newsfirstkannada.com

W 0 W W 4 W: ಒಂದೇ ಓವರ್​​ನಲ್ಲಿ ಸಿರಾಜ್ ಐತಿಹಾಸಿಕ ಸಾಧನೆ; ಪಂದ್ಯ ಮುಗಿದ ಮೇಲೂ ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದ..!

Share :

Published September 18, 2023 at 12:53pm

    ಸಿರಾಜ್ ಹೃದಯ ವೈಶಾಲ್ಯತೆಗೆ ವಿಶ್ವವೇ ಸಲಾಂ

    ಪಂದ್ಯಶ್ರೇಷ್ಠ ಅವಾರ್ಡ್​ನ ಹಣ ನೀಡಿದ್ದು ಯಾರಿಗೆ..?

    ಮೊಹ್ಮದ್ ಸಿರಾಜ್ ಬೌಲಿಂಗ್​​ಗೆ ವಿಶ್ವವೇ ಸಲಾಂ..!

ಅಬ್ಬಾ..! ಏನ್ ಬೌಲಿಂಗ್ ಗುರು.. ನಿನ್ನೆ ಏಷ್ಯಾಕಪ್​ ಫೈನಲ್​ನ ಪಂದ್ಯ ವೀಕ್ಷಿಸಿದ ಪ್ರತಿ ಪ್ರೇಕ್ಷಕನ ಬಾಯಲ್ಲಿ ಬರ್ತಿದ್ದ ಮಾತು. ಇದಕ್ಕೆ ಕಾರಣ ಮಿಯಾ ಮ್ಯಾಜಿಕ್​.. ಅಕ್ಷರಶಃ ಮಿಸೈಲ್​ನಂತ ಎಸೆತಗಳಿಂದ ಕೆಂಗ್ಗಡಿಸಿದ ಸಿರಾಜ್, ಸಿಂಹಸ್ವಪ್ನರಾಗಿ ಕಾಡಿದ್ರು. ಹಾಗಾದ್ರೆ ಹೇಗಿತ್ತು..? ಲಂಕಾ ಎದುರು ಸಿರಾಜ್​ನ ರೌದ್ರವತಾರ ಇದು!

ಸಿರಾಜ್ ದಾಳಿಗೆ ಸಿಂಹಳೀಯರ ತತ್ತರ..!

ಏಷ್ಯಾಕಪ್​​ನ ಫೈನಲ್​ನಲ್ಲಿ ಸಿಂಹಳೀಯರಿಗೆ ಸಿಂಹಸ್ವಪ್ನವಾಗಿ ಕಾಡಿದ್ದು ಮೊಹಮ್ಮದ್ ಸಿರಾಜ್​. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ಗೇಮ್​​ಪ್ಲಾನ್​ನ​ ಕ್ಷಣಾರ್ಧದಲ್ಲೇ ಉಡೀಸ್ ಮಾಡಿದ್ರು. ಸಿರಾಜ್​ ಮಾರಕ ದಾಳಿಗೆ ತತ್ತರಿಸಿದ ಶ್ರೀಲಂಕಾ ದಿಕ್ಕಾಪಾಲಾಯ್ತು.

2ನೇ ಓವರ್​​ನಲ್ಲಿ 4 ವಿಕೆಟ್ ಬೇಟೆ

ಮಿಸೈಲ್​​ನಂಥಹ ಎಸೆತಗಳಿಂದಲೇ ಕಂಗ್ಗಡಿಸಿದ ಸಿರಾಜ್, ಮೇಡನ್​ನೊಂದಿಗೆ ಶುಭಾರಂಭ ಮಾಡಿದ್ರು. 2ನೇ ಓವರ್​ನಲ್ಲಿ ದಾಳಿಗಿಳಿದ ಸಿರಾಜ್​, ಮೊದಲ ಎಸೆತದಲ್ಲಿ ನಿಸ್ಸಾಂಕ ವಿಕೆಟ್ ಉರುಳಿಸಿದ್ರೆ. 2ನೇ ಎಸೆತ ಡಾಟ್ ಮಾಡಿಸುವಲ್ಲಿ ಯಶಸ್ವಿಯಾದ್ರು. ನಂತರದ 3 ಹಾಗೂ 4ನೇ ಎಸೆತದಲ್ಲಿ ಸಮರವಿಕ್ರಮ ಹಾಗೂ ಅಸಲಂಕಾಗೆ ಪೆವಿಲಿಯನ್​​​ ದಾರಿ ತೋರಿದ ಸಿರಾಜ್​​​​ಗೆ, ಹ್ಯಾಟ್ರಿಕ್ ವಿಕೆಟ್ ಉರುಳಿಸುವ ಸುವರ್ಣಾವಕಾಶ ಮುಂದಿತ್ತು.

5ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಧನಜಂಯ್ ಡಿಸಿಲ್ವಾ, ಹ್ಯಾಟ್ರಿಕ್​​ಗೆ ಅನುವು ಮಾಡಿಕೊಡಲಿಲ್ಲ. ಮರು ಎಸೆತದಲ್ಲೇ ವಿಕೆಟ್ ಹಿಂದೆ ಕ್ಯಾಚ್ ನೀಡಿ ಹೊರನಡೆದ್ರು. ಇದರೊಂದಿಗೆ 2ನೇ ಓವರ್​ನಲ್ಲಿ 4 ರನ್ ನೀಡಿ 4 ವಿಕೆಟ್ ಉರುಳಿಸಿ ಲಂಕಾ ಬ್ಯಾಟಿಂಗ್ ಶಕ್ತಿಯನ್ನೇ ಬುಡಮೇಲು ಮಾಡಿದ್ರು.

ODI ಕರಿಯರ್​ನಲ್ಲೇ ಸಿರಾಜ್ ಬೆಸ್ಟ್​ ಸ್ಪೆಲ್

ಫೈನಲ್ ಪಂದ್ಯದಲ್ಲಿ ಅದ್ಭುತ ದಾಳಿ ನಡೆಸಿದ ಸಿರಾಜ್, ಏಕದಿನ ವೃತ್ತಿ ಜೀವನದ ಶ್ರೇಷ್ಠ ಪ್ರದರ್ಶನ ನೀಡಿದರು. 7 ಓವರ್​ನಲ್ಲಿ 1 ಮೇಡನ್ ಸಹಿತ 21 ರನ್ ನೀಡಿ 6 ಪ್ರಮುಖ ವಿಕೆಟ್ ಉರುಳಿಸಿದ ಸಿರಾಜ್, ಏಕದಿನ ಕ್ರಿಕೆಟ್​ ಕರಿಯರ್​ನಲ್ಲಿ ಅತ್ಯದ್ಭುತ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾದರು.

ಏಷ್ಯಾಕಪ್ ಇತಿಹಾಸದಲ್ಲಿ ಸಿರಾಜ್ ದಾಖಲೆ..!​

21 ರನ್​​ಗೆ 6 ವಿಕೆಟ್ ಉರುಳಿಸಿದ ಸಿರಾಜ್, ಏಷ್ಯಾಕಪ್​​ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ 2ನೇ ಬೌಲರ್ ಎನಿಸಿದರು. ಈ ಹಿಂದೆ 13 ರನ್​ಗೆ 6 ವಿಕೆಟ್ ಉರುಳಿಸಿದ್ದ ಲಂಕಾದ ಅಜಂತಾ ಮೆಂಡಿಸ್, ಮೊದಲಿಗರು ಎನಿಸಿದ್ರು. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಏಷ್ಯಾಕಪ್​​​ ಫೈನಲ್​​ನಲ್ಲಿ ಈ ಸಾಧನೆ ಮಾಡಿದ ಏಕೈಕ ಬೌಲರ್ ಎನಿಸಿದ್ರು.

ಸಿರಾಜ್ ಬೌಲಿಂಗ್​​ಗೆ ಶಹಬ್ಬಾಸ್ ಗಿರಿ..!

ಏಷ್ಯಾಕಪ್​ ಫೈನಲ್​ನಲ್ಲಿ ಮೊಹ್ಮಮದ್ ಸಿರಾಜ್​ರ​​​ ಪವರ್ ಸ್ಪೆಲ್​ಗೆ ವಿಶ್ವವೇ ನಿಬ್ಬೆರಗಾಯ್ತು. ಫೈನಲ್​​ನಂತಹ ಒತ್ತಡದ ಪಂದ್ಯದಲ್ಲಿ ಸಿರಾಜ್​ ಹಾಕಿದ ಪವರ್​ಫುಲ್ ಸ್ಪೆಲ್​ಗೆ ದಿಗ್ಗಜ ಕ್ರಿಕೆಟಿಗರು, ಕ್ರಿಕೆಟ್ ಎಕ್ಸ್​ಪರ್ಟ್ಸ್​ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಗುಣಗಾನ ಮಾಡಿದ್ರು.

ಸಿರಾಜ್ ಹೃದಯ ವೈಶಾಲ್ಯತೆಗೆ ವಿಶ್ವವೇ ಸಲಾಂ..!

ನಿನ್ನೆ ಮೊಹಮ್ಮದ್ ಸಿರಾಜ್, ಬೌಲಿಂಗ್​ನಿಂದಲೇ ಮಾತ್ರವಲ್ಲ. ತನ್ನ ಹೃದಯ ವೈಶಾಲ್ಯತೆಯಿಂದಲೂ ಎಲ್ಲರ ಮನಗೆದ್ದರು. ಯಾಕಂದ್ರೆ ತನ್ನ ಅದ್ಭುತ ಪ್ರದರ್ಶನಕ್ಕೆ ಸಂದಿದ್ದ ಪಂದ್ಯ ಶ್ರೇಷ್ಠ ಪ್ರಶಸ್ತಿ ಹಣವನ್ನ, ಟೂರ್ನಿಯುದ್ದಕ್ಕೂ ಬೆವರು ಹರಿಸಿದ್ದ ಗ್ರೌಂಡ್ಸ್​ಮೆನ್​​ಗೆ ನೀಡುವುದಾಗಿ ಘೋಷಿಸಿದರು. ಒಟ್ನಲ್ಲಿ, ಆನ್​ಫೀಲ್ಡ್​ನಲ್ಲಿ ಫೈರಿ ಸ್ಪೆಲ್ ಮೂಲಕ ಮೆರೆದಾಡಿದ ಮೊಹಮ್ಮದ್ ಸಿರಾಜ್, ಆಫ್​ ದಿ ಫೀಲ್ಡ್​ನಲ್ಲಿ ರಿಯಲ್ ಹೀರೋ ಆಗಿ ಎಲ್ಲರ ಹೃದಯ ಗೆದ್ದಿದ್ದು ಸುಳ್ಳಲ್ಲ.

ವಿಶೇಷ ವರದಿ: ಸಂತೋಷ್

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

W 0 W W 4 W: ಒಂದೇ ಓವರ್​​ನಲ್ಲಿ ಸಿರಾಜ್ ಐತಿಹಾಸಿಕ ಸಾಧನೆ; ಪಂದ್ಯ ಮುಗಿದ ಮೇಲೂ ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದ..!

https://newsfirstlive.com/wp-content/uploads/2023/09/SIRAJ-3.jpg

Load More