Advertisment

ಬರಿಗಾಲಲ್ಲಿ ಹುಲ್ಲು ಹಾಸಿನ ಮೇಲೆ ವಾಕಿಂಗ್; ಏನೆಲ್ಲಾ ಆರೋಗ್ಯದ ಪ್ರಯೋಜನಗಳಿವೆ ಗೊತ್ತಾ?

author-image
Gopal Kulkarni
Updated On
ಬರಿಗಾಲಲ್ಲಿ ಹುಲ್ಲು ಹಾಸಿನ ಮೇಲೆ ವಾಕಿಂಗ್; ಏನೆಲ್ಲಾ ಆರೋಗ್ಯದ ಪ್ರಯೋಜನಗಳಿವೆ ಗೊತ್ತಾ?
Advertisment
  • ಬರಿಗಾಲಿನಲ್ಲಿ ಹುಲ್ಲು ಹಾಸಿನ ಮೇಲೆ ನಡೆಯುವುದರಿಂದ ಇವೆ ಲಾಭಗಳು
  • ಒತ್ತಡ, ಆತಂಕಗಳು ದೂರ, ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ ಈ ರೂಢಿ
  • ನಿತ್ಯ ಹೀಗೆ ವಾಕಿಂಗ್ ಮಾಡುವುದರಿಂದ ಅನೇಕ ಮಾನಸಿಕ ಸಮಸ್ಯೆ ದೂರ

ಕಲ್ಪನೆ ಮಾಡಿಕೊಳ್ಳಿ, ತಂಪಾದ ವಾತಾವರಣ, ಆಚೆ ನೀವು ವಾಕಿಂಗ್ ಹೋಗಿದ್ದೀರಾ, ಮೆತ್ತನೆಯ ಹುಲ್ಲು ಹಾಸು ನಿಮ್ಮ ಪಾದದ ಕೆಳಗೆ ಇದೆ. ಬರಿಗಾಲಲ್ಲಿ ನೀವು ಅದರ ಮೇಲೆ ನಡೆಯುತ್ತಿದ್ದೀರಾ. ಎಂತಹ ಸುಂದರ ಅನುಭವ ಅಲ್ವಾ? ಆದ್ರೆ ನಿಮಗೆ ಗೊತ್ತಿರಲಿ. ಈ ರೀತಿ ಹುಲ್ಲು ಹಾಸಿನ ಮೇಲೆ ನಡೆಯುವುದರಿಂದ ಕೇವಲ ಮನಸಿಗೆ ಮುದ ನೀಡುವುದು ಮಾತ್ರವಲ್ಲ ಹಲವು ಆರೋಗ್ಯಕರ ಪ್ರಯೋಜನಗಳು ಕೂಡ ಇವೆ. ಈ ರೀತಿ ಬರಿಗಾಲಿನಲ್ಲಿ ಹುಲ್ಲಿನ ಮೇಲೆ ನಡೆಯುವುದರಿಂದ ನಮ್ಮ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ ಎಂದು ಅನೇಕ ತಜ್ಞರು ಹೇಳುತ್ತಾರೆ. ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಸುಧಾರಣೆ ಜೊತೆ ಜೊತೆಗೆ ಒಂದು ರೀತಿಯ ನಿರಾಳ ಸ್ಥಿತಿಯನ್ನು ಕೂಡ ಈ ಒಂದು ಅನುಭವ ತಂದು ಕೊಡುತ್ತದೆ ಎಂದು ಹೇಳಲಾಗುತ್ತದೆ.

Advertisment

ಹೀಗೆ ಬರಿಗಾಲಿನ ಮೇಲೆ ಹುಲ್ಲು ಹಾಸಿನ ಮೇಲೆ ನಡೆಯುವುದರಿಂದ ಅನೇಕ ಮಾನಸಿಕ ಸಮಸ್ಯೆಗಲು ದೂರವಾಗುತ್ತವೆ. ಇದನ್ನೂ ನಿತ್ಯ ರೂಢಿಯನ್ನಾಗಿ ಮಾಡಿಕೊಳ್ಳುವುದರಿಂದ ಆಗುವ ಪ್ರಯೋಜನಗಳನ್ನು ಒಮ್ಮೆ ನೋಡುವುದಾದ್ರೆ.

ಒತ್ತಡ ಮತ್ತು ಆತಂಕಗಳನ್ನು ದೂರ ಮಾಡುತ್ತದೆ
ನಿತ್ಯ ಬರಿಗಾಲಿನಲ್ಲಿ ಹುಲ್ಲುಗಾವಲಿನ ಮೇಲೆ ನಡೆಯುವುದರಿಂದ ನಿಮಗೆ ಒಂದು ನಿರಾಳತೆಯ ಅನುಭವ ದೊರಕುವುದರೊಂದಿಗೆ ಒತ್ತಡ (Stress) ಹಾಗೂ ಆತಂಕ( anxiety)ದಂತಹ ಮಾನಸಿಕ ಸಮಸ್ಯೆಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ಹುಲ್ಲು ಹಾಸಿನ ಮೇಲೆ ಹೀಗೆ ಬರಿಗಾಲಿನಿಂದ ನಡೆಯುವುದರಿಂದ ಪಾದದ ಹಲವು ಭಾಗಗಳ ಮೇಲೆ ಒತ್ತಡ ಬೀಳುವುದರಿಂದಾಗಿ ಅದು ದೇಹದ ವಿವಿಧ ಭಾಗಗಳಿಗೆ ಲಿಂಕ್​ ಆಗುತ್ತದೆ. ಈ ಒಂದು ನಡಿಗೆ ನಮ್ಮ ಒತ್ತಡ ಹಾಗೂ ಆತಂಕಗಳಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ ಎಂದು ಮಾನಸಿಕ ತಜ್ಞರು ಹೇಳುತ್ತಾರೆ. ಹುಲ್ಲಿನ ಮೇಲೆ ಹೀಗೆ ನಡೆಯುವುದರಿಂದ ಪಾದಕ್ಕೆ ಒಂದು ವಿಭಿನ್ನ ರೀತಿಯ ನೈಸರ್ಗಿಕ ಮಸಾಜ್ ಒದಗಿದಂತಾಗುವುದರಿಂದ ನಿರಾಳತೆಯೊಂದಿಗೆ ಅನೇಕ ಸಮಸ್ಯೆಗಳು ಪರಿಹಾರವಾಗುತ್ತವೆ.

ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ
ರಾತ್ರಿ ನಿದ್ರೆ ಬರೆದೇ ಒದ್ದಾಡುತ್ತಿರುವವರು ಈ ರೀತಿಯ ಒಂದು ವಾಕಿಂಗ್ ನಿತ್ಯ ಮಾಡಬೇಕು. ಇದು ನಿಮ್ಮ ನಿದ್ದೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಬರಿಗಾಲಿನಲ್ಲಿ ಹುಲ್ಲು ಹಾಸಿನ ಮೇಲೆ ನಡೆಯುವುದರಿಂದ ನಮ್ಮ ದೇಹವು ಭೂಮಿಯಲ್ಲಿರುವ ನೈಸರ್ಗಿಕ ಇಲೆಕ್ಟ್ರಾನ್​ಗಳನ್ನು ಹೀರಿಕೊಳ್ಳುತ್ತದೆ. ಇದು ನಮ್ಮ ದೇಹದಲ್ಲಿ ಮೆಲಾಟೊನಿನ್​ ಉತ್ಪಾದನೆಯಾಗಲು ಸಹಕಾರಿಯಾಗುತ್ತದೆ. ಇದರಿಂದ ನಮ್ಮ ನಿದ್ರೆಯ ಗುಣಮಟ್ಟವೂ ಕೂಡ ಸುಧಾರಿಸುತ್ತದೆ.

Advertisment

ಮನಸ್ಥಿತಿಯನ್ನು ಸುಧಾರಿಸಿ ಭಾವನಾತ್ಮಕ ಸಮತೋಲನ ಕಾಪಾಡುತ್ತದೆ
ಮನುಷ್ಯ ಮೂಡ ಎಂದಿಗೂ ಕೂಡ ಒಂದೇ ರೀತಿಯಲ್ಲಿ ಇರುವುದಿಲ್ಲ. ಪರಿಸ್ಥಿತಿಗಳು ಬದಲಾದಂತೆ ಮನಸ್ಥಿತಿಯೂ ಕೂಡ ಬದಲಾಗುತ್ತಿರುತ್ತದೆ. ಹೀಗಾಗಿ ಮನುಷ್ಯ ಭಾವನಾತ್ಮಕವಾಗಿ ಅಸಮತೋಲನದತ್ತ ಹೋಗುತ್ತಾನೆ. ಇದರಿಂದ ಅನೇಕ ಸಮಸ್ಯೆಗಳು ಕೂಡ ಉಂಟಾಗುತ್ತವೆ. ನಿತ್ಯ ಹೀಗೆ ಬರಿದಾದ ಪಾದಗಳಲ್ಲಿ ಹುಲ್ಲು ಹಾಸಿನ ಮೇಲೆ ಹೆಜ್ಜೆಯಿಡುತ್ತಾ ನಡೆಯುವುದರಿಂದ ಇಂತಹ ಸಮಸ್ಯೆಗಳು ದೂರವಾಗುತ್ತವೆ. ಮೂಡ್​ ಸದಾ ಉಲ್ಲಾಸದಿಂದ ಕೂಡಿರುತ್ತದೆ. ಮೂಡ್ ಕೂಡ ಚೆನ್ನಾಗಿ ಇರುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment