/newsfirstlive-kannada/media/post_attachments/wp-content/uploads/2024/08/waqf-board-amendment.jpg)
ಇಂದು ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ವಕ್ಫ್ ಕಾನೂನು ತಿದ್ದುಪಡಿ ಬಿಲ್ ಮಂಡನೆಗೆ ಮುಂದಾಗಿದೆ. ಈ ಹಿಂದೆಯೇ ಈ ಬಗ್ಗೆ ಯೋಜನೆಯೊಂದನ್ನು ರೂಪಿಸಿದ್ದ ಎನ್ಡಿಎ ಸರ್ಕಾರ, ಈ ಬಾರಿ ಮಸೂದೆಯನ್ನು ಲೋಕಸಭೆ ಹಾಗೂ ರಾಜ್ಯಸಭೆ ಎರಡು ಕಡೆ ಬಹುಮತದಿಂದ ಮಸೂದೆಯನ್ನು ಅಂಗೀಕಾರ ಮಾಡಲು ಸಜ್ಜಾಗಿದೆ. ಲೋಕಸಭೆಯಲ್ಲಿ ಮಸೂದೆ ಅಂಗೀಕಾರಕ್ಕೆ ಬೇಕಾದ ಬಹುಮತ ಎನ್ಡಿಎ ಬಳಿ ಇದೆ.
ಲೋಕಸಭೆಯಲ್ಲಿ ಪ್ರಸ್ತುತ 542 ಸಂಸದರ ಸಂಖ್ಯೆಯಿದೆ. ಅದರಲ್ಲಿ ಎನ್ಡಿಎ 293 ಸ್ಥಾನಗಳ ಬಲ ಹೊಂದಿದೆ. ವಕ್ಫ್ ಕಾನೂನು ಅಂಗೀಕರಾಕ್ಕೆ ಬೇಕಾಗಿರುವುದು ಕೇವಲ 272 ಮತಗಳು. ಹೀಗಾಗಿ ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಪಡೆ ಸುರಕ್ಷಿತ ಬಹುಮತವನ್ನು ಹೊಂದಿದೆ. ಲೋಸಕಭೆಯಲ್ಲಿ ಎನ್ಡಿಎಯನ್ನು ಬೆಂಬಲಿಸುವ 293 ಸಂಸದರಲ್ಲಿ 240 ಸದಸ್ಯರು ಬಿಜೆಪಿಯವರೇ ಆಗಿದ್ದಾರೆ. ಉಳಿದಂತೆ ತೆಲಗು ದೇಶಂ ಪಾರ್ಟಿಯಿಂದ 16 ಜೆಡಿಯು ಪಕ್ಷದಿಂದ 12, ಶಿವಸೇನೆಯಿಂದ 7, ಲೋಕ ಜನಶಕ್ತಿ (ರಾಮ್ ವಿಲಾಸ್)ದಿಂದ 5 ಮತ್ತು ಆರ್ಎಲ್ಡಿ, ಜೆಡಿಎಸ್ ಜೆಎಸ್ಪಿ ಇತರ ಪಕ್ಷಗಳಿಂದ ತಲಾ ಇಬ್ಬರು ಸದಸ್ಯರನ್ನು ಹೊಂದಿದೆ. ಇನ್ನು ನಿತೀಶ್ ಕುಮಾರ್ ಅವರ ಜೆಡಿಯು ಕೂಡ ಮಸೂದೆಗೆ ತನ್ನ ಬೆಂಬಲವನ್ನು ಸೂಚಿಸಿದೆ.
ವಿಪಕ್ಷಗಳ ಕಡು ವಿರೋಧ
ಇನ್ನು ಲೋಕಸಭೆಯಲ್ಲಿ ಇಂದು ಮಂಡನೆಯಗುತ್ತಿರುವ ವಕ್ಫ್ ಕಾನೂನು ತಿದ್ದುಪಡಿ ಮಸೂದೆಯನ್ನು ವಿಪಕ್ಷಗಳ ಬಲವಾಗಿ ವಿರೋಧಿಸಿವೆ. ಇದು ಅಸಂವಿಧಾನಿಕ ಮತ್ತು ಮುಸ್ಲಿಂ ಸಮುದಾಯದ ಹಿತಾಸಕ್ತಿಗಳಿಗೆ ಹಾನಿಕಾರಕ ಎಂದು ಖಂಡಿಸಿವೆ. ಹಲವಾರು ಪ್ರಮುಖ ಮುಸ್ಲಿಂ ಸಂಘಟನೆಗಳು ಮಸೂದೆಯನ್ನು ವಿರೋಧಿಸಿವೆ. ವಕ್ಫ್ ಮಸೂದದೆಯ ವಿರುದ್ಧದ ಇಂಡಿಯ ಬಣದ ಅಭಿಯಾನದಲ್ಲಿ ಮುಂಚೂಣಿಯಲ್ಲಿರುವ ಕಾಂಗ್ರೆಸ್ ಲೋಕಸಭೆಯಲ್ಲಿ 99 ಸಂಸದರನ್ನು ಹೊಂದಿದ್ದು, ಸಮಾಜವಾದಿ ಪಕ್ಷ 37, ಟಿಎಂಸಿ 28, ಡಿಎಂಕೆ 22, ಶಿವಸೇನೆ(ಯುಬಿಟಿ)9, ಎನ್ಸಿಪಿ-ಎಸ್ಪಿ 8, ಸಿಪಿಐಎಂ 4, ಆರ್ಜೆಡಿ 4, ಎಎಪಿ 3, ಜೆಎಂಎಂ 3, ಐಯುಎಂಎಲ್ 3, ಜೆಕೆ ನ್ಯಾಷನಲ್ ಕಾನ್ಫರನ್ಸ್ 2, ಮತ್ತು ಇತರ 13 ಸ್ಥಾನಗಳನ್ನು ಹೊಂದಿವೆ. ಇದು ಎನ್ಡಿಎಗೆ ಬಲವಾದ 293 ಸ್ಥಾನಗಳ ವಿರುದ್ಧ 235 ಸ್ಥಾನಗಳನ್ನು ಹೊಂದಿದೆ.
ಇದನ್ನೂ ಓದಿ:ಕೇಂದ್ರ ಸರ್ಕಾರಕ್ಕೆ ಇವತ್ತು ದೊಡ್ಡ ಸವಾಲು.. ವಕ್ಫ್ ತಿದ್ದುಪಡಿ ಮಸೂದೆ ಮಂಡನೆಗೆ ಕ್ಷಣಗಣನೆ..!
ಮತದಾನದ ಸಮಯದಲ್ಲಿ ಈ ಎಲ್ಲಾ ಪಕ್ಷಗಳ ನಾಯಕರು ಮಸೂದೆಯ ವಿರುದ್ಧ ಮತ ಚಲಾಯಿಸುವುದಾಗಿ ಹೇಳಿದ್ದಾರೆ. ಎಐಎಂಐಎಂನ ಏಕೈಕ ಸಂಸದ ಅಸಾದುದ್ದೀನ್ ಓವೈಸಿ ಕೂಡ ಮಸೂದೆಯನ್ನು ತೀವ್ರವಾಗಿ ವಿರೋಧಿಸಿದೆ. ಆದರೂ ಕೂಡ ಅವರು ಇಂಡಿಯಾ ಬಣದ ಭಾಗವಾಗಿಲ್ಲ. ಇನ್ನು ವಕ್ಫ್ ಕಾನೂನು ಮಸೂದೆ ಅಂಗೀಕಾರದ ಬಗ್ಗೆ ತಮ್ಮ ನಿಲುವನ್ನು ಬಹಿರಂಗ ಪಡಿಸದೆ ತಟಸ್ಥವಾಗಿರುವ ಬಣಗಳು ಅಂದ್ರೆ ವೈಎಸ್ಆರ್ಸಿಪಿ ಮತ್ತು ಶಿರೋಮಣಿ ಅಕಾಲಿದಳ. ಎರಡು ಪಕ್ಷಗಳು 4 ಮತ್ತು ಒಬ್ಬ ಸಂಸದರನ್ನು ಲೋಕಸಭೆಯಲ್ಲಿ ಹೊಂದಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ