/newsfirstlive-kannada/media/post_attachments/wp-content/uploads/2025/04/Waqf-Bill-1.jpg)
ಇವತ್ತು ಮಧ್ಯಾಹ್ನ 12ಕ್ಕೆ ಲೋಕಸಭೆಯಲ್ಲಿ ಪರಿಷ್ಕೃತ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ ಆಗ್ಲಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಸೂದೆ ಮಂಡಿಸಲಿದ್ದಾರೆ. ಈಗಾಗಲೇ ಮಸೂದೆಯನ್ನ ವಿಪಕ್ಷಗಳು ತೀವ್ರವಾಗಿ ವಿರೋಧಿಸಿವೆ.
ಚರ್ಚೆಗೆ 8 ಗಂಟೆ ಸಮಯ!
ಉದ್ದೇಶಿತ ಕರಡು ಕಾನೂನು ಮುಸ್ಲಿಮರ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನ ಅಂತ ವಿಪಕ್ಷಗಳು ಆರೋಪಿಸಿವೆ. ಈ ಮಸೂದೆಯ ವಿರುದ್ಧ ಸಂಘರ್ಷಕ್ಕಿಳಿಯಲು ಸಜ್ಜಾಗ್ತಿರುವ ಮುನ್ಸೂಚನೆ ಕೊಟ್ಟಿವೆ. ವಕ್ಫ್ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಇವತ್ತೇ ಅನುಮೋದನೆ ಪಡೆಯುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಈ ಮಸೂದೆ ಕುರಿತ ಚರ್ಚೆಗೆ ವಿಪಕ್ಷಗಳು 12 ಗಂಟೆ ಕಾಲಾವಕಾಶ ಕೋರಿದ್ದು, ಸಂಸದೀಯ ಸಮಿತಿಯು ಎಂಟು ಗಂಟೆಗಳಷ್ಟು ಕಾಲಾವಧಿಯನ್ನ ನಿಗದಿಗೊಳಿಸಿದೆ. ಇನ್ನು, ಮರುದಿನ ಗುರುವಾರವೇ ರಾಜ್ಯಸಭೆಯಲ್ಲಿ ಮಸೂದೆ ಮಂಡಿಸಲು ಕೇಂದ್ರ ಸಿದ್ಧವಾದಂತೆ ಕಾಣಿಸ್ತಿದೆ.
ಇದನ್ನೂ ಓದಿ: ಕಸದ ಮೇಲೆ ತೆರಿಗೆ.. ಕರ್ನಾಟಕ ಸರ್ಕಾರಕ್ಕೆ ಯಾಕಿಂಥಾ ಸ್ಥಿತಿ ಬಂತು? ಪ್ರಹ್ಲಾದ್ ಜೋಶಿ ಹೇಳಿದ್ದೇನು? VIDEO
3 ದಿನಗಳು ಸದಸ್ಯರ ಹಾಜರಿಗೆ ಎಲ್ಲಾ ಪಕ್ಷಗಳಿಂದ ವಿಪ್!
ಇವತ್ತು, ನಾಳೆ ಮತ್ತು ನಾಡಿದ್ದು ಮೂರು ದಿನಗಳ ಕಾಲ ಲೋಕಸಭೆಯಲ್ಲಿ ಬಹಳ ಮುಖ್ಯವಾದ ವಿಷಯ ಚರ್ಚೆಗೆ ಕೈಗೆತ್ತಿಕೊಳ್ಳಲಾಗ್ತಿದ್ದು, ತನ್ನ ಪಕ್ಷದ ಎಲ್ಲಾ ಸದಸ್ಯರ ಹಾಜರಿಗೆ ಬಿಜೆಪಿ ವಿಪ್ ಜಾರಿ ಮಾಡಿದೆ. ನಾಳೆ ದಿನ ಹಾಜರಿರಲು ರಾಜ್ಯಸಭೆ ಸದಸ್ಯರಿಗೂ ತ್ರೀ ಲೈನ್ ವಿಪ್ ಕೊಟ್ಟಿದೆ. ಇತ್ತ ಕಾಂಗ್ರೆಸ್ ಸೇರಿ ಎಲ್ಲಾ ಪಕ್ಷಗಳು ಸಹ ತಮ್ಮ ಸದಸ್ಯರಿಗೆ ಮೂರು ಸಾಲಿನ ವಿಪ್ ಜಾರಿಗೊಳಿಸಿದೆ. ಮುಂದಿನ 3 ದಿನಗಳವರೆಗೆ ಸದನದಲ್ಲಿ ಅವರ ಉಪಸ್ಥಿತಿ ಇರಲೇಬೇಕೆಂದು ಕಡ್ಡಾಯವಾಗಿ ಸೂಚಿಸಿವೆ. ಕಾಂಗ್ರೆಸ್ ಏಪ್ರಿಲ್ 3ಕ್ಕೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಪಾರ್ಲಿಮೆಂಟ್ ಬೋರ್ಡ್ ಮೀಟಿಂಗ್ ಕರೆದಿದೆ. ಎನ್ಸಿಪಿ ಶರದ್ ಬಣದ ಸುಪ್ರಿಯಾ ಸುಳೆ, ವಕ್ಫ್ ಬಿಲ್ನ ಡಿಬೇಟ್ನಲ್ಲಿ ಭಾಗಿ ಆಗೋದಾಗಿ ಹೇಳಿದ್ದಾರೆ.
ಇದೇ ವಿಚಾರವಾಗಿ ನಿನ್ನೆ ಸ್ಪೀಕರ್ ಓಂ ಬಿರ್ಲಾ ಅಧ್ಯಕ್ಷತೆಯಲ್ಲಿ ಬಿಎಸಿ ಸಭೆ ನಡೆಯಿತು.. ಆದ್ರೆ, ಆಡಳಿತ ಮತ್ತು ವಿಪಕ್ಷಗಳ ನಡುವೆ ಒಮ್ಮತ ಮೂಡದ ಕಾರಣ ಇಂಡಿ ಮೈತ್ರಿಕೂಟ ಸಭೆಯಿಂದ ವಿಪಕ್ಷಗಳು ಹೊರನಡೆದಿವೆ.
ಸಂಸತ್ನಲ್ಲಿ ಬಲಾಬಲ ಲೆಕ್ಕ!
- ಚಂದ್ರಬಾಬು ಟಿಡಿಪಿ, ನಿತೀಶ್ಕುಮಾರ್ ಜೆಡಿಯು ಬೆಂಬಲ
- ಮಸೂದೆಯ ಪರ ನಿಂತಿದ್ದು, ಬಿಜೆಪಿಯ ಅಳಕು ನಿವಾರಣೆ
- 543 ಸದಸ್ಯ ಬಲದ ಲೋಕಸಭೆಯಲ್ಲಿ NDA 293 ಸಂಸದರು
- ಲೋಕಸಭೆಯಲ್ಲಿ ಅನಾಯಾಸವಾಗಿ ಬಿಲ್ ಪಾಸ್ನ ನಿರೀಕ್ಷೆ
- 245 ಸದಸ್ಯ ಬಲದ ರಾಜ್ಯಸಭೆಯಲ್ಲಿ NDA 125 ಸಂಸದರು
- ರಾಜ್ಯಸಭೆಯಲ್ಲಿ ಸದ್ಯಕ್ಕೆ ಒಟ್ಟು ಒಂಬತ್ತು ಸ್ಥಾನಗಳು ಖಾಲಿ
- ಮಸೂದೆ ಅಂಗೀಕಾರಕ್ಕೆ ಎನ್‌ಡಿಎಗೆ 118 ಸಂಸದರ ಅಗತ್ಯತೆ
ಫೆಬ್ರವರಿ 13ರಂದು ಸದನ ಸಮಿತಿ ತನ್ನ ವರದಿಯನ್ನ ಸರ್ಕಾರಕ್ಕೆ ಸಲ್ಲಿಸಿತ್ತು.. ಇದೇ ವರದಿಯನ್ನ ಫೆಬ್ರವರಿ 19ರಂದು ಕೇಂದ್ರ ಸಚಿವ ಸಂಪುಟ ಅನುಮೋದಿಸಿದ್ದು, ಇವತ್ತು ಲೋಕಸಭೆಯಲ್ಲಿ ಮಂಡನೆ ಆಗ್ತಿದೆ.. ಒಟ್ಟಾರೆ, ಸಂಸತ್ ಅಧಿವೇಶನ ಶುಕ್ರವಾರ ಅಂತ್ಯ ಆಗ್ತಿದೆ. ಹೀಗಾಗಿ ಇಂದಿನಿಂದ ಮೂರು ದಿನಗಳ ಕಾಲ ಲೋಕಸಭೆ ಅಧಿವೇಶನ ಕಾವೇರಲಿದೆ.
ಇದನ್ನೂ ಓದಿ: ಪ್ರಯಾಗರಾಜ್ನಲ್ಲಿ ಯಮುನೆ ಗಂಗೆಯೊಂದಿಗೆ ಸೇರುತ್ತಾಳೆ.. ಬ್ರಹ್ಮಪುತ್ರಾ ನದಿ ಜಾಹ್ನವಿಯನ್ನು ಸೇರುವುದು ಎಲ್ಲಿ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ