ಗಾಳಿಮಳೆ, ಅತಿಥಿಯಾಗಿ ಬಂದಿದ್ದ ಬಾಲಕನ ಮೇಲೆ ತಡೆಗೋಡೆ ಕುಸಿದು ಸಾವು

author-image
AS Harshith
Updated On
ಗಾಳಿಮಳೆ, ಅತಿಥಿಯಾಗಿ ಬಂದಿದ್ದ ಬಾಲಕನ ಮೇಲೆ ತಡೆಗೋಡೆ ಕುಸಿದು ಸಾವು
Advertisment
  • ಗಾಳಿ ಮಳೆಗೆ ಕುಸಿದ ಮನೆ.. 17 ವರ್ಷದ ಬಾಲಕ ಸಾವು
  • ಮನೆಯೊಂದರ ಮೇಲೆ ತಡೆಗೋಡೆ ಕುಸಿದು ಅವಾಂತರ
  • ಅತಿಥಿಯಾಗಿ ಬಂದಿದ್ದ ಬಾಲಕ.. ತಡೆಗೋಡೆಯಡಿಗೆ ಸಿಲುಕಿ ಸಾವು

ಮಂಗಳೂರು: ಗಾಳಿ ಮಳೆಗೆ ಮನೆ ಕುಸಿದು ಬಾಲಕ ಸಾವನ್ನಪ್ಪಿದ ಘಟನೆ  ದ.ಕ ಜಿಲ್ಲೆಯ ಮಂಗಳೂರು ತಾಲೂಕಿನ ಜೋಕಟ್ಟೆ ಬಳಿ ನಡೆದಿದೆ. ಮೂಲ್ಕಿ ಕೊಲ್ನಾಡು ಲಿಂಗಪ್ಪಯ್ಯ ಕಾಡು ನಿವಾಸಿ ಶೈಲೇಶ್ (17) ಮೃತಪಟ್ಟಿದ್ದಾನೆ.

ನಿನ್ನೆ ರಾತ್ರಿ ಮಂಗಳೂರು ಭಾಗದಲ್ಲಿ ಭಾರೀ ಮಳೆಯಾಗಿತ್ತು. ಭಾರೀ ಗಾಳಿ-ಮಳೆಗೆ ಜೋಕಟ್ಟೆಯ ಮನೆಯೊಂದರ ಮೇಲೆ ತಡೆಗೋಡೆ ಕುಸಿದಿದೆ.

ಇದನ್ನೂ ಓದಿ: ಗೋವಿಂದ.. ಗೋವಿಂದ, 187 ಕೋಟಿ ಗೋವಿಂದ.. ಸರ್ಕಾರದ ವಿರುದ್ಧ ಕೇಸರಿ ಪಡೆಯ ಅಹೋರಾತ್ರಿ ಧರಣಿ

ಕುಸಿತವಾದ ಮನೆಗೆ ಬಾಲಕ ಅತಿಥಿಯಾಗಿ ಬಂದಿದ್ದ. ಮಳೆಯಿಂದಾಗಿ ಮನೆಯ ಪಕ್ಕದ ತಡೆಗೋಡೆ ಕುಸಿದ ಕಾರಣ ಬಾಲಕ ಅದರಡಿಗೆ ಸಿಲುಕಿ ಸಾವನ್ನಪ್ಪಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment