/newsfirstlive-kannada/media/post_attachments/wp-content/uploads/2025/04/Amit-shah.jpg)
ತೀವ್ರ ಜಟಾಪಟಿಯ ಬಳಿಕ ಕೊನೆಗೂ ಲೋಕಸಭೆಯಲ್ಲಿ ವಕ್ಫ್​ ತಿದ್ದುಪಡಿ ಮಸೂದೆ ಪಾಸ್​ ಆಗಿದೆ. ಇನ್ಮೇಲೆ ವಕ್ಫ್​ ಬೋರ್ಡ್​ ಎಂಬ ಹೆಸರಿನ ಬದಲು ಉಮ್ಮೀದ್​ ಬಿಲ್​ ಎಂದು ನಾಮಕರಣ ಮಾಡಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಲೋಕಸಭೆಯಲ್ಲಿ ಮಸೂದೆ ಪಾಸ್​ ಆಗಿ ಹಿರಿಹಿರಿ ಹಿಗ್ಗುತ್ತಿರೋ ಬಿಜೆಪಿ ಇಂದು ರಾಜ್ಯಸಭೆಯಲ್ಲಿ ಮಸೂದೆ ಮಂಡಿಸಲು ಸಿದ್ಧತೆ ನಡೆಸಿದೆ.
ಲೋಕಸಭೆಯಲ್ಲಿ ವಕ್ಫ್​​ ತಿದ್ದುಪಡಿ ಮಸೂದೆ ಪಾಸ್​!
ನಿನ್ನೆ ವಕ್ಫ್ ತಿದ್ದುಪಡಿ ಮಸೂದೆಯು ಲೋಕಸಭೆಯಲ್ಲಿ ಮಂಡನೆಯಾಗಿತ್ತು. ದಿನವಿಡೀ ನಡೆದ ಚರ್ಚೆಯು ಮಧ್ಯರಾತ್ರಿಯೂ ಮುಂದುವರಿದಿತ್ತು.. ರಾತ್ರಿ ಸುಮಾರು 12 ಗಂಟೆಗೆ ಚರ್ಚೆ ಅಂತ್ಯವಾಯಿತು.. ಆನಂತರ ಸ್ಪೀಕರ್ ಮಸೂದೆಯನ್ನ ಮತದಾನಕ್ಕಿಟ್ಟರು.. ಅಂತಿಮವಾಗಿ, ಮಸೂದೆ ಪರವಾಗಿ 288 ಮತಗಳು ಚಲಾವಣೆಯಾದರೆ, ಮಸೂದೆಯ ವಿರುದ್ಧ 232 ಮತಗಳು ಬಂದವು.. ಪ್ರತಿಪಕ್ಷಗಳು ಡಿವಿಜನ್ ಆಫ್​ ವೋಟಿಂಗ್​ ಕೇಳಿದ್ದರಿಂದ ತಲೆ ಎಣಿಕೆ ನಡೆಸಲಾಯಿತು.. 288 ಮತಗಳು ವಕ್ಫ್​ ತಿದ್ದುಪಡಿ ಮಸೂದೆ ಪರವೇ ಇದ್ದಿದ್ದರಿಂದ ಮಸೂದೆ ಪಾಸ್​ ಆಯ್ತು.. ಮಸೂದೆ ಲೋಕಸಭೆಯಲ್ಲಿ ಪಾಸ್​ ಆದ ಬಗ್ಗೆ ಲೋಕಸಭೆ ಸ್ಪೀಕರ್​ ಓಂ ಬಿರ್ಲಾ ಅಧಿಕೃತವಾಗಿ ಘೋಷಿಸಿದ್ರು.
ಇದನ್ನೂ ಓದಿ: ವಕ್ಫ್ ಹಳೆ ಕಾನೂನು ಮತ್ತು ಹೊಸ ತಿದ್ದುಪಡಿಯಲ್ಲೆನಿದೆ? ವಿಪಕ್ಷ, ಮುಸ್ಲಿಂ ಸಂಘಟನೆಗಳು ವಿರೋಧ ಯಾಕೆ?
ಇನ್ಮುಂದೆ ವಕ್ಫ್​ ಬೋರ್ಡ್​ ಅಲ್ಲ ಉಮ್ಮೀದ್​ ಬಿಲ್​!
ಅಲ್ಪಸಂಖ್ಯಾತರ ವ್ಯವಹಾರಗಳ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ವಕ್ಫ್​​ ತಿದ್ದುಪಡಿ ಮಸೂದೆಯನ್ನ ಮಂಡಿಸಿದ್ರು.. ಆದರೆ, ವಿಪಕ್ಷಗಳಿಂದ ಈ ಕಾಯ್ದೆಗೆ ತೀವ್ರ ವಿರೋಧ ವ್ಯಕ್ತವಾಯಿತು.. ಮಧ್ಯರಾತ್ರಿಯವರೆಗೆ ಈ ಕುರಿತಂತೆ ಪರ ವಿರೋಧ ಚರ್ಚೆಗಳು ನಡೆದವು.. ಈ ಮಸೂದೆಯು ಕಾಯ್ದೆಯಾಗಿ ಬಂದಾಗ ಇದಕ್ಕೆ ಉಮ್ಮೀದ್​ ಬಿಲ್ ಎಂದು ಹೆಸರಿಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
ವಕ್ಫ್​​ ತಿದ್ದುಪಡಿ ಮಸೂದೆ ಮುಸ್ಲಿಂ ಧರ್ಮದ ದತ್ತಿ ಆಸ್ತಿಗಳನ್ನ ಹೇಗೆ ನಿರ್ವಹಿಸಬೇಕು ಎಂಬುದನ್ನ ಮಸೂದೆ ನಿರ್ಧರಿಸಲಿದೆ.. ವಕ್ಫ್ ಆಸ್ತಿ ಉಳಿಸಲು ಇಲ್ಲಿವರೆಗೆ 10,000ಕ್ಕೂ ಹೆಚ್ಚು ಪ್ರಕರಣ ಇತ್ಯರ್ಥಗೊಳಿಸಲು ತೀರ್ಮಾನ ಆಗ್ಲಿದೆ.. ಭಾರತದಲ್ಲಿ ಮೂರನೆ ಅತಿ ಹೆಚ್ಚು ಭೂಮಿ, ವಕ್ಫ್ ಬಳಿ ಇದೆ ಅಂತಾರೆ.. ಮೊದಲ ಸ್ಥಾನ ರೈಲ್ವೆ, ಎರಡನೆಯದು ಸೇನೆ ಮತ್ತು 3ನೆಯದು ವಕ್ಫ್ ಬಳಿ ಇದೆ.. ರೈಲ್ವೆ ಮತ್ತು ಸೇನೆಯ ಆಸ್ತಿ, ದೇಶಕ್ಕೆ ಸೇರಿದೆ.. ಆದ್ರೆ ವಕ್ಫ್ ಆಸ್ತಿ ಮಾತ್ರ ಖಾಸಗಿ ಆಸ್ತಿಯಾಗಿದೆ.. ಸದ್ಯ ವಕ್ಫ್ ಬಳಿ 8.72 ಲಕ್ಷ ಆಸ್ತಿಗಳಿವೆ. ನಿನ್ನೆ ಲೋಕಸಭೆಯಲ್ಲಿ ಸದ್ದುಮಾಡಿದ್ದ ವಕ್ಫ್​ ತಿದ್ದುಪಡಿ ಮಸೂದೆ ಇಂದು ರಾಜ್ಯಸಭೆಯಲ್ಲಿ ಸದ್ದುಮಾಡಲಿದೆ.
ಸಂಸತ್​​ನಲ್ಲಿ ಸಂಖ್ಯಾ ಗಣಿತ
- ನಿನ್ನೆ ಲೋಕಸಭೆ, ಇಂದು ರಾಜ್ಯಸಭೆಯಲ್ಲಿ ಮಸೂದೆ ಮಂಡನೆ
- 245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಒಂಭತ್ತು ಸ್ಥಾನಗಳು ಖಾಲಿ
- ಸದ್ಯದ ರಾಜ್ಯಸಭೆ ಬಲಾಬಲ 236, ಬಿಲ್​​ ಪಾಸ್​​ಗೆ 118 ಅಗತ್ಯ
- ಆದ್ರೆ, ರಾಜ್ಯಸಭೆಯಲ್ಲಿ ಎನ್‌ಡಿಎ 126 ಸದಸ್ಯ ಬಲ ಹೊಂದಿದೆ
- ಹೀಗಾಗಿ ರಾಜ್ಯಸಭೆಯಲ್ಲೂ ವಕ್ಫ್​​​​ ಮಸೂದೆ ಅಂಗೀಕಾರ ಫಿಕ್ಸ್​
ಒಟ್ನಲ್ಲಿ ಭಾರೀ ಹಗ್ಗ ಜಗ್ಗಾಟದ ಬಳಿಕ ಲೋಕಸಭೆಯಲ್ಲಿ ವಕ್ಫ್​​ ತಿದ್ದುಪಡಿ ಮಸೂದೆ ಪಾಸ್ ಆಗಿರೋದು ಬಿಜೆಪಿ ನಾಯಕರನ್ನ ಹಿರಿ ಹಿರಿ ಹಿಗ್ಗಿಸಿದೆ.. ಇಂದು ರಾಜ್ಯಸಭೆಯಲ್ಲಿ ಮಸೂದೆ ಮಂಡನೆ ಆಗಲಿದ್ದು ಮತ್ತೊಂದಷ್ಟು ಗಲಾಟೆ ಗದ್ದಲಗಳಿಗೆ ಸಾಕ್ಷಿಯಾಗಲಿದೆ.
ಇದನ್ನೂ ಓದಿ: WaqfAmendment: ಬಿಲ್ ಪಾಸ್ ಆಗೋ ಮುಂಚೆಯೇ ಭಾರೀ ಸಂಭ್ರಮಾಚರಣೆ; ವಿಡಿಯೋ ವೈರಲ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ