ವಕ್ಫ್ ವಿವಾದ; ಮುಸ್ಲಿಂರ ಪಹಣಿಯಲ್ಲೂ ಹೆಸರು.. ಕೋರ್ಟ್​ಗೆ ಹೋಗುವ ಎಚ್ಚರಿಕೆ ನೀಡಿದ ಮುಖಂಡರು

author-image
Bheemappa
Updated On
ವಕ್ಫ್ ವಿವಾದ; ಮುಸ್ಲಿಂರ ಪಹಣಿಯಲ್ಲೂ ಹೆಸರು.. ಕೋರ್ಟ್​ಗೆ ಹೋಗುವ ಎಚ್ಚರಿಕೆ ನೀಡಿದ ಮುಖಂಡರು
Advertisment
  • ಕೋರ್ಟ್ ಕೇಸ್ ಇದ್ದರು 2018ರಲ್ಲಿ ಪಹಣಿ ಪತ್ರದಲ್ಲಿ ವಕ್ಫ್​ ಹೆಸರು
  • BJP ಅಧಿಕಾರದಲ್ಲಿ ಇದು ಆಗಿರೋದು- ಸಚಿವ ಜಮೀರ್ ಅಹ್ಮದ್
  • ಹೊಲಕ್ಕೆ ವಕ್ಫ್​ ಹೆಸರು ಬಂದಿದೆ, ಮುಂದೆ ಮನೆ, ಮಠಕ್ಕೆ ಬರಬಹುದು

ವಕ್ಫ್​ ಬೋರ್ಡ್​ ಕಂಡಕಂಡ ಕಡೆಯೆಲ್ಲಾ ಕಬಂಧಬಾಹು ಚಾಚುತ್ತಿರೋದು ಬಗೆದಷ್ಟೂ ಬಯಲಾಗಿದೆ. ಇದುವರೆಗೆ ಹಿಂದೂ ಸಮುದಾಯದ ರೈತರ ಆಸ್ತಿಗಳನ್ನು ಕಬಳಿಸೋ ಆರೋಪ ಕೇಳಿಬಂದಿತ್ತು. ಇದೀಗ ಮುಸ್ಲಿಂ ಸಮುದಾಯ ಆಸ್ತಿಯನ್ನೂ ವಕ್ಫ್​​ ಬೋರ್ಡ್ ಸ್ವಾಹ ಮಾಡಿದೆ. ಪಹಣಿಯಲ್ಲಿ ವಕ್ಪ್ ಹೆಸರು ಕಂಡು ಜಮೀನು ಮಾಲೀಕರು ಕಂಗಾಲಾಗಿದ್ದಾರೆ.

ಇದು ವಕ್ಫ್​ ಪೆಡಂಭೂತ ತಾನು ನಡೆದಿದ್ದೇ ದಾರಿ, ಇಟ್ಟಿದ್ದೇ ಹೆಜ್ಜೆ. ವಕ್ಫ್​ಬೋರ್ಡ್ ಗಜಗಾತ್ರದ ಹೊಟ್ಟೆಗೆ ಏನೂ ಸಾಕಾಗುತ್ತಿಲ್ಲ ಅನ್ನಿಸುತ್ತಿದೆ. ಯಾರದ್ದೇ ಜಮೀನೂ ಇದ್ದರೂ ಇದು ನಮ್ಮದು ಎಂದು ಕಬ್ಜಾ ಮಾಡಿಕೊಳ್ಳಲು ಮುಂದಾಗಿದೆ. ಕೇವಲ ಹಿಂದೂ ರೈತರು ಮಾತ್ರವಲ್ಲ ಮುಸ್ಲಿಂರಿಗೆ ಸೇರಿದ ಜಮೀನನ ಪಹಣಿಗಳಲ್ಲೂ ವಕ್ಫ್​ ಹೆಸರು ಇರೋದು ಮತ್ತಷ್ಟು ವಿವಾದಕ್ಕೆ ನಾಂದಿಯಾಡಿದೆ.

ಇದನ್ನೂ ಓದಿ: ವಕ್ಫ್ ಬೋರ್ಡ್​ ಆಸ್ತಿ ವಿವಾದ, ಕೊನೆಗೂ ಮಣಿದ ಸರ್ಕಾರ.. ರೈತರ ಧರಣಿ ವಾಪಸ್

publive-image

ಮುಸ್ಲಿಂರ ಭೂಮಿಯ ಪಹಣಿಯಲ್ಲಿ ವಕ್ಫ್​ ಹೆಸರು!

ವಿಜಯಪುರದಲ್ಲಿ ವಕ್ಫ್​ ಆಸ್ತಿ ವಿವಾದ ಬೆನ್ನಲ್ಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ರೈತರ ಜಮೀನನ್ನು ವಕ್ಫ್​ ಖಾತೆಗೆ ಸೇರಿಸಲು ತೋರಿದ ಕೈಚಳಕ ಬಯಲಾಗಿತ್ತು. ಇದರಿಂದ ಆಕ್ರೋಶಗೊಂಡ ರೈತರು ಹೋರಾಟಕ್ಕೆ ಇಳಿದಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ, ಪಹಣಿಗಳಲ್ಲಿದ್ದ ವಕ್ಫ್​ ಹೆಸರನ್ನು ಡಿಲೀಟ್​ ಮಾಡಲಾಗಿದೆ. ಇದರ ಬೆನ್ನಲ್ಲೇ ಮುಸ್ಲಿಂ ಮುಖಂಡರು ಕೂಡ ವಕ್ಫ್​ ಹೆಸರು ತೆಗೆಯುವಂತೆ ಮನವಿ ಮಾಡಿದ್ದಾರೆ.

ನವಲಗುಂದ 25ಕ್ಕೂ ಹೆಚ್ಚು ಮುಸ್ಲಿಂ ರೈತರ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿದೆ. ಕೋರ್ಟ್ ಕೇಸ್ ಇದ್ದರೂ ಸಹ, 2018ರಲ್ಲಿ ಪಹಣಿ ಪತ್ರದಲ್ಲಿ ವಕ್ಫ್​ ಹೆಸರು ಸೇರ್ಪಡೆ ಆಗಿದೆ. ಮುಸ್ಲಿಂ ಸಮುದಾಯಕ್ಕೆ ಒಳಿತು ಮಾಡಬೇಕಿದ್ದ ವಕ್ಫ್​​ ಮುಸ್ಲಿಮರ ಆಸ್ತಿಯನ್ನೂ ಬಿಡುತ್ತಿಲ್ಲ. ಸರ್ಕಾರ ಕೂಡಲೇ ವಕ್ಫ್ ಹೆಸರು ತೆಗೆಯಬೇಕು, ಇಲ್ಲದಿದ್ರೆ ಕೋರ್ಟ್ ಮೊರೆ ಹೋಗಿ ಕೇಸ್ ಹಾಕುತ್ತೇವೆ ಅಂತ ಎಚ್ಚರಿಕೆ ನೀಡಿದ್ದಾರೆ.

‘ಅನಧಿಕೃತವಾಗಿ ವಕ್ಫ್​ ಹೆಸರು ನಮೂದು’

ಸುಮಾರು 50 ಎಕರೆಗಿಂತ ಹೆಚ್ಚು ಇರುವ ಹೊಲದಲ್ಲಿ ವಕ್ಫ್​ ಬೋರ್ಡ್​​ನವರು ಅನಧಿಕೃತವಾಗಿ ತಮ್ಮ ಹೆಸರನ್ನು ನಮೂದು ಮಾಡಿದ್ದಾರೆ. ಮುಖ್ಯವಾಗಿ ಹೇಳಬೇಕು ಎಂದರೆ ಮುಸ್ಲಿಂ ರೈತರೇ 20ಕ್ಕಿಂತ ಹೆಚ್ಚು ಜನ ಇದ್ದಾರೆ.

ಮಾಬೂಸಾಬ್ ಯರಗುಪ್ಪಿ, ರೈತ

‘6 ಎಕರೆ ಜಾಗಕ್ಕೆ ವಕ್ಫ್​​ ಹೆಸರು’

297/ 10 ಸಹೋದರರ ಗಲಾಟೆ ಹಿನ್ನೆಲೆಯಲ್ಲಿ ಕೋರ್ಟ್​ನಲ್ಲಿ ಕೇಸ್ ಇದೆ. ಈ ಕೇಸ್ ಇರುವಾಗ ವಕ್ಫ್ ಹೆಸರು ಎಂಟ್ರಿ ಮಾಡಿದ್ದಾರೆ. ವಾಟ್ಸ್​​ ಅಪ್​ನಲ್ಲಿ ನಮಗೆ ಗೊತ್ತಾಯಿತು. ಸಂಬಂಧ ಪಟ್ಟ ಅಧಿಕಾರಿಗಳನ್ನ ಭೇಟಿ ಮಾಡಿ ಮನವಿ ಕೊಟ್ಟಿದ್ದೇವೆ.

ಬಶೀರ್ ಅಹ್ಮದ್ ಹುಳಗುಂದ, ರೈತ

ಒಂದೆಡೆ ರೈತರು ತಮ್ಮ ಜಮೀನುಗಳನ್ನು ಕಾಪಾಡಿಕೊಳ್ಳಲು ಪರದಾಡುತ್ತಿದ್ದರೆ, ಮತ್ತೊಂದೆಡೆ ರಾಜಕೀಯ ನಾಯಕರು ವಕ್ಫ್​ ಹೆಸರಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದೆ. ಮಾಜಿ ಸಚಿವ ಸಿ.ಸಿ ಪಾಟೀಲ್​ ಈಗ ರೈತರ ಜಮೀನು ನಮ್ಮದು ಅಂತಿರುವ ವಕ್ಫ್​ ನಾಳೆ ಮಠ ಮಾನ್ಯಗಳ ಜಾಗದ ಮೇಲೆ ಕಣ್ಣು ಹಾಕಬಹುದು. ಕಾಂಗ್ರೆಸ್​ಗೆ ಮತ ಹಾಕಿದ ಹಿಂದೂಗಳು ಯೋಚಿಸಬೇಕಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಕಾಂಗ್ರೆಸ್​ಗೆ ಮತ ಹಾಕಿದ ಹಿಂದೂಗಳು ಯೋಚನೆ ಮಾಡಬೇಕು. ಇವತ್ತು ಯಾರಾದ್ದೋ ಹೊಲಕ್ಕೆ ವಕ್ಫ್​ ಬಂದಿದೆ. ನಾಳೆ ನಮ್ಮ ಮನೆ, ಮಠಕ್ಕೆ ಬರುವುದಿಲ್ಲ ಎಂದು ಏನು ಗ್ಯಾರಂಟಿ. ನಮ್ಮಮ ಕೂಡಲಸಂಗಮ ಪೀಠ ಕೂಡ ವಕ್ಫ್​ ಬೋರ್ಡ್ ಎನ್ನುತ್ತಾರೋ ಏನು?.

ಸಿ.ಸಿ. ಪಾಟೀಲ್, ಮಾಜಿ ಸಚಿವ

ಬಿಜೆಪಿ ನಾಯಕರು ಹೋರಾಟಕ್ಕೆ ಇಳಿಯಲು ಮುಂದಾಗುತ್ತಿದ್ದಂತೆ, ಕಾಂಗ್ರೆಸ್​ ಕೂಡ ಬಿಜೆಪಿಯನ್ನು ಕಟ್ಟಿಹಾಕಲು ಮುಂದಾಗಿದೆ. ನವೆಂಬರ್ 4 ಮತ್ತು 5ರಂದು ವಕ್ಫ್​ ಆಸ್ತಿ ವಿವಾದ ಸಂಬಂಧ ಬಹಿರಂಗ ದಾಖಲೆ ಬಿಡುಗಡೆ ಮಾಡಲು ವಕ್ಫ್​ ಸಚಿವ ಜಮೀರ್ ಅಹ್ಮದ್ ನಿರ್ಧರಿಸಿದ್ದಾರೆ.

publive-image

ಬಿಜೆಪಿ ಮುಖಂಡರು ಎಲ್ಲ ಅರ್ಥ ಮಾಡಿಕೊಳ್ಳಬೇಕು. ನಾನು ಎಲ್ಲ ಡಾಟಾವನ್ನ ತರಿಸಿಕೊಳ್ಳುತ್ತಿದ್ದೇನೆ. ಬೆಂಗಳೂರಲ್ಲಿ 4-5 ರಂದು ಮಾಧ್ಯಮಗೋಷ್ಠಿ ಮಾಡುತ್ತೇನೆ. ಬಿಜೆಪಿ ಸರ್ಕಾರದ ಕಾಲದಲ್ಲಿ 2008 ರಿಂದ 2013ರ ವರೆಗೆ ಹಾಗೂ 2019ರಿಂದ 2023ರವರೆಗೆ ನೂರಾರಲ್ಲ, ಸಾವಿರಾರು ನೋಟಿಸ್ ಕೊಟ್ಟಿದ್ದಾರೆ.

ಜಮೀರ್ ಅಹ್ಮದ್, ಸಚಿವ

ಕರ್ನಾಟಕದಲ್ಲಿ ವಕ್ಫ್​ ಆಸ್ತಿ ವಿವಾದ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಇನ್ಯಾವ ಮಟ್ಟಕ್ಕೆ ಹೋಗುತ್ತೆ ಅನ್ನೋದನ್ನು ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment