newsfirstkannada.com

ಇಂದಿನ ಪಂದ್ಯದಿಂದ ಮ್ಯಾಕ್ಸಿ ಔಟ್​​​​; ಆರ್​​​ಸಿಬಿ ತಂಡದಲ್ಲಿ ಕರ್ನಾಟಕದ ಸ್ಟಾರ್​​ ಪ್ಲೇಯರ್​​ಗೆ ಅವಕಾಶ

Share :

Published April 6, 2024 at 5:28pm

  ಇಂದು ಜೈಪುರ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಹೈವೋಲ್ಟೇಜ್​ ಮ್ಯಾಚ್​​

  ಆರ್​​​ಸಿಬಿ, ರಾಜಸ್ತಾನ್​ ರಾಯಲ್ಸ್​ ಮಧ್ಯೆ ನಡೆಯಲಿದೆ ರೋಚಕ ಪಂದ್ಯ!

  ಮಹತ್ವದ ಪಂದ್ಯದಿಂದ ಸ್ಟಾರ್​ ಆಲ್​​ರೌಂಡರ್​​ ಗ್ಲೆನ್​ ಮ್ಯಾಕ್ಸ್​ವೆಲ್​ ಔಟ್​?

2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ 17ನೇ ಸೀಸನ್​​ ಶುರುವಾಗಿ ಇಂದಿಗೆ 15 ದಿನಗಳು ಕಳೆದವು. ಇಂದು ನಡೆಯಲಿರೋ 19ನೇ ಐಪಿಎಲ್​ ಪಂದ್ಯದಲ್ಲಿ ​ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ರಾಜಸ್ಥಾನ್​ ರಾಯಲ್ಸ್ ತಂಡಗಳು ಮುಖಾಮುಖಿ ಆಗಲಿವೆ. ಈ ಹೈವೋಲ್ಟೇಜ್​​ ಪಂದ್ಯಕ್ಕೆ ಸವಾಯಿ ಮಾನ್ಸಿಂಗ್​ ಮೈದಾನ ಸಾಕ್ಷಿಯಾಗಲಿದೆ. ಹೀಗಾಗಿ ಇಂದಿನ ಆರ್​​​ಸಿಬಿ ಪ್ಲೇಯಿಂಗ್​ ಎಲೆವೆನ್​​ನಲ್ಲಿ ಭಾರೀ ಬದಲಾವಣೆ ಮಾಡೋ ಸಾಧ್ಯತೆ ಇದೆ.

ಸತತ 3 ಸೋಲಿನಿಂದ ಕಂಗೆಟ್ಟ ಆರ್​​ಸಿಬಿಗೆ ಪ್ಲೇಯಿಂಗ್​ 11 ಆಯ್ಕೆಯದ್ದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆರ್​​ಸಿಬಿ ಸ್ಟಾರ್ ಆಟಗಾರರೇ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ಸ್ಟಾರ್​ ಆಲ್​ರೌಂಡರ್​ ಮ್ಯಾಕ್ಸಿ ಕಳೆದ 4 ಪಂದ್ಯಗಳಲ್ಲೂ ಕಳಪೆ ಪ್ರದರ್ಶನ ನೀಡಿದ್ದು, ಕೇವಲ 31 ರನ್​ ಗಳಿಸಿದ್ದಾರೆ. ಹಾಗಾಗಿ ಆರ್​ಸಿಬಿ ಮ್ಯಾಕ್ಸ್​​ವೆಲ್​ ಅವರನನ್ನು ಕೈ ಬಿಟ್ಟು, ಕನ್ನಡಿಗೆ ವೈಶಾಕ್​ ವಿಜಯ್​ ಕುಮಾರ್​ಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಕಳೆದ 4 ಪಂದ್ಯಗಳಲ್ಲಿ ಮ್ಯಾಕ್ಸ್‌ವೆಲ್ ಗಳಿಸಿದ ಸ್ಕೋರ್ 0, 3, 28, 0 ಆಗಿದೆ. ಇವರ ಕಳಪೆ ಪ್ರದರ್ಶನ RCB ಗೆಲುವಿನ ಸಾಧ್ಯತೆಯನ್ನು ಕಡಿಮೆ ಮಾಡುತ್ತಿದೆ. ಹೀಗಾಗಿ ಮ್ಯಾಕ್ಸಿ ಬದಲಿಗೆ ಕನ್ನಡಿಗ ವೈಶಾಕ್​​ ವಿಜಯ್​ ಕುಮಾರ್​ಗೆ ಅವಕಾಶ ನೀಡಲಿ ಎಂಬುದು ಎಲ್ಲರ ಒತ್ತಾಯ.

ಇದನ್ನೂ ಓದಿ: RCB vs RR; ಚಹಲ್​ ಕಾಮಿಡಿಗೆ ಬಿದ್ದು ಬಿದ್ದು ನಕ್ಕ ವಿರಾಟ್ ಕೊಹ್ಲಿ, ಮ್ಯಾಕ್ಸ್​ವೆಲ್

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಇಂದಿನ ಪಂದ್ಯದಿಂದ ಮ್ಯಾಕ್ಸಿ ಔಟ್​​​​; ಆರ್​​​ಸಿಬಿ ತಂಡದಲ್ಲಿ ಕರ್ನಾಟಕದ ಸ್ಟಾರ್​​ ಪ್ಲೇಯರ್​​ಗೆ ಅವಕಾಶ

https://newsfirstlive.com/wp-content/uploads/2024/04/Maxwell_RCB12.jpg

Load More