ವಧು ಬೇಕಾಗಿದ್ದಾಳೆ.. ಕುಚಿಕು ಗೆಳೆಯನಿಗಾಗಿ ಫ್ಲೆಕ್ಸ್​ ಹಾಕಿದ ಸ್ನೇಹಿತೆ.. ಆಮೇಲೆ ಏನಾಯ್ತು ಗೊತ್ತಾ?

author-image
AS Harshith
Updated On
ವಧು ಬೇಕಾಗಿದ್ದಾಳೆ.. ಕುಚಿಕು ಗೆಳೆಯನಿಗಾಗಿ ಫ್ಲೆಕ್ಸ್​ ಹಾಕಿದ ಸ್ನೇಹಿತೆ.. ಆಮೇಲೆ ಏನಾಯ್ತು ಗೊತ್ತಾ?
Advertisment
  • ಸ್ನೇಹಿತನಿಗೆ ಹುಡುಗಿ ಸಿಗುತ್ತಿಲ್ಲ.. ಬ್ಯಾನರ್​ ಹಾಕಿದ ಗೆಳತಿ
  • ಗೆಳೆಯನಿಗೆ ಗೋಲ್ಗಪ್ಪಾ ಅಂಗಡಿ ಇದೆ ಎಂದು ಜಾಹೀರಾತು ಹಾಕಿದ ಕುಚಿಕು
  • ವಧು ಸಿಗದೆ ಪರದಾಡುತ್ತಿರುವ ಗೆಳೆಯನಿಗೆ ಇದೆಂಥಾ ಸಹಾಯ ಮಾಡಿದ್ಲು ಸ್ನೇಹಿತೆ

ವಯಸ್ಸಿಗೆ ಬಂದ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ ಅನ್ನೋದೇ ಸದ್ಯದ ದೊಡ್ಡ ತಲೆನೋವು. ಅದರಲ್ಲೂ ಕೃಷಿಕರಾದವರ ಕತೆ ಹೇಳೋದೆ ಬೇಡ. ಸದ್ಯ ಕೃಷಿಕರು ಇಂಥಾ ಸಮಸ್ಯೆಯಿಂದ ಕಂಗೆಟ್ಟಿದ್ದಾರೆ. ವಧು ಹುಡುಕಾಡಿ ಸುಸ್ತಾಗಿದ್ದಾರೆ. ಅದರಂತೆ ಇಲ್ಲೊಬ್ಬ ಯುವಕನ ಕತೆಯೇ ಕೇಳಿದ ಸ್ನೇಹಿತೆ ಏನು ಮಾಡಿದ್ದಾಳೆ ಗೊತ್ತಾ? ಈ ಸ್ಟೋರಿ ಪೂರ್ತಿ ಓದಿ.

ಜೀವನದಲ್ಲಿ ಯಾರು ಕೈಕೊಟ್ಟರು ಸ್ನೇಹಿತರು ಕೈಕೊಡಲ್ಲ ಅನ್ನೋದು ಈ ಘಟನೆಯೇ ಸಾಕ್ಷಿ. ಯಾಕಂದ್ರೆ ತನ್ನ ಸ್ನೇಹಿತನಿಗೆ ಮದುವೆಯಾಗಲು ಹುಡುಗಿ ಸಿಗುತ್ತಿಲ್ಲವೆಂದು ಸ್ನೇಹಿತೆಯೊಬ್ಬಳು ರಸ್ತೆ ಬದಿ ಬೋರ್ಡ್ ಹಾಕಿದ್ದಾಳೆ. ಸದ್ಯ ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ರಿಯೋ ಎಂಬ ಯುವಕನಿಗೆ ಹುಡುಗಿ ಸಿಗುತ್ತಿಲ್ಲ. ಸ್ನೇಹಿತನ ಸಮಸ್ಯೆ ಆಲಿಸಿದ ಗೆಳತಿ ಆಂಚಲ್​ ಆತನಿಗಾಗಿ ರಸ್ತೆ ಬದಿ ದೊಡ್ಡ ಜಾಹೀರಾತು ಹಾಕಿದ್ದಾಳೆ. ಅದರಲ್ಲಿ ಗೆಳೆಯ ರಿಯೋಗೆ ಹುಡುಗಿ ಇದ್ರೆ ಹೇಳ್ರಪ್ಪಾ ಎಂದು ಬರೆಯಲಾಗಿದೆ. ಅಷ್ಟು ಮಾತ್ರವಲ್ಲ, ಸ್ನೇಹಿತನ ಫೋಟೋವನ್ನು ಬ್ಯಾನರ್​ನಲ್ಲಿ ಹಾಕಿಸಿದ್ದಾಳೆ.

ಇದನ್ನೂ ಓದಿ: ಬ್ಲೌಸ್​ ಸರಿಯಾಗಿ ಹೊಲಿಯದಕ್ಕೆ ಟೈಲರ್​ಗೆ ಬಿತ್ತು 5000 ರೂಪಾಯಿ ದಂಡ!

ಬ್ಯಾನರ್​ನಲ್ಲಿ ಸ್ನೇಹಿತ ರಿಯೋಗೆ ಗೋಲ್ಗಪ್ಪಾ ಅಂಗಡಿ ಇದೆ. ಈತ ಫೋಟೋಗ್ರಾಫರ್​ ಕೂಡ ಹೌದು. ಯಾರು ಈತನನ್ನು ವಿವಾಹವಾಗುತ್ತೀರೋ ಅವರಿಗೆ ಲೆಕ್ಕವಿಲ್ಲದಷ್ಟು ಕ್ಯಾಂಡಿಡ್​​ ಫೋಟೋ ತೆಗೆಯಬಹುದಾದ ಅವಕಾಶವಿದೆ. ಇದಲ್ಲದೆ ಕೆಲವು ಅಡುಗೆಯನ್ನು ಆತ ಮಾಡುತ್ತಾನೆ ಎಂದು ಬ್ಯಾನರ್​ನಲ್ಲಿ ನಮೂದಿಸಲಾಗಿದೆ. ಇದರ ಜೊತೆಗೆ ಟಿಂಡರ್​ ಖಾತೆಯ ಕ್ಯೂ ಆರ್​ ಕೋಡ್​ ಅನ್ನು ಬ್ಯಾನರ್​ನಲ್ಲಿ ನೀಡಲಾಗಿದೆ.

ಸದ್ಯ ಸಾಮಾಜಿಕ ಜಾಲತಾಣವಾದ ಇನ್​ಸ್ಟಾಗ್ರಾಂನಲ್ಲಿ ಸ್ನೇಹಿತನ ಜಾಹೀರಾತು ದೃಶ್ಯ ವೈರಲ್​ ಆಗಿದೆ. ಅನೇಕರು ಇದನ್ನು ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment