newsfirstkannada.com

ಮಕ್ಕಳ ವಿಚಾರದಲ್ಲಿ ಮನಸ್ತಾಪ ಇತ್ತಾ? ಕೊನೆಗೂ ಚಂದನ್, ನಿವೇದಿತಾ ಡಿವೋರ್ಸ್‌ನ ಅಸಲಿ ಕಾರಣ ಬಹಿರಂಗ

Share :

Published June 8, 2024 at 5:41pm

Update June 8, 2024 at 5:42pm

  ಭವಿಷ್ಯದಲ್ಲಿ ಅವರಿಬ್ಬರು ತುಂಬಾ ಚೆನ್ನಾಗಿರುತ್ತಾರೆ ಎಂದಿದ್ದೇಕೆ ವಕೀಲೆ ಅನಿತಾ?

  ನಾಡಿನ ಜನತೆಗೆ ಶಾಕ್ ಕೊಟ್ಟಿದ್ದ ಚಂದನ್ ಶೆಟ್ಟಿ, ನಿವೇದಿತಾ ಡಿವೋರ್ಸ್ ಕೇಸ್

  ಚೆನ್ನಾಗಿದ್ದ ಜೋಡಿ ಮಧ್ಯೆ ದಿಢೀರ್ ಏನಾಯ್ತು ಎಂದು ಅಭಿಮಾನಿಗಳು ಬೇಸರ​

ಬೆಂಗಳೂರು: ಕನ್ನಡದ ಗಾಯಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಡಿವೋರ್ಸ್ ಸುದ್ದಿ ನಾಡಿನ ಜನತೆಗೆ ಶಾಕ್ ಕೊಟ್ಟಿತ್ತು. ನಿನ್ನೆವರೆಗೂ ಅನ್ಯೂನ್ಯವಾಗಿ ಕಾಣಿಸಿಕೊಂಡ ಜೋಡಿ ಮಧ್ಯೆ ದಿಢೀರ್ ಏನಾಯ್ತು ಅನ್ನೋ ಗೊಂದಲ ಕಾಡಿತ್ತು.‌ ಇದೀಗ ಚಂದನ್-ನಿವೇದಿತಾ ಡಿವೋರ್ಸ್ ಹಿಂದಿನ ಅಸಲಿ ಕಥೆ ರಿವೀಲ್ ಆಗಿದ್ದು, ಅದರ ಇಂಚಿಂಚು ಮಾಹಿತಿ ಹೊರಬಿದ್ದಿದೆ.

ಆರು ತಿಂಗಳ ಹಿಂದೆಯೇ ಡಿವೋರ್ಸ್ ಸಿದ್ಧತೆ ನಡೆಸಿದ್ದ ಜೋಡಿ!

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದಾಂಪತ್ಯ ಮುರಿದು ಬಿದ್ದಿದೆ. ನಿನ್ನೆ ಫ್ಯಾಮಿಲಿ ಕೋರ್ಟಿನಿಂದ ಡಿವೋರ್ಸ್ ಮಂಜೂರಾಗಿದ್ದು, ಕೆರಿಯರ್ ರೂಪಿಸಿಕೊಳ್ಳುವ ಉದ್ದೇಶದಿಂದ ದೂರ ಆಗ್ತಿದ್ದೇವೆ ಎಂಬ ಕಾರಣ ಕೊಟ್ಟಿದ್ದಾರೆ. ಆದರೆ, ನಿವೇದಿತಾ ಮತ್ತು ಚಂದನ್ ದಾಂಪತ್ಯ ಅಂತ್ಯವಾಗಲು ಮಗು ವಿಚಾರ ಕಾರಣ ಎನ್ನಲಾಗ್ತಿದೆ. ಮಗು ವಿಚಾರದಲ್ಲಿ‌ ಚಂದನ್ ಶೆಟ್ಟಿ ಮತ್ತು ನಿವೇದಿತಾ ನಡುವೆ ಮನಸ್ತಾಪ ಮೂಡಿ, ಇದೇ ಡಿವೋರ್ಸ್​ಗೆ ಕಾರಣ ಎನ್ನಲಾಗಿದೆ. ಆದರೆ ಈ ಆರೋಪವನ್ನ ಚಂದನ್ ಹಾಗೂ ನಿವೇದಿತಾಗೆ ಮ್ಯೂಚಲ್ ಅಡ್ವೋಕೇಟ್ ಆಗಿದ್ದ ಅನಿತಾ ಅವರು ತಳ್ಳಿ ಹಾಕಿದ್ದಾರೆ.

ಇದನ್ನೂ  ಓದಿ: 6 ತಿಂಗಳ ಹಿಂದೆಯೇ ಡಿವೋರ್ಸ್​ಗೆ ನಿರ್ಧಾರ, ರಾಜಿ ಪಂಚಾಯ್ತಿ ಮಾಡಿದ್ರು; ವಕೀಲೆ ಅನಿತಾ ಏನಂದ್ರು ಗೊತ್ತಾ?

ಆರು ತಿಂಗಳ ಹಿಂದೆ ಡಿವೋರ್ಸ್ ನಿರ್ಧಾರ ಮಾಡಲಾಯ್ತು. ಇಬ್ಬರು ಒಪ್ಪಿಗೆಯಿಂದಲೇ ವಿಚ್ಛೇದನ ತೆಗೆದುಕೊಂಡಿದ್ದಾರೆ. ಕಾನೂನು ಪ್ರಕ್ರಿಯೆ ಪೂರ್ಣಗೊಂಡಿದೆ. ಯಾವುದೇ ಕಂಡಿಷನ್, ಬೇಡಿಕೆ ಏನು ಇರಲಿಲ್ಲ. ಸಹಮತದಿಂದ ದೂರ ಆಗಲು ನಿರ್ಧಾರಿಸಿದ್ದಾರೆ. ಮಗು ವಿಚಾರ, ಮೂರನೇ ವ್ಯಕ್ತಿಗಳ ವಿಚಾರ ಎಲ್ಲವೂ ಸುಳ್ಳು. ಭವಿಷ್ಯದ ಕಾರಣಕ್ಕೆ ಒಟ್ಟಾಗಿ ಹೋಗಲು ಸಾಧ್ಯವಿಲ್ಲ ಅಂತ ನಿರ್ಧರಿಸಿದ್ದರು. ಈ ಕಾರಣಕ್ಕೆ ಡಿವೋರ್ಸ್​ ನೀಡಿದ್ದಾರೆ. ಮನೆಯವರು ರಾಜಿ ಪಂಚಾಯ್ತಿ ಎಲ್ಲವೂ ಮಾಡಿದ್ದರು. ಆದರೆ ಅವರಿಗೂ ಹೊಂದಾಣಿಕೆ ಬಗ್ಗೆ ತೃಪ್ತಿ ಆಗಿಲ್ಲ. ಬೇರೆ ಬೇರೆ ಇದ್ದರೆ ಇಬ್ಬರಿಗೂ ಒಳ್ಳೆಯದು ಎಂದು ತೀರ್ಮಾನಿಸಲಾಗಿದೆ. ಚಂದನ್ ಶೆಟ್ಟಿ ಮೊದಲಿಂದಲೂ ನನಗೆ ಪರಿಚಯ. ಮದುವೆ ಆದ್ಮೇಲೆ ನಿವೇದಿತಾ ಪರಿಚಯ. ಇಬ್ಬರು ತುಂಬಾ ಚೆನ್ನಾಗಿಯೇ ಇದ್ದರು. ಆದರೆ, ದಿನಕಳೆದಂತೆ ಮನಸ್ತಾಪ ಬಂದಿರಬಹುದು. ಅದು ಅವರ ವೃತ್ತಿ ಜೀವನಕ್ಕೆ ಸವಾಲಾಗಿರಬಹುದು. ಭವಿಷ್ಯದಲ್ಲಿ ಅವರಿಬ್ಬರು ತುಂಬಾ ಚೆನ್ನಾಗಿರುತ್ತಾರೆ. ಇಬ್ಬರಿಗೂ ಒಳ್ಳೆಯ ಬುದ್ದಿ ಇದೆ. 

ಅನಿತಾ ಆರ್, ಚಂದನ್ – ನಿವೇದಿತಾ ಪರ ವಕೀಲೆ

ಇನ್ನು, ತಾರಾಜೋಡಿ ದೂರ ಆಗಿರುವ ಬಗ್ಗೆ ಆಪ್ತರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಚಂದನ್ ಶೆಟ್ಟಿಯ ಆಪ್ತ ನವರಸನ್ ಹಾಗೂ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಈ ಅನಿರೀಕ್ಷಿತ ಬೆಳವಣಿಗೆ ಶಾಕ್ ಕೊಟ್ಟಿದೆ ಎಂದಿದ್ದಾರೆ.

ಯುವ ದಸರಾ ವೇದಿಕೆಯಲ್ಲಿ ಚಂದನ್ ಪ್ರಪೋಸ್ ಮಾಡಿದ್ದು ನನಗೆ ಎಫೆಕ್ಟ್ ಆಗಿತ್ತು. ಆ ಘಟನೆಯಿಂದ ಯುವ ದಸರಾ ವೇದಿಕೆಯಲ್ಲಿ ನನ್ನ ಸಿನಿಮಾ ಪ್ರಮೋಷನ್‌ಗೆ ಅವಕಾಶ ಸಿಗಲಿಲ್ಲ. ಆದರಿಂದ ಚಂದನ್ ಮೇಲೆ ಕೆಲ ದಿನಗಳ ಕಾಲ ಕೋಪ ಮಾಡಿಕೊಂಡಿದ್ದೆ. ಪರಸ್ಪರ ಮಾತನಾಡಿದಾಗ ನಾವಿಬ್ಬರು ಒಳ್ಳೆ ಸ್ನೇಹಿತರಾದೆವು. ಚಂದನ್‌ಗೆ ಕೇಳುವ ವಿವೇಚನೆ ಇದೆ. ಅರೆಂಜ್ ಮ್ಯಾರೇಜ್ ಆದರೆ ಕಂಟ್ರೋಲ್​ನಲ್ಲಿ ಇರುತ್ತದೆ. ಈ ಹಿಂದೆ ಯಾವ ವಿಚ್ಚೇದನವೂ ಇರಲಿಲ್ಲ. ನಮ್ಮ ಹಿರಿಯರು ನೂರಾರು ಕಾಲ ದಾಂಪತ್ಯ ಜೀವನ ನಡೆಸಿಲ್ವಾ? 350KM ದೂರದಲ್ಲಿ ಕಾರ್ಯಕ್ರಮ ಇದ್ದರೂ ಮದುವೆ ದಿನ ನಮ್ಮ ಮನೆಗೆ ಬಂದು ವಿಶ್ ಮಾಡಿದ್ದರು. ಮದುವೆ, ತಾಳಿ ಬಗ್ಗೆ ಚಂದನ್‌ಗೆ ಗೌರವ ಇದೆ. ಯಾರೋ ಕೋತಿ ಮುಂಡೇವು ಮಧ್ಯದಲ್ಲಿ ತೊಂದರೆ ಮಾಡಿದ್ದಾರೆ ಅಷ್ಟೇ. ಹಾಳಾದರೆ ಖುಷಿ ಪಡುವವರು ಸಾಕಷ್ಟು ಜನ ಇದ್ದಾರೆ. ನಾನು ‌ಒಳ್ಳೆಯದಾಗಲಿ ಎಂದು ಬಯಸುತ್ತೇನೆ. ನಿಮ್ಮ ನಿರ್ಧಾರ ಸರಿ ಎನ್ನುವವರು ಯಾರು ಕಷ್ಟದಲ್ಲಿ ಬರಲ್ಲ. ಹಾಳಾಗಲಿ ಎನ್ನುವವರ ಮಧ್ಯೆ ಚೆನ್ನಾಗಿ ಬದುಕು ಚಂದನ್. ಅವರಿಬ್ಬರನ್ನು ಒಂದು ಮಾಡುವಂತೆ ಜನರು ನನಗೆ ಮೆಸ್ಸೆಜ್ ಮಾಡ್ತಿದ್ದಾರೆ. ನನ್ನ ಮಾತು ಕೇಳ್ತಾರಾ ಅವರು? ಎಲ್ಲರಿಗೂ ಒಳ್ಳೆಯದಾಗಲಿ. 

ಪ್ರಥಮ್, ನಟ

ಚಂದನ್, ನಿವೇದಿತಾ ಮಧ್ಯೆ ಗಲಾಟೆ ಇರಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿರೋ ಸುದ್ದಿಯೆಲ್ಲಾ ಸುಳ್ಳು ಎಂದು ಚಂದನ್ ಆಪ್ತ ಗೆಳೆಯ ನವರಸನ್ ಅವರು ಸ್ಪಷ್ಟಪಡಿಸಿದ್ದಾರೆ. ನಿನ್ನೆ ಮಧ್ಯಾಹ್ನದವರೆಗೂ ನಾನು ಚಂದನ್ ಜೊತೆಯಲ್ಲೇ ಇದ್ದೆ. ನಮಗೂ ಕೂಡ ಇದು ಶಾಕಿಂಗ್ ನ್ಯೂಸ್. ಚಂದನ್‌ಗೆ ಕಾಲ್ ಮಾಡುತ್ತಿದ್ದೇನೆ. ಆದರೆ ನಂಬರ್ ಸ್ವಿಚ್ ಆಫ್ ಬರ್ತಿದೆ. ನಮ್ಮ ಸಿನಿಮಾದಲ್ಲಿ ಚಂದನ್ ನಟಿಸಿದ್ದರು. ಯಾಕೆ ಈ ತರಹ ನಿರ್ಧಾರ ತೆಗೆದುಕೊಂಡ್ರು ಅಂತ ಗೊತ್ತಾಗ್ತಿಲ್ಲ. ನಿವೇದಿತಾ ತುಂಬಾ ಒಳ್ಳೆ ಹುಡುಗಿ. ನಿವೇದಿತಾ ಹಾಗೂ ಚಂದನ್ ಕೆರಿಯರಿಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಅನ್ಸುತ್ತೆ. ಇಬ್ಬರೂ ಅನ್ನೋನ್ಯವಾಗಿ ಇದ್ದರು. ಯಾವ ಗಲಾಟೆಯೂ ಇಲ್ಲ. ಪರಸ್ಪರ ಒಪ್ಪಿ ಈ ನಿರ್ಧಾರ ತೆಗೆದುಕೊಂಡಿರಬಹುದು. ನಿವೇದಿತಾ ಕನಸುಗಳಿಗೆ ಚಂದನ್ ಸಾಥ್ ಕೊಟ್ಟಿದ್ದಾರೆ. ಚಂದನ್ ಕನಸುಗಳಿಗೆ ನಿವೇದಿತಾ ಸಪೋರ್ಟ್ ಮಾಡುತ್ತಿದ್ದರು. ನಿವೇದಿತಾ ನಾಯಕಿಯಾಗಿ ಸಿನಿಮಾ ಮಾಡ್ತಿದ್ರು. ಇದೇ ವಿಚಾರ ವಿಚ್ಛೇದನಕ್ಕೆ ಕಾರಣ ಆಯ್ತಾ ಅನ್ನಿಸುತ್ತೆ. ಮಕ್ಕಳಾಗುವ ವಿಚಾರದಲ್ಲಿ ಚಂದನ್, ನಿವೇದಿತಾ ಮಧ್ಯೆ ಭಿನ್ನಾಭಿಪ್ರಾಯವಿತ್ತು ಅಂತ ಹೇಳುತ್ತಿರೋದು ಶುದ್ಧ ಸುಳ್ಳು. ಸೋಷಿಯಲ್ ಮೀಡಿಯಾದಲ್ಲಿ ಈ ತರಹ ಯಾರ ಬಗ್ಗೆಯೂ ಅವಹೇಳನ ಮಾಡೋದು ತಪ್ಪು. ಅದು ಅವರ ಪರ್ಸನಲ್‌ ಜೀವನ. ಅವರ ಒಳಿತಿಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ನವರಸನ್, ನಿರ್ದೇಶಕ

ಒಟ್ಟಾರೆ ಕಾನೂನಾತ್ಮಕವಾಗಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ದೂರ ಆಗಿದ್ದಾರೆ.‌‌ ಇಬ್ಬರು ಪರಸ್ಪರ ಗೌರವಿಸಿ ಅಧಿಕೃತ ಘೋಷಣೆನೂ‌ ಮಾಡಿದ್ದಾರೆ. ಹಾಗಾಗಿ, ಸ್ಯಾಂಡಲ್ವುಡ್ ಕ್ಯೂಟ್ ಕಪಲ್​ನ ಸುಂದರ ದಾಂಪತ್ಯ ಮುಗಿದ ಅಧ್ಯಾಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಕ್ಕಳ ವಿಚಾರದಲ್ಲಿ ಮನಸ್ತಾಪ ಇತ್ತಾ? ಕೊನೆಗೂ ಚಂದನ್, ನಿವೇದಿತಾ ಡಿವೋರ್ಸ್‌ನ ಅಸಲಿ ಕಾರಣ ಬಹಿರಂಗ

https://newsfirstlive.com/wp-content/uploads/2024/06/chandan3.jpg

Load More