/newsfirstlive-kannada/media/post_attachments/wp-content/uploads/2024/08/ISREAL-VS-IRAN.jpg)
ಟೆಲ್ ಅವಿವ್: ಮಧ್ಯಪ್ರಾಚ್ಯದಲ್ಲಿ ಮತ್ತೆ ಇಸ್ರೇಲ್ ಮಹಾಸಮರಕ್ಕೊಂದು ಮುನ್ನುಡಿ ಬರೆದಿದೆ. ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಹತ್ಯೆಯಾದ ಬಳಿಕ, ಇರಾನ್ ಮತ್ತು ಇಸ್ರೇಲ್ ನಡುವೆ ಒಂದು ಅಘೋಷಿತ ಸಮರಕ್ಕೆ ಯಹೂದಿ ನಾಡು ಶ್ರೀಕಾರ ಹಾಕಿದೆ. 1967ರಲ್ಲಿ ನಡೆದ ಆರು ದಿನಗಳ ಸಂಗ್ರಾಮ ಮತ್ತೆ ಮರುಕಳಿಸಲಿದೆಯಾ ಅನ್ನೋ ಆತಂಕ ಈಗ ಮಧ್ಯಪ್ರಾಚ್ಯದಲ್ಲಿ ಶುರುವಾಗಿದೆ.
ಇದನ್ನೂ ಓದಿ: Breaking: ಇರಾನ್ಗೆ ನುಗ್ಗಿ ಹಮಾಸ್ ಮುಖ್ಯಸ್ಥನ ಹೊಡೆದು ಹಾಕಿದ ಇಸ್ರೇಲ್..!
ಈಗಾಗಲೇ ಗಾಜಾದ ಮೇಲೆ ಯುದ್ಧ ಸಾರಿರುವ ಇಸ್ರೇಲ್ ತನ್ನ ಬೆನ್ನಿಗೆ ಮತ್ತೊಂದು ಶತ್ರುವನ್ನು ಕಟ್ಟಿಕೊಂಡಿದೆ. ಇರಾನ್ ಅಂಗಳಕ್ಕೆ ಹೋಗಿ ಹಮಾಸ್ ಮುಖ್ಯಸ್ಥನನ್ನು ಕೊಂದು ಬಂದ ಆರೋಪ ಸದ್ಯ ಮೊಸಾದ್ ಎದುರಿಸುತ್ತಿದೆ. ಕಳೆದ ಮೂರು ದಿನಗಳಿಂದ ಈ ಎರಡು ದೇಶಗಳ ನಡುವೆ ಕತ್ತಿ ಮಸೆಯುತ್ತಿರುವ ಸದ್ದು ಸಣ್ಣಗೆ ಕೇಳಿ ಬರುತ್ತಿದೆ.ಯುದ್ಧ ನಡೆಯುವ ಮುನ್ಸೂಚನೆಗಳು ಒಂದೊಂದಾಗಿ ಆಚೆ ಬರುತ್ತಿವೆ.
ಇದನ್ನೂ ಓದಿ :244 ದಿನ ಕೋಮಾದಿಂದ ಹೊರ ಬಂದ ಮಗ.. ಖುಷಿ ಪಡುವಷ್ಟರಲ್ಲೇ ದುರಂತ; ತಾಯಿ ಮಾಡಿದ್ದೇನು ಗೊತ್ತಾ?
ಟೆಲ್ ಅವೀವ್ ನತ್ತ ಪ್ರಯಾಣ ಬೆಳೆಸದ ಭಾರತೀಯ ಏರ್ಲೈನ್ಸ್
ಮಧ್ಯಪ್ರಾಚ್ಯದಲ್ಲಿ ವಾತಾವರಣ ಸದ್ಯ ಬೂದಿ ಮುಚ್ಚಿದ ಕೆಂಡದಂತಿದೆ. ಸಮಯ ನೋಡಿ ಇರಾನ್ ಪ್ರತಿಘಾತ ಮಾಡುವ ಸೂಚನೆಗಳು ಸ್ಪಷ್ಟವಾಗಿ ಕಾಣುತ್ತಿವೆ. ಹೀಗಾಗಿ ಭಾರತದ ಹಲವು ಏರ್ಲೈನ್ಸ್ಗಳು ಇಸ್ರೇಲ್ ರಾಜಧಾನಿ ಟೆಲ್ ಅವೀವ್ಗೆ ಹೊರಡುವ ಎಲ್ಲಾ ವಿಮಾನಗಳ ಹಾರಾಟ ರದ್ದು ಪಡಿಸಿವೆ. ಏರ್ ಇಂಡಿಯಾ ಸೇರಿದಂತೆ ಹಲವು ವಿಮಾನ ಸಂಸ್ಥೆಗಳ ಪ್ಲೇನ್ ಈಗ ಟೆಲ್ ಅವೀವ್ನತ್ತ ಹಾರುವುದನ್ನು ನಿಲ್ಲಿಸಿವೆ.
ಇಸ್ರೇಲ್ನಲ್ಲಿರುವ ಭಾರತೀಯರಿಗೆ ಮನೆಯಿಂದ ಆಚೆ ಬರುವ ಮುನ್ನ ಹುಷಾರು. ಅಗತ್ಯವಿದ್ದಲ್ಲಿ ಮಾತ್ರ ಮನೆಯಿಂದ ಆಚೆ ಬನ್ನಿ ಪರಿಸ್ಥಿತಿ ಯಾವಾಗ ಬಿಗಡಾಯಿಸಲಿದೆ ಅನ್ನೋದು ಗೊತ್ತಿಲ್ಲ ಹೀಗಾಗಿ ಅನಗತ್ಯವಾಗಿ ಮನೆಬಿಟ್ಟು ಹೊರಗೆ ಬರಬೇಡಿ ಎಂದು ಇಸ್ರೇಲ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹೇಳಿದೆ. ಇನ್ನು ಯುಎಸ್ ಯುಕೆ ಕೂಡ ಲೆಬೆನಾನ್ನಲ್ಲಿರುವ ತನ್ನ ಪ್ರಜೆಗಳಿಗೆ ಆದಷ್ಟು ಬೇಗೆ ವಾಪಸ್ ಬರುವಂತೆ ಸೂಚಿಸಿದೆ. ಯಾವುದೇ ಫ್ಲೈಟ್ ಸಿಗಲಿ ಅದನ್ನು ಹತ್ತಿಕೊಂಡು ವಾಪಸ್ ಬಂದು ಬಿಡವಂತೆ ಹೇಳಿದೆ. ಇಷ್ಟೆಲ್ಲಾ ಬೆಳವಣಿಗೆಗಳು ಮರಳಿ ಆರು ದಿನಗಳ ಮಹಾಯುದ್ಧ ಮರುಕಳಿಸಲಿದೆಯಾ ಅನ್ನೋ ಸೂಚನೆ ನೀಡುತ್ತಿದೆ.
ಇಸ್ರೇಲ್ ಬೆನ್ನಿಗೆ ನಿಂತ ಅಮೆರಿಕಾ
ಸುತ್ತಲೂ ಶತ್ರುಪಡೆಯನ್ನಿಟ್ಟುಕೊಂಡು ಸದಾ ಯುದ್ಧಸನ್ನದ್ಧವಾಗಿಯೇ ಇರುವ ದೇಶ ಇಸ್ರೇಲ್, ಸುತ್ತಲೂ ತಂಟೆಕೋರ ದೇಶಗಳಿವೆ. ಈಗ ಇರಾನ್ ಕೂಡ ಅವುಗಳ ಜೊತೆ ಕೈಜೋಡಿಸಲು ಸಜ್ಜಾಗಿದೆ. ಹೀಗಾಗಿ ಮಹಾಯುದ್ಧವೊಂದು ಮರುಕಳಿಸುವ ಸೂಚನೆಗಳು ಸ್ಪಷ್ಟವಾಗಿ ಕಾಣುತ್ತಿವೆ. ಇತ್ತ ಅಮೆರಿಕಾ ಇರಾನ್ ದಾಳಿಯನ್ನು ತಡೆಯುವ ಉದ್ದೇಶದಿಂದ ಇಸ್ರೇಲ್ಗೆ ಬೆಂಬಲವಾಗಿ ನಿಂತಿದೆ. ಈಗಾಗಲೇ ಥಿಯೋಡರ್ ರೂಸ್ವೆಲ್ಟ್ ಅನ್ನೋ ದೈತ್ಯ ಹಡಗು ಮಧ್ಯಪ್ರಾಚ್ಯದ ಸಮುದ್ರದಲ್ಲಿ ಡೇರೆ ಹಾಕಿಕೊಂಡು ನಿಂತಿದೆ. 12 ವಾರ್ಶಿಪ್ಗಳನ್ನು ಏಕಕಾಲಕ್ಕೆ ಹೊತ್ತೊಯ್ಯಬಲ್ಲ ಬಲವಿರುವ ರೂಸ್ವೆಲ್ಟ್ ಬಂದು ಈಗ ಇಸ್ರೇಲ್ ಬಳಿಯೇ ನಿಂತಿದೆ,. ಜೊತೆಗೆ ಅಮೆರಿಕಾದಿಂದ ಸದ್ಯದಲ್ಲಿಯೇ ಬ್ಯಾಲಸ್ಟಿಕ್ ಮಿಸೈಲ್ಗಳು ಕೂಡ ಬಂದು ಇಸ್ರೇಲ್ನ ನೆಲಕ್ಕೆ ಇಳಿಯಲಿವೆ. ಇಡೀ ಮಧ್ಯಪ್ರಾಚ್ಯ ಸದ್ಯ ಮಹಾಸಂಗ್ರಾಮವೊಂದಕ್ಕೆ ಸಾಕ್ಷಿಯಾಗುವ ಮುನ್ನ ಆವರಿಸುವ ಭೀಕರ ಮೌನವೊಂದು ಆವರಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ