/newsfirstlive-kannada/media/post_attachments/wp-content/uploads/2024/08/Bangladesh-Sheikh-hassina-2.jpg)
ಢಾಕಾ: ಬಾಂಗ್ಲಾದೇಶದಲ್ಲಿ ಸೃಷ್ಟಿಯಾಗಿರುವ ಅರಾಜಕತೆಿಯಿಂದ ಹಿಂಸಾಚಾರ ಇನ್ನೂ ನಿಂತಿಲ್ಲ. ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ಭುಗಿಲೆದ್ದ ಆಕ್ರೋಶಕ್ಕೆ ಇಡೀ ದೇಶದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ದೇಶ ಬಿಟ್ಟು ಬಂದಿರುವ ಶೇಖ್ ಹಸೀನಾ ಅವರು ಸದ್ಯಕ್ಕೆ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. 15 ವರ್ಷಗಳ ಬಾಂಗ್ಲಾದೇಶವನ್ನು ಆಳಿದ ಶೇಖ್ ಹಸೀನಾಗೆ ಯಾಕೆ ಇಂಥ ಸ್ಥಿತಿ ಬಂದು ಅನ್ನೋ ರೋಚಕ ಸತ್ಯ ಬಯಲಾಗಿದೆ.
ಇದನ್ನೂ ಓದಿ: ಬಾಂಗ್ಲಾದೇಶ ಮತ್ತೊಂದು ಪಾಕಿಸ್ತಾನ? 2 ವರ್ಷದ ಕುತಂತ್ರಕ್ಕೆ ರಕ್ತಕ್ರಾಂತಿ ಮೂಲಕ ಜಯ; ಏನಿದರ ರಹಸ್ಯ?
ಸೇನಾ ಮುಖ್ಯಸ್ಥನಿಂದ 45 ನಿಮಿಷ ಡೆಡ್‌ಲೈನ್!
ಶೇಖ್ ಹಸೀನಾ ಅವರು ಬಾಂಗ್ಲಾದೇಶದ ಪ್ರಧಾನಿ ಹುದ್ದೆ ಬಿಟ್ಟು, ಅಧಿಕಾರ ಕಳೆದುಕೊಂಡಿದ್ದಾರೆ. ಇಷ್ಟಕ್ಕೆಲ್ಲಾ ಕಾರಣ ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ವಾಕರ್ ಉಯ್ ಝಮನ್ ಎನ್ನಲಾಗುತ್ತಿದೆ. ಅಂದರೆ ಶೇಖ್ ಹಸೀನಾ ಅವರಿಗೆ ತಾನೇ ಸಾಕಿದ ಗಿಣಿ ಹದ್ದಾಗಿ ಕುಕ್ಕಿದೆ.
ಬಾಂಗ್ಲಾದೇಶದಲ್ಲಿ ಹಿಂಸಾಚಾರ ಹೆಚ್ಚಾಗುತ್ತಿದ್ದಂತೆ ಸೇನಾ ಮುಖ್ಯಸ್ಥ ವಾಕರ್ ಉಲ್ ಝಮನ್ ಅವರು ಶೇಖ್ ಹಸೀನಾ ಅವರಿಗೆ ರಾಜೀನಾಮೆ ನೀಡಲು ಸೂಚಿಸಿದ್ದಾರೆ. ಸೇನಾ ಮುಖ್ಯಸ್ಥ ವಾಕರ್ ಉಲ್ ಝಮನ್ ಸೂಚನೆ ಅನ್ವಯವೇ ಶೇಖ್ ಹಸೀನಾ ರಾಜೀನಾಮೆ ನೀಡಿದ್ದಾರೆ.
ಸೇನಾ ಮುಖ್ಯಸ್ಥ ವಾಕರ್ ಝಮನ್ ಅವರು ಶೇಖ್ ಹಸೀನಾ ಅವರಿಗೆ 45 ನಿಮಿಷಗಳ ಕಾಲ ಡೆಡ್‌ಲೈನ್ ಕೊಟ್ಟು ರಾಜೀನಾಮೆ ನೀಡಲು ಸೂಚನೆ ನೀಡಿದ್ದಾರೆ. 45 ನಿಮಿಷ ಟೈಂ ಕೊಟ್ಟು ಅಷ್ಟರಲ್ಲಿ ರಾಜೀನಾಮೆ ಕೊಟ್ಟು ದೇಶ ಬಿಡಲು ಹೇಳಿದ್ದಾರೆ. ಶೇಖ್ ಹಸೀನಾ ಅವರು ವಿದಾಯದ ಭಾಷಣವನ್ನೂ ಮಾಡೋದಕ್ಕೆ ಅವಕಾಶ ನೀಡದೆಯೇ ರಾಜೀನಾಮೆ ಕೊಡಿಸಲಾಗಿದೆ.
ಯಾರು ಈ ವಾಕರ್ ಝಮನ್?
ಬಾಂಗ್ಲಾ ದೇಶದ ಸೇನಾ ಮುಖ್ಯಸ್ಥ ವಾಕರ್ ಝಮನ್ ಅವರು ಶೇಖ್ ಹಸೀನಾ ಅವರ ಸಂಬಂಧಿಯಾಗಿದ್ದಾರೆ. ತಮ್ಮ ಅಧಿಕಾರವಧಿಯಲ್ಲಿ ಶೇಖ್ ಹಸೀನಾಗೆ ಇವರು ಪರಮಾಪ್ತನಾಗಿದ್ದರು. ಬಾಂಗ್ಲಾ ಪಿಎಂ ಕಚೇರಿ ಅಧೀನದಲ್ಲಿರುವ ಪ್ರಿನ್ಸಿಪಲ್ ಸ್ಟಾಫ್ ಆಫೀಸರ್ ಆಗಿ ವಾಕರ್ ಝಮನ್ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ತನ್ನ ಕೆಲಸದಿಂದ ಶೇಖ್ ಹಸೀನಾ ಅವರ ವಿಶ್ವಾಸ, ನಂಬಿಕೆಯನ್ನು ಗಳಿಸಿದ್ದರು. ವಾಕರ್ ಝಮನ್ ಕಾರ್ಯ ಮೆಚ್ಚಿ ಶೇಖ್ ಹಸೀನಾ ಅವರು ಸೇನಾ ಮುಖ್ಯಸ್ಥರನ್ನಾಗಿ ನೇಮಿಸಿದ್ದರು.
ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಮಿತಿ ಮೀರಿದ ಅರಾಜಕತೆ; ಶೇಖ್ ಹಸೀನಾ ಒಳ ಉಡುಪು ಬಿಡದ ಕಾಮುಕರು
ಒಂದೇ ತಿಂಗಳಲ್ಲೇ ಖೇಲ್ ಖತಂ!
ಕಳೆದ ಜೂನ್ 23, 2024ರಂದು ವಾಕರ್ ಝಮನ್ ಅವರು ಬಾಂಗ್ಲಾದೇಶದ ಆರ್ಮಿ ಚೀಫ್ ಆಗಿ ನೇಮಕಗೊಂಡಿದ್ದರು. ಅಧಿಕಾರ ಸ್ವೀಕರಿಸಿ 1 ತಿಂಗಳಲ್ಲೇ ಶೇಖ್ ಹಸೀನಾ ವಿರುದ್ಧವೇ ಝಮನ್ ಸಮರ ಸಾರಿದ್ದಾರೆ. ವಾಕರ್ ಝಮನ್ ಸೂಚನೆಯನ್ವಯ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ದೇಶ ಬಿಟ್ಟು ಬಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ