newsfirstkannada.com

ಐಪಿಎಲ್​​ಗೆ ಮುನ್ನವೇ ಹೈದಾರಾಬಾದ್​​ ಟೀಮ್​ಗೆ ಬಿಗ್​ ಶಾಕ್​​.. ಕೈಕೊಟ್ಟ ಮಾಜಿ RCB ಪ್ಲೇಯರ್​

Share :

Published March 19, 2024 at 4:42pm

  ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​!

  IPL ಸೀಸನ್​ ಆರಂಭಕ್ಕೆ ಇನ್ನೇನು ಕೇವಲ 3 ದಿನಗಳು ಮಾತ್ರ

  ಕಪ್​ ಗೆಲ್ಲಬೇಕು ಎಂದು ಐಪಿಎಲ್​ ತಂಡಗಳ ಭರ್ಜರಿ ತಯಾರಿ

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​ ಆರಂಭಕ್ಕೆ ಇನ್ನೇನು ಕೇವಲ 3 ದಿನಗಳು ಮಾತ್ರ ಬಾಕಿ ಇದೆ. ಹೇಗಾದ್ರೂ ಮಾಡಿ ಈ ಬಾರಿ ಕಪ್​ ಗೆಲ್ಲಬೇಕು ಎಂದು ಎಲ್ಲಾ ಐಪಿಎಲ್​ ತಂಡಗಳು ಭರ್ಜರಿ ತಯಾರಿ ನಡೆಸಿಕೊಂಡಿವೆ. ಅದರಂತೆ ಸನ್​ರೈಸರ್ಸ್​ ಹೈದರಾಬಾದ್​​ ತಂಡ ಕೂಡ ತಯಾರಿ ಶುರು ಮಾಡಿದೆ.

ಇನ್ನು, ಈ ಮಧ್ಯೆ ಸನ್​ರೈಸರ್ಸ್​ ಹೈದರಾಬಾದ್​​ ತಂಡಕ್ಕೆ ಮಾಜಿ ಆರ್​​ಸಿಬಿ ಪ್ಲೇಯರ್​​ ವನಿಂದು ಹಸರಂಗಾ ಕೈಕೊಟ್ಟಿದ್ದಾರೆ. ಹಸರಂಗ ಅವರು ಟೆಸ್ಟ್ ಕ್ರಿಕೆಟ್‌ ನಿವೃತ್ತಿಯ ನಿರ್ಧಾರ ವಾಪಸ್​ ತೆಗೆದುಕೊಂಡಿದ್ದು, ಮತ್ತೆ ಶ್ರೀಲಂಕಾ ತಂಡಕ್ಕೆ ವಾಪಸ್ಸಾಗಿದ್ದಾರೆ. ಹೀಗಾಗಿ ವನಿಂದು ಹಸರಂಗ ಹೈದರಾಬಾದ್​​ ತಂಡದ ಪರ ಆರಂಭಿಕ ಪಂದ್ಯಗಳಲ್ಲಿ ಕಣಕ್ಕಿಳಿಯೋದು ಡೌಟ್​ ಆಗಿದೆ.

ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ಮಾರ್ಚ್ 22 ರಿಂದ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಕಳೆದ ವರ್ಷ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ವನಿಂದು ಹಸರಂಗಾ ಈ ಸರಣಿಗೆ ಶ್ರೀಲಂಕಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಐಪಿಎಲ್​​ಗೆ ಮುನ್ನವೇ ಹೈದಾರಾಬಾದ್​​ ಟೀಮ್​ಗೆ ಬಿಗ್​ ಶಾಕ್​​.. ಕೈಕೊಟ್ಟ ಮಾಜಿ RCB ಪ್ಲೇಯರ್​

https://newsfirstlive.com/wp-content/uploads/2024/03/Wanindu-Hasaranga.bmp

Load More