‘ಮನೆಗೆ ಬರ್ಲಾ ಎಂದೆ, ಬೇಡ ಮೇಡಂ ಇದ್ದಾರೆ ಅಂದ್ರು..’ ಹತ್ಯೆ ಆಗುವ ಮೊದಲು ಓಂ ಪ್ರಕಾಶ್ ಮಾತಾಡಿದ್ದೇನು..?

author-image
Veena Gangani
Updated On
‘ಮನೆಗೆ ಬರ್ಲಾ ಎಂದೆ, ಬೇಡ ಮೇಡಂ ಇದ್ದಾರೆ ಅಂದ್ರು..’ ಹತ್ಯೆ ಆಗುವ ಮೊದಲು ಓಂ ಪ್ರಕಾಶ್ ಮಾತಾಡಿದ್ದೇನು..?
Advertisment
  • ಮಾನಸಿಕ ಸ್ಥಿಮಿತ ಕಳೆದುಕೊಂಡಿರೋ ಪಲ್ಲವಿ ಪೊಲೀಸ್​ ವಶಕ್ಕೆ
  • ತಮ್ಮದೇ ಪತ್ನಿಯಿಂದ ಹತ್ಯೆಯಾದ ನಿವೃತ್ತ ಐಪಿಎಸ್ ಓಂ ಪ್ರಕಾಶ್‌
  • ನಿವೃತ್ತ ಐಪಿಎಸ್ ಓಂ ಪ್ರಕಾಶ್‌ ಮನೆಯೊಳಗಿನ ವಾತಾವರಣ ಹೇಗಿತ್ತು?

ಬೆಂಗಳೂರು: ನಿವೃತ್ತ ಐಪಿಎಸ್ ಓಂ ಪ್ರಕಾಶ್‌ ಬರ್ಬರ ಕೊಲೆಯಾಗಿದ್ದಾರೆ. ತಮ್ಮದೇ ಪತ್ನಿಯಿಂದ ಹತ್ಯೆಯಾದ ಶಂಕೆ ಮೂಡಿದೆ. ಮಾನಸಿಕ ಸ್ಥಿಮಿತ ಕಳೆದುಕೊಂಡಿರೋ ಪಲ್ಲವಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಲೆಯಲ್ಲಿ ಮಗಳ ಪಾತ್ರವೂ ಇದ್ಯಾ ಎಂಬ ಅನುಮಾನ ಕಾಡ್ತಿದ್ದು, ವಿಚಾರಣೆ ನಡೆದಿದೆ.

ಇದನ್ನೂ ಓದಿ: ಓಂ ಪ್ರಕಾಶ್​ ಬರ್ಬರ ಹತ್ಯೆ; ಪೊಲೀಸರಿಗೆ ಮೂಡಿದ ಅನುಮಾನಗಳು ಏನು..?

publive-image

ಓಂ ಪ್ರಕಾಶ್ ಅವರು ಕೊಲೆಯಾಗೋ ಮೊದಲು ವಿವಿಐಪಿ ಸೆಕ್ಯೂರಿಟಿ ಇನ್ಸ್​​ಪೆಕ್ಟರ್ ಶ್ರೀನಿವಾಸ್ ಜೊತೆ ಕೆಲ ಹೊತ್ತಿ ಫೋನ್​ನಲ್ಲಿ ಮಾತಾಡಿದ್ದಾರೆ. ಅಲ್ಲದೇ ಮನೆಯೊಳಗಿನ ವಾತಾವರಣ ಹೇಗಿತ್ತು ಎಂಬುವುದರ ಬಗ್ಗೆ ವಿವರಿಸಿದ್ದಾರೆ.

publive-image

ಇನ್ಸ್​​ಪೆಕ್ಟರ್ ಶ್ರೀನಿವಾಸ್ ಹೇಳಿದ್ದೇನು?

3:05 ನಿಮಿಷಕ್ಕೆ ಕಾಲ್ ಮಾಡಿದ್ರು, ತುಂಬಾ ಹೊತ್ತು ಚೆನ್ನಾಗಿ ಮಾತನಾಡಿದ್ರು. ಮನೆಗೆ ಬರ್ತೀನಿ ಸಾರ್ ಅಂದೆ, ಬೇಡ ಮನೆಯಲ್ಲಿ ಮೇಡಂ ಇದಾರೆ ಅಂದ್ರು. ತುಂಬಾ ಕ್ರೂರವಾಗಿ ಕೊಲೆ ಮಾಡಿದ್ದಾರೆ. ಕೊಲೆ ಹಿಂದಿನ ಉದ್ದೇಶ ಗೊತ್ತಾಗಿಲ್ಲ. ಕುತ್ತಿಗೆ ಭಾಗಕ್ಕೆ ಎರಡು ಬಾರಿ ಇರಿದಿದ್ದಾರೆ. ತಲೆಗೂ ಕೂಡ ಚಾಕು ಹಾಕಿದ್ದಾರೆ. ಅವರು ಒಳ್ಳೆಯ ಅಧಿಕಾರಿ, ಇವರೇನಾ ಕೊಲೆ ಆಗಿರೋದು ಅಂತ ಅನಿಸ್ತಿದೆ. ಫ್ಯಾಮಿಲಿ ವಿಚಾರದ ಬಗ್ಗೆ ಗೊತ್ತಿಲ್ಲ, ಆದ್ರೆ ಮಾನಸಿಕವಾಗಿ ಹೆಚ್ಚಾಗಿ ನೊಂದಿದ್ರು. ಲಕ್ಷಾಂತರ ರೂ. ಖರ್ಚು ಮಾಡಿ ಟ್ರೀಟ್​ಮೆಂಟ್ ಮಾಡಿಸ್ತಾ ಇದೀನಿ ಅಂದಿದ್ರು. ಸಾಹೇಬ್ರು (ಓಂ ಪ್ರಕಾಶ್​​) ಯಾರನ್ನಾದ್ರೂ ಭೇಟಿಯಾದ್ರೆ ಮೇಡಂಗೆ ಆಗ್ತಿರಲಿಲ್ಲ. ಮೇಡಂ ಅವರು ಮನೆಯ ಬಳಿ ಬರೋದಕ್ಕೆ ನಮಗೂ ಸಹ ಬಿಡ್ತಾ ಇರಲಿಲ್ಲ. ಹೆಂಡತಿಯ ಕಾಟಕ್ಕೆ ಸಾಹೇಬ್ರು (ಓಂ ಪ್ರಕಾಶ್​​) ಬೇಸತ್ತು ಹೋಗಿದ್ರು ಅನ್ಸುತ್ತೆ ಎಂದರು.

publive-image

ನಿವೃತ್ತ ಡಿಜಿ & ಐಜಿಪಿ ಓಂ ಪ್ರಕಾಶ್​ರ ಬರ್ಬರ ಹತ್ಯೆ ಪ್ರಕರಣಕ್ಕೆ ಸಬಂಧಿಸಿದಂತೆ, ಹೆಚ್​ಎಸ್​ಆರ್ ಲೇಔಟ್​ನಲ್ಲಿರುವ ಓಂ ಪ್ರಕಾಶ್​ರ ಮನೆಯಲ್ಲಿ ಎಫ್ಎಸ್ಎಲ್ ತಂಡ ಪರಿಶೀಲನೆ ನಡೆಸಿದೆ. ಕ್ರೈಂ ಸೀನ್ ನಲ್ಲಿ ಸಾಕ್ಷಿ ಸಂಗ್ರಹಿಸಿ ಎಫ್ಎಸ್ಎಲ್ ಟೀಂ, ಕೊಲೆ ಸ್ಥಳದಲ್ಲಿ ಸಿಕ್ಕಿ ಎಲ್ಲಾ ವಸ್ತುಗಳನ್ನು ಸಂಗ್ರಹಿಸಿದೆ. ಕ್ರೈಂ ಸೀನ್​ನಲ್ಲಿ ಸಿಕ್ಕಿರುವ ರಕ್ತದ ಸ್ಯಾಂಪಲ್, ಕೂದಲು, ಸೇರಿದಂತೆ ಪ್ರತಿಯೊಂದನ್ನ ಸಂಗ್ರಹಿಸಿರುವ ಅಧಿಕಾರಿಗಳು, ಸಂಗ್ರಹಿಸಿರುವ ಎಲ್ಲಾ ಸ್ಯಾಂಪಲ್ ವರದಿಯನ್ನ ಪೊಲೀಸರಿಗೆ ನೀಡಲಿದ್ದಾರೆ. ಈಗಾಗಲೇ ಕೊಲೆ ನಡೆದ ಮನೆಯ ಗ್ರೌಂಡ್ ಫ್ಲೋರ್ ಅನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಮನೆಯ ಮೊದಲ ಫ್ಲೋರ್ ನಲ್ಲಿ ಓಂ ಪ್ರಕಾಶ್ ಮಗ ಮತ್ತು ಸೊಸೆ ವಾಸವಿದ್ದಾರೆ. ಅದ್ಯ ಸಾಕ್ಷಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಪೊಲೀಸರು ಗ್ರೌಂಡ್ ಫ್ಲೋರ್ ಸೀಜ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment