/newsfirstlive-kannada/media/post_attachments/wp-content/uploads/2025/04/HDDEVEGOWDA-1.jpg)
ಭಾರೀ ವಿರೋಧದ ನಡುವೆಯೂ ವಕ್ಫ್ ತಿದ್ದುಪಡಿ ಮಸೂದೆ ಸಂಸತ್ನಲ್ಲಿ ಅಂಗೀಕಾರಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ. ಲೋಕಸಭೆ ಬಳಿಕ, ರಾಜ್ಯಸಭೆಯಲ್ಲೂ ಮಹತ್ವದ ಮಸೂದೆ ಅಂಗೀಕಾರಗೊಂಡಿದೆ.
ಲೋಕಸಭೆಯಲ್ಲಿ ಏಪ್ರಿಲ್ 2ರಂದು ಅಂಗೀಕೃತಗೊಂಡಿತ್ತು. ಏಪ್ರಿಲ್3ರಂದು ಮಧ್ಯರಾತ್ರಿಯವರೆಗೆ ರಾಜ್ಯಸಭೆಯಲ್ಲಿ ಚರ್ಚೆಗಳು ನಡೆದ್ವು. ದಿನವಿಡೀ ನಡೆದ ಚರ್ಚೆಯ ನಂತರ ಕೇಂದ್ರ ಸಚಿವ ಕಿರಣ್ ರಿಜುಜು ಮತ್ತಷ್ಟು ಸ್ಪಷ್ಟನೆಗಳನ್ನು ನೀಡಿದ್ರು. ಬಳಿಕ 1.30ರ ಸುಮಾರಿಗೆ ಮತದಾನಕ್ಕೆ ಹಾಕಲಾಯ್ತು. ಬಳಿಕ 2.30 ಹೊತ್ತಿಗೆ ಮತದಾನದ ಫಲಿತಾಂಶವನ್ನು ರಾಜ್ಯಸಭೆಯ ಸಭಾಪತಿಗಳಾದ ಧನ್ಕರ್ ಅವರು ಪ್ರಕಟಿಸಿ, ಮಸೂದೆಯು ಪಾಸ್ ಆಗಿರುವುದಾಗಿ ಘೋಷಿಸಿದ್ರು. ಡಿವಿಷನ್ ಆಧಾರದಲ್ಲಿ ನಡೆದ ಮತದಾನದಲ್ಲಿ ಮಸೂದೆಯ ಪರವಾಗಿ 128 ಮತಗಳು ಬಂದರೆ, ವಿರುದ್ಧವಾಗಿ 95 ಮತಗಳು ಬಂದವು. ಈ ವೇಳೆ ಬಿಜೆಪಿ ಸದಸ್ಯರಾಜ್ಯಸಭೆಯಲ್ಲಿ ಭಾರತ್ ಮಾತಾಕಿ ಜೈ, ಜೈ ಶ್ರೀರಾಮ್ ಘೋಷಣೆ ಕೂಗಿದ್ರು.. ಈ ಮೂಲಕ, ಆಡಳಿತಾರೂಢ ಬಿಜೆಪಿಯು ತನ್ನ ಪಾಲಿಗೆ ಬಂದೊದಗಿದ್ದ ದೊಡ್ಡ ಸವಾಲನ್ನು ಗೆದ್ದಂತಾಗಿದೆ.
ಇದನ್ನೂ ಓದಿ: ಬಿಜೆಪಿ ವಿರುದ್ಧ 40% ಕಮೀಷನ್ ತನಿಖಾಸ್ತ್ರ ಹೂಡಿದ್ದ ಕಾಂಗ್ರೆಸ್ಗೆ ತೀವ್ರ ಹಿನ್ನಡೆ.. ಏನಾಯ್ತು..?
ಇದಕ್ಕೂ ಮುನ್ನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದೆ ಹಾಗೂ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ, ಇದು ಸಂವಿಧಾನದ ಮೇಲಿನ ದಾಳಿ ಇದು ಎಂದು ಆರೋಪಿಸಿದರು. ಇನ್ನು ರಾಜ್ಯಸಭೆ ವಿಪಕ್ಷ ನಾಯಕ ಖರ್ಗೆ ಕೂಡ ವಿರೋಧ ವ್ಯಕ್ಯಪಡಿಸಿ, ಇದನ್ನು ಪ್ರತಿಷ್ಟೆಯಾಗಿ ತೆಗೆದುಕೊಳ್ಳದೇ ವಾಪಸ್ ಪಡೆಯಬೇಕೆಂದು ಆಗ್ರಹಿಸಿದ್ರು. ರಾಜ್ಯಸಭೆ ಸದಸ್ಯರಾಗಿರುವ ಹೆಚ್.ಡಿ.ದೇವೇಗೌಡ್ರು ತಿದ್ದುಪಡಿ ಬಿಲ್ ಅನ್ನು ಸ್ವಾಗತಿಸಿದ್ರು. ಹಾಗೂ ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿದ್ರು.
ಬಿಜೆಪಿ ಮೈತ್ರಿ ಪಕ್ಷ ಜೆಡಿಯುನ ಹಿರಿಯ ನಾಯಕ ರಾಜೀನಾಮೆ
ಲೋಕಸಭೆ, ರಾಜ್ಯಸಭೆ ಎರಡೂ ಕಡೆ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿದೆ. ಆದ್ರೆ ಇದಕ್ಕೆ ಎನ್ಡಿಎ ಕೂಟದ ಜೆಡಿಯುನಲ್ಲೇ ಭಿನ್ನಸ್ವರ ಮೂಡಿದೆ. ವಕ್ಫ್ ತಿದ್ದುಪಡಿ ಮಸೂದೆ 2024ರ ಬಗ್ಗೆ ಜೆಡಿ (ಯು) ನಿಲುವಿನಿಂದ ನಿರಾಶೆಗೊಂಡ ಕಾರಣ ಜೆಡಿ (ಯು) ಹಿರಿಯ ನಾಯಕ ಮೊಹಮ್ಮದ್ ಖಾಸಿಂ ಅನ್ಸಾರಿ ಪಕ್ಷಕ್ಕೆ ಮತ್ತು ತಮ್ಮ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.
ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿರುವ ಮಸೂದೆ ಸಂಸತ್ನ ಉಭಯ ಸಂದನಗಳನ್ನು ಅಂಗೀಕಾರಗೊಂಡಿದೆ. ಈ ಮಸೂದೆಗೆ ರಾಷ್ಟ್ರಪತಿಗಳ ಸಹಿ ಬೀಳುವುದೊಂದೇ ಬಾಕಿಯಿದ್ದು, ರಾಷ್ಟ್ರಪತಿಯವರ ಅಂಗೀಕಾರ ಸಿಕ್ಕ ಕೂಡಲೇ ಇದು ಕಾನೂನಾಗಿ ಜಾರಿಗೊಳ್ಳಲಿದೆ.
ಇದನ್ನೂ ಓದಿ: ಸಚಿವ ರಾಜಣ್ಣ ಪುತ್ರನ ಹತ್ಯೆಗೆ ಸುಪಾರಿ ಆರೋಪ; ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಕೊಟ್ಟ ಮಾಸ್ಟರ್ಮೈಂಡ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ