ವಕ್ಫ್ ವಿವಾದಕ್ಕೆ ತೆರೆ ಎಳೆದ ಸಿಎಂ ಸಿದ್ದರಾಮಯ್ಯ.. ರೈತರಿಗೆ ಕೊಟ್ಟ ನೋಟಿಸ್ ವಾಪಸ್​ ಪಡೆಯಲು ಸೂಚನೆ

author-image
Bheemappa
Updated On
ವಕ್ಫ್ ವಿವಾದಕ್ಕೆ ತೆರೆ ಎಳೆದ ಸಿಎಂ ಸಿದ್ದರಾಮಯ್ಯ.. ರೈತರಿಗೆ ಕೊಟ್ಟ ನೋಟಿಸ್ ವಾಪಸ್​ ಪಡೆಯಲು ಸೂಚನೆ
Advertisment
  • ವಕ್ಫ್​ ಮತ್ತೆ ನೋಟಿಸ್​ ನೀಡಿದ್ರೆ, ಹೋರಾಟದ ಎಚ್ಚರಿಕೆ ನೀಡಿದ ರೈತರು
  • ಸಿಎಂ ಸಿದ್ದರಾಮಯ್ಯ ಅವರು ಕೊಟ್ಟಿರುವ ಅರ್ಧ ನ್ಯಾಯವಿದು- ಸಿಟಿ ರವಿ
  • ಸಿಎಂ ಮಾತಿನಿಂದ ಖುಷಿಯಾದ ರೈತರು ಸಿಹಿ ಹಂಚಿ ಸಂಭ್ರಮಾಚರಣೆ

ಕಂಡ ಕಂಡ ಭೂಮಿಯೆಲ್ಲಾ ನಂದು ಎಂದ ವಕ್ಫ್ ಬೋರ್ಡ್​​ಗೆ ಕೊನೆಗೂ ಸಿಎಂ ಸಿದ್ದರಾಮಯ್ಯ ಅಂಕುಶ ಹಾಕಿದ್ದಾರೆ. ರೈತರಿಗೆ ನೀಡಿರುವ ನೋಟಿಸ್ ವಾಪಸ್ ಪಡೆಯುವಂತೆ ಸೂಚಿಸಿದ್ದಾರೆ. ಸಿಎಂ ನಿರ್ಧಾರವನ್ನ ರೈತ ನಾಯಕರು ಸ್ವಾಗತಿಸಿದ್ದಾರೆ. ಈ ಮಧ್ಯೆ ಕಾಂಗ್ರೆಸ್-ಬಿಜೆಪಿ ನಡುವೆ ವಕ್ಫ್​ ವಾಕ್ಸಮರ ಮುಂದುವರಿದಿದೆ.

ವಕ್ಫ್​ ಭೂವ್ಯೂಹ ರಾಜ್ಯದೆಲ್ಲೆಡೆ ವ್ಯಾಪಿಸಿ ರಾಜಕೀಯ ವಾಕ್ಸಮರಕ್ಕೂ ಕಾರಣವಾಗಿದೆ. ಎಲ್ಲಾ ಸಮುದಾಯದ ಜಮೀನು ಕಬಳಿಸುತ್ತಿರುವ ಆರೋಪದ ನಡುವೆ ಎಂಟ್ರಿ ಕೊಟ್ಟ ಸಿಎಂ ಸಿದ್ದರಾಮಯ್ಯ ವಕ್ಫ್​ ಕಪಟ ನಾಟಕ ಗದ್ದಲಕ್ಕೆ ತೆರೆ ಎಳೆದಿದ್ದಾರೆ.

ಇದನ್ನೂ ಓದಿ: ಹಾಸನಾಂಬೆ ದರ್ಶನೋತ್ಸವಕ್ಕೆ ತೆರೆ.. ಇಂದು ಸಿದ್ದೇಶ್ವರಸ್ವಾಮಿ ಕೊಂಡೋತ್ಸವ ಬೆನ್ನಲ್ಲೇ ಗರ್ಭಗುಡಿ ಬಾಗಿಲು ಬಂದ್

publive-image

ರೈತರಿಗೆ ಕೊಟ್ಟ ನೋಟಿಸ್ ವಾಪಸ್​ಗೆ ಸಿಎಂ ಸೂಚನೆ

ವಕ್ಫ್​ ಭೂ ಕಬಳಿಕೆ ಯತ್ನಕ್ಕೆ ಸರ್ಕಾರ ಬ್ರೇಕ್ ಹಾಕಿದೆ. ಈ ಜಮೀನು ನಮ್ಮದು ಅಂತ ಅನ್ನದಾತರಿಗೆ ವಕ್ಫ್ ಬೋರ್ಡ್ ನೀಡಿರುವ ನೋಟಿಸ್ ತಕ್ಷಣವೇ ವಾಪಸ್ ಪಡೆಯುವಂತೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ. ಪಹಣಿಯಲ್ಲಿ ಆಗಿರುವ ತಿದ್ದುಪಡಿಗಳನ್ನೂ ಕೂಡ ರದ್ದು ಮಾಡಲು ಸೂಚಿಸಿದ್ದಾರೆ. ಸಿಎಂ ಸಿದ್ದರಾಮಯ್ಯರ ಈ ನಡೆಯನ್ನು ರೈತ ನಾಯಕರು ಸ್ವಾಗತಿಸಿದ್ದಾರೆ. ಇನ್ನು ವಿಜಯಪುರದಲ್ಲಿ ವಕ್ಫ್​ ಆಸ್ತಿ ಗದ್ದಲದ ಬಗ್ಗೆ ಅಹಾರೋರಾತ್ರಿ ಹೋರಾಟ ನಡೆದಿತ್ತು. ಇದೀಗ ಸಿಎಂ ಮಾತಿನಿಂದ ಖುಷಿಯಾದ ರೈತರು, ವಿಜಯಪುರದ ಡಿಸಿ ಕಚೇರಿ ಮುಂಭಾಗ ಸಂಭ್ರಮಾಚರಣೆ ಮಾಡಿದ್ದಾರೆ. ಹಾಗೂ ವಕ್ಫ್​ ಅಧಿಕಾರಿಗಳು ಮತ್ತೆ ನೋಟಿಸ್​ ನೀಡಿದ್ರೆ, ಹೋರಾಟಕ್ಕೆ ಇಳಿಯುವುದಾಗಿ ಎಚ್ಚರಿಕೆ ನೀಡಿದ್ದಾರೆ.

ನಮ್ಮ ಹೋರಾಟದ ತಿರುಳನ್ನು ತಿಳಿದ ಸಿಎಂ ಸಿದ್ದರಾಮಯ್ಯ ಅವರು ನಿರ್ಧಾರ ತೆಗೆದುಕೊಂಡಿದ್ದಾರೆ. ಈ ನಿರ್ಧಾರ ತೆಗೆದುಕೊಂಡಿರುವುದು ಒಳ್ಳೆಯ ಬೆಳವಣಿಗೆ ಆಗಿದೆ. ಇನ್ಮುಂದೆ ಯಾವ ಕಾಲಕ್ಕೂ ಇಂತಹ ಕೃತ್ಯ ವಕ್ಫ್​ ಆಗಲಿ, ಸರ್ಕಾರ ಆಗಲಿ ಮಾಡಬಾರದು.

ಅರವಿಂದ ಕುಲಕರ್ಣಿ, ರೈತ ಮುಖಂಡ

ಅಲ್ಲಾ ಆಸ್ತಿನಾ ಎಂದ ಪ್ರಹ್ಲಾದ್​ ಜೋಶಿಗೆ ಜಮೀರ್ ಟಾಂಗ್

ವಕ್ಪ್​ ಹೆಸರು ತೆಗೆಯುವಂತೆ ಸಿಎಂ ಅಧಿಕಾರಿಗಳಿಗೆ ಸೂಚನೆ ಕೊಟ್ಟ ಬೆನ್ನಲ್ಲೇ ವಕ್ಫ್​ ಸಚಿವ ಜಮೀರ್​ ಅಹ್ಮದ್ ತಮ್ಮ ವರಸೆಯನ್ನೇ ಬದಲಿಸಿದ್ದಾರೆ. ​ರೈತರ ಜಮೀನನ್ನ ಯಾವುದೇ ಕಾರಣಕ್ಕೂ ತೆಗೆದುಕೊಳ್ಳುತ್ತಿಲ್ಲ. 90% ಮುಸ್ಲಿಮರೇ ವಕ್ಫ್​ ಆಸ್ತಿ ಒತ್ತುವರಿ ಮಾಡಿದ್ದಾರೆ ಅಚ್ಚರಿ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಕೇಂದ್ರ ಸಚಿವ ಪ್ರಹ್ಲಾದ್​ ಜೋಷಿ, ಇದೇನು ಅಲ್ಲನಾ, ಆಸ್ತಿನಾ ಎಂದು ವ್ಯಂಗ್ಯ ಮಾಡಿದರು. ಇದಕ್ಕೆ ಸಚಿವ ಜಮೀರ್, ಬೊಮ್ಮಾಯಿಯವರ ಹಳೆ ವಿಡಿಯೋ ಮೂಲಕ ತಿರುಗೇಟು ನೀಡಿದ್ದಾರೆ.​

‘ಅಲ್ಲಾ ಆಸ್ತಿ ಎಂದವರು ಈಗ ಉಲ್ಟಾ’

ಇದು ಅಲ್ಲಾನ ಆಸ್ತಿ ಯಾರು ಬಿಡಬೇಡಿ. ಎಲ್ಲ ಆಸ್ತಿಯನ್ನು ವಾಪಸ್ ಪಡೆದುಕೊಳ್ಳಿ ಎಂದು ಸಿಎಂ ಆಗಿದ್ದಾಗ ಬೊಮ್ಮಾಯಿ ಅವರು ಹೇಳಿದ್ದರು. ಈಗ ಉಪ್ಟಾ ಹೊಡೀತಿದ್ದಾರೆ. ಏನ್ ಮಾಡೋಕೆ ಆಗುತ್ತದೆ?. ರೈತರ ಜಾಗವನ್ನ ಯಾರಾದರೂ ತಗೋಳ್ಳಕ್ಕೆ ಸಾಧ್ಯನಾ?. ವಿಜಯಪುರದ ಗ್ರಾಮವೊಂದರಲ್ಲಿ ವಕ್ಫ್​ ಆಸ್ತಿ ಇರೋದೆ ಕೇವಲ 11 ಎಕರೆ.

ಜಮೀರ್ ಅಹ್ಮದ್, ಸಚಿವ

ಇನ್ನು ಸಿಎಂ ನಿರ್ಧಾರವನ್ನು ಸ್ವಾಗತಿಸಿದ ಎಂಎಲ್​ಸಿ ಸಿ.ಟಿ.ರವಿ, ಇದು ಸಿದ್ದರಾಮಯ್ಯ ಕೊಟ್ಟಿರುವ ಅರ್ಧ ನ್ಯಾಯ ಮಾತ್ರ. ಅಸಂವಿಧಾನಿಕ ವಕ್ಫ್ ಕಾಯ್ದೆ ರದ್ದಾಗಬೇಕು, ಆಗ ಪೂರ್ತಿ ನ್ಯಾಯ ಸಿಗುತ್ತೆ ಅಂತ ಸರ್ಕಾರವನ್ನ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ರೈತರ ಭೂಮಿ ಮೇಲೆ ವಕ್ಫ್​ ಕಣ್ಣು ಹಾಕಿತಾ..? ಸಿಎಂ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಹೇಳಿದ್ದೇನು?

publive-image

ಪಹಣಿಯಲ್ಲಿ ಕಾಲಂ 11 ರಲ್ಲಿ ಎಂಟ್ರಿ ಮಾಡುವುದನ್ನ ಹಿಂದಕ್ಕೆ ಪಡೆಯುವ ನಿರ್ಧಾರ ಅದನ್ನು ನಾನು ಸ್ವಾಗತ ಮಾಡುತ್ತೇನೆ. ಇದು ಕೇವಲ ಅರ್ಧ ನ್ಯಾಯ ಕೊಟ್ಟಂತೆ ಮಾತ್ರ. ಅಸಂವಿಧಾನಿಕವಾಗಿ ಇರುವ ವಕ್ಫ್​ ಕಾಯ್ದೆ ರದ್ದು ಆಗಬೇಕು. ಅವಾಗ ಪೂರ್ತಿ ನ್ಯಾಯ ಸಿಕ್ಕಂತೆ ಆಗುತ್ತದೆ.

ಸಿ.ಟಿ.ರವಿ, ಎಂಎಲ್​ಸಿ

ತಮ್ಮ ಜಮೀನಿನ ಪಹಣಿಯಲ್ಲಿ ವಕ್ಫ್​ ಹೆಸರು ನಮೂದಾಗಿದ್ದನ್ನು ಕಂಡಿದ್ದ ರೈತರು ಕಂಗಾಲಾಗಿದ್ದರು. ಸದ್ಯ ನೋಟಿಸ್ ವಾಪಸ್ ಪಡೆಯುವಂತೆ ಸಿಎಂ ಸೂಚಿಸಿದ್ದು ಅನ್ನದಾತರು ನಿಟ್ಟುಸಿರುವ ಬಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment