/newsfirstlive-kannada/media/post_attachments/wp-content/uploads/2024/10/ANJANESWAMY-MARRIED.jpg)
ಅಸಲಿಗೆ ನಮಗೆ ಆಂಜನೇಯ ಸ್ವಾಮಿ ಅಂದ್ರೆ ಬ್ರಹ್ಮಚಾರಿಯೆಂದೇ ಅರ್ಥ. ಬ್ರಹ್ಮಚಾರಿ ಅಂದ್ರೆ ನಾವು ಮೊದಲು ಗುರುತಿಸುವುದೇ ಶ್ರೀ ಆಂಜನಯೇಯನನ್ನು. ಕುಸ್ತಿ ಪೈಲ್ವಾನರು ಆಂಜನೇಯ ಸ್ವಾಮಿ ಎದುರಿಗೆ ದೀಕ್ಷೆ ತೆಗೆದುಕೊಂಡೇ ಕಸರತ್ತಿಗೆ ಇಳಿಯುವುದು. ಈ ಒಂದು ನಂಬಿಕೆ ಸಹಸ್ರಾರು ವರ್ಷಗಳಿಂದಲೂ ಸನಾತನ ಪರಂಪರೆಯಲ್ಲಿ ಅಚ್ಚಳಿಯದೇ ಉಳಿದುಕೊಂಡು ಬಂದಿದೆ. ಆದ್ರೆ ನಿಮಗೆ ಹೈರಾಣಾಗುವ ಒಂದು ವಿಷಯ ಅಂದ್ರೆ ಅದು ಭಜರಂಗಬಲಿಗೆ ಮದುವೆ ಆಗಿತ್ತು ಅನ್ನೋದು. ಇದನ್ನು ನಾವು ಹೇಳುತ್ತಿಲ್ಲ. ಅಸಲಿಗೆ ವಾಲ್ಮೀಕಿ ರಾಮಾಯಣ ಹಾಗೂ ರಾಮಚರಿತ ಮಾನಸದಲ್ಲಿ ಇದು ಉಲ್ಲೇಖವಿದೆ.
ರಾಮಚರಿತ ಮಾನಸ ಹಾಗೂ ವಾಲ್ಮೀಕಿ ರಾಮಾಯಣದಲ್ಲಿ ಹೇಳಿರುವ ಪ್ರಕಾರ ಸುವರ್ಚಲಾದೇವಿ ಎಂಬ ಸೂರ್ಯದೇವನ ಮಗಳನ್ನು ಮದುವೆಯಾಗಿರುತ್ತಾರೆ. ತೆಲಂಗಾಣದಲ್ಲಿ ಈ ಸುವರ್ಚಲಾ ದೇವಿ ಹಾಗೂ ಹನುಮಾನ್ ದೇವರಿಗಾಗಿಯೇ ಮೀಸಲಾದ ಒಂದು ಮಂದಿರವಿದೆ. ಇಲ್ಲಿ ನಾವು ಬ್ರಹ್ಮಚಾರಿ ಎಂದು ತಿಳಿದ ಹನುಮ ಗೃಹಸ್ಥನಾಗಿ ತನ್ನ ಪತ್ನಿ ಸುವರ್ಚಲಾ ದೇವಿಯೊಂದಿಗೆ ಸ್ಥಾಪಿತನಾಗಿದ್ದಾನೆ.
ತೆಲಂಗಾಣದ ಕಮ್ಮಮ್ ಪ್ರದೇಶದಲ್ಲಿ ಸುವರ್ಚಲಾ ದೇವಿಯ ಮಂದಿರವಿದೆ. ಈ ಒಂದು ಮಂದಿರ ಶ್ರೀ ಆಂಜನೇಯನಿಗೆ ಮದುವೆಯಾದ ಬಗ್ಗೆ ಹೇಳುತ್ತದೆ. ಹಾಗಂತ ಮಾರುತಿ ದೇವರು ಬ್ರಹ್ಮಚಾರಿಯೇ ಅಲ್ಲ ಅಂತ ಏನೂ ಹೇಳುವ ಹಾಗಿಲ್ಲ. ಮದುವೆಯಾದರೂ ಕೂಡ ಹನುಮಂತ ತನ್ನ ಬ್ರಹ್ಮಚರ್ಯವನ್ನು ಎಂದಿಗೂ ಮುಕ್ಕಾಗಲು ಬಿಡಲಿಲ್ಲ.
ಪುರಾಣಗಳು ಹೇಳುವ ಪ್ರಕಾರ ಒಂದು ಬಾರಿ ಸೂರ್ಯದೇವನು ಆಂಜನೇಯಸ್ವಾಮಿ ಸೂರ್ಯದೇವನಿಂದ ಒಂಬತ್ತು ವಿದ್ಯೆಗಳನ್ನು ಕಲಿಯಲು ಮುಂದಾಗಿದ್ದ. ಈ ವೇಳೆ ಐದು ವಿದ್ಯೆಗಳ ಬಗ್ಗೆ ಹೇಳಿದ ಸೂರ್ಯದೇವರು, ಹನುಮಂತನಿಗೆ ಮದುವೆಯಾಗು ಎಂದು ಸಲಹೆ ನೀಡಿದರು. ಅಲ್ಲಿಯವರೆಗೂ ಉಳಿದ ನಾಲ್ಕು ವಿದ್ಯೆಗಳನ್ನು ನಾನು ಕಲಿಸುವುದಿಲ್ಲ ಎಂದು ಕೂಡ ಹೇಳಿದ. ಸೂರ್ಯದೇವರ ಸಲಹೆಯಂತೆ ಹನುಮಂತ ದೇವರು ಮದುವೆಯಾಗಲು ಸಿದ್ಧಗೊಂಡರು. ಆದ್ರೆ ಅವರಿಗೆ ಯಾವುದೇ ಕನ್ಯೆ ಸಿಗಲಿಲ್ಲ. ಈ ವೇಳೆ ಸೂರ್ಯದೇವರು ತನ್ನ ಅತ್ಯಂತ ಬುದ್ಧಿವಂತ ಮಗಳಾದ ಸುವರ್ಚಲಾ ದೇವಿಯನ್ನು ಆಂಜನೇಯನಿಗೆ ನೀಡಿ ಮದುವೆ ಮಾಡಿಸಿದರು. ಸುವರ್ಚಲಾ ದೇವಿಯನ್ನು ಮಹಾನ್ ತಪಸ್ವಿ ಎಂದೇ ಗುರುತಿಸಲಾಗುತ್ತದೆ. ಮದುವೆಯಾದ ಬಳಿಕ ಸುವರ್ಚಲಾ ದೇವಿ ತಮ್ಮ ತಪಸ್ಸಿನಲ್ಲಿಯೇ ಮುಳುಗಿ ಹೋದಳು. ಇತ್ತ ಆಂಜನೇಯ ಸ್ವಾಮಿ ಸೂರ್ಯನಿಂದ ಉಳಿದ ನಾಲ್ಕು ವಿದ್ಯೆಗಳನ್ನು ಕಲಿತು ರಾಮನಾಮ ಜಪದಲ್ಲಿ, ಸೇವೆಯಲ್ಲಿ ಉಳಿದು ಹೋದ. ಹೀಗೆ ಆಂಜನೇಯಸ್ವಾಮಿ ಮದುವೆಯಾದರೂ ಕೂಡ ಬ್ರಹ್ಮಚಾರಿಯಾಗಿಯೇ ಉಳಿದುಹೋದ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us