇಟಸ್ ಹಾಕಿದ್ದಾರೆ.

ಬಳ್ಳಾರಿಯ 10 ನೇ ವಾರ್ಡ್ ನ ಪಾಲಿಕೆ ಸದಸ್ಯ ಕೋನಂಕಿ ತಿಲಕ್ ವೋಟ್ ಮಾಡಿ ಪೋಟೋ ತೆಗೆದುಕೊಂಡು ವಾಟ್ಸಪ್ ಸ್ಟೇಟಸ್ ಹಾಕಿದ್ದಾರೆ ಎನ್ನಲಾಗುತ್ತಿದೆ. ಇವಿಎಂ ಮಿಷನ್ ನಲ್ಲಿರುವ ಬಿಜೆಪಿಯ ಕಮದ ಚಿನ್ನೆ ಬಟನ್ ಮೇಲೆ ಬೆರಳಿಟ್ಟು ಪೋಟೋ ಕ್ಲಿಕ್ಕಿಸಿದ್ದಾರೆ.

ಇದನ್ನೂ ಓದಿ: ಬೆಣಚು ಕಲ್ಲುಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ಲಾರಿ ಪಲ್ಟಿ.. ಕಲ್ಲಿನಡಿಗೆ ಬಿದ್ದು ಮೂವರು ಸಾವು, ಮತ್ತಿಬ್ಬರು ಗಂಭೀರ

ಬಿಜೆಪಿ ಅಭ್ಯರ್ಥಿಯೊಬ್ಬರಿಗೆ ಮತ ಚಲಾಯಿಸಿದೆ ಎಂದು ಪೋಟೋ ಕ್ಯಾಪ್ಷನ್ ಕೊಟ್ಟು ವಾಟ್ಯಾಪ್​ ಸ್ಟೇಟಸ್​ ಹಾಕಿದ್ದಾರೆ. ಜನಪ್ರತಿನಿಧಿಯಿಂದಲೇ ಈ ನಿಯಮ ಉಲ್ಲಂಘನೆಯಾಗಿದೆ ಎಂಬ ಮಾತು ಕೇಳಿಬಂದಿದ್ದು, ಇದಕ್ಕೆ ಚುನಾವಣೆ ಅಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಳ್ಳಿದ್ದಾರೆ ಎಂದು ತಿಳಿದುಬರಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾಟ್ಸ್​ಆ್ಯಪ್​ನಲ್ಲಿ ವೋಟ್​ ಮಾಡಿದ ಸ್ಟೇಟಸ್​.. ಪಾಲಿಕೆ ಸದಸ್ಯನ ಮೇಲೆ ಮತದಾನ ನಿಯಮ ಉಲ್ಲಂಘನೆ‌ ಆರೋಪ

https://newsfirstlive.com/wp-content/uploads/2024/05/tilak.jpg

Load More