ವಾಷಿಂಗ್ಟನ್ನಲ್ಲಿ ಭಾರತೀಯ ರಾಯಭಾರಿ ಅನುಮಾನಾಸ್ಪದ ಸಾವು
ಮೃತಪಟ್ಟು ಮೂರು ದಿನದ ಮೇಲೆ ಹೊರ ಬಂದ ಮಾಹಿತಿ, ಕಾರಣವೇನು?
ತನಿಖಾ ಸಂಸ್ಥೆಗಳ ತನಿಖೆ ವಿಳಂಬಕ್ಕೆ ಕಾರಣ ಬಿಚ್ಚಿಟ್ಟ ರಾಯಭಾರಿ ಕಚೇರಿ
ಅಮೆರಿಕಾದ ರಾಜಧಾನಿ ವಾಷಿಂಗ್ಟನ್ಲ್ಲಿ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿ ತಮ್ಮ ನಿವಾಸದಲ್ಲಿ ಅನುಮಾನಸ್ಪದವಾಗಿ ಸಾವಿಗೀಡಾಗಿದ್ದು ಅನೇಕ ಅನುಮಾನಗಳನ್ನು ಹುಟ್ಟು ಹಾಕಿದೆ. ಈ ಘಟನೆ ಸೆಪ್ಟಂಬರ್ 18 ರಂದೇ ನಡೆದಿದ್ದು ಅಮೆರಿಕಾದ ತನಿಖಾ ಸಂಸ್ಥೆಗಳು ಈಗ ತನಿಖೆಯನ್ನು ಕೈಗೊಂಡಿರುವುದು ಮತ್ತಷ್ಟು ಸಂಶಯಗಳಿಗೆ ಕಾರಣವಾಗಿದೆ.
ಇದನ್ನೂ ಓದಿ: ಬಯಲಾಯ್ತು ಮಾಜಿ ಗರ್ವನರ್ ಆಟ-ಕಳ್ಳಾಟ.. 58 ಲವ್ವರ್ಸ್ ಹೊಂದಿದ್ದ ಮಹಿಳಾ ರಾಜಕಾರಣಿ ಕಾರ್ಣಿಕ ಬಯಲು
ಸಾವಿಗೆ ಕಾರಣವೇನು ಎಂಬುದು ಇನ್ನೂ ಕೂಡ ತಿಳಿದು ಬಂದಿಲ್ಲ. ತನಿಖಾ ಸಂಸ್ಥೆಗಳು ಇದು ಆತ್ಮಹತ್ಯೆ ಅಥವಾ ಕೊಲೆಯ ಎಂಬುದನ್ನು ಇನ್ನೂ ಕೂಡ ಸ್ಪಷ್ಟಪಡಿಸಿಲ್ಲ. ಅಮೆರಿಕಾದಲ್ಲಿರುವ ಭಾರತೀಯ ರಾಯಭಾರಿ ಇಲಾಖೆ ಒಂದು ಹೇಳಿಕೆಯನ್ನಷ್ಟೇ ನೀಡಿ ಉಳಿದು ಯಾವುದೇ ಅಂಶಗಳನ್ನು ಸ್ಪಷ್ಟಪಡಿಸಿಲ್ಲ. ಈ ರೀತಿಯಾಗಿ ಭಾರತೀಯ ರಾಯಭಾರಿಯ ಸಾವು ಉಂಟಾಗಿದ್ದು ತುಂಬಾ ನೋವು ತಂದಿದೆ. ಸದ್ಯದಲ್ಲಿಯೇ ಮೃತಪಟ್ಟಿರುವ ಭಾರತೀಯ ರಾಯಭಾರಿಯ ಬಗ್ಗೆ ಮಾಹಿತಿಯನ್ನು ಬಹಿರಂಗ ಮಾಡಲಿದ್ದೇವೆ. ಸೆಪ್ಟಂಬರ್ 18 ರಂದು ಅವರು ನಿಧನರಾಗಿದ್ದಾರೆ ಎಂದು ಹೇಳಲು ನಮಗೆ ಅತೀವ ದುಃಖವಾಗುತ್ತಿದೆ ಎಂದಷ್ಟೇ ಹೇಳಿಕೊಂಡಿದ್ದಾರೆ
ಇದನ್ನು ಓದಿ: ಹಿಜಬುಲ್ನ ಟಾಪ್ ಕಮಾಂಡರ್ನ ಕಥೆ ಮುಗಿಸಿದ ಇಸ್ರೇಲ್ ! ಯಾರು ಈ ಇಬ್ರಾಹಿಮ್ ಅಕಿಲ್..?
ಘಟನೆ ನಡೆದು ಮೂರು ದಿನವಾದರೂ ಕೂಡ ಈ ಬಗ್ಗೆ ಯಾರಿಗೂ ಮಾಹಿತಿ ಇಲ್ಲದಂತಾಗಿದ್ದು ಹೇಗೆ? ಇಷ್ಟು ತಡವಾಗಿ ಭಾರತೀಯ ರಾಯಭಾರಿಯ ಸಾವಿನ ವಿಷಯ ಆಚೆ ಬಂದಿದ್ದು ಹೇಗೆ. ಇದು ಆತ್ಮಹತ್ಯೆಯಾ ಕೊಲೆಯಾ ಎಂಬ ಯಾವುದೇ ಮಾಹಿತಿಯನ್ನು ಇನ್ನೂ ಕೂಡ ಬಿಟ್ಟುಕೊಟ್ಟಿಲ್ಲ. ರಾಯಭಾರಿ ಕಚೇರಿಯ ಅಧಿಕಾರಿ ಹೆಸರು ರಾಜೇಶ್ ವರ್ಮ ಎಂದು ತಿಳಿದು ಬಂದಿದೆ. ಅವರ ಸಾವು ಅನುಮಾನಾಸ್ಪದ ಸಾವು ಎಂದಷ್ಟೇ ಹೇಳಲಾಗುತ್ತಿದ್ದು. ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಯ ಕುಟುಂಬದೊಂದಿಗೆ ಸಂಪರ್ಕ ಸಾಧಿಸಿದ್ದು ವಿಷಯವನ್ನು ತಿಳಿಸಿದೆ ಎಂಬ ಮಾಹಿತಿಯು ಬಂದಿದೆ. ಇನ್ನು ಸಾವಿನ ವಿಷಯ ಬಹಿರಂಗಕ್ಕೆ ವಿಳಂಬ ಮಾಡಿದ ವಿಚಾರವಾಗಿ ಸ್ಪಷ್ಟನೆ ನೀಡಿದ ರಾಯಭಾರಿ ಕಚೇರಿ ಹೆಚ್ಚಿನ ವಿಚಾರವನ್ನು ಅವರ ಕೌಟುಂಬಿಕ ರಹಸ್ಯ ಕಾಪಾಡುವ ಉದ್ದೇಶದಿಂದ ಬಹಿರಂಗಗೊಳಿಸಿಲ್ಲ ಎಂದು ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ