ಯುವ ಆಲ್ರೌಂಡರ್ ಮುಂದೆ ಕಿವೀಸ್ ಕ್ಲೀನ್ ಬೋಲ್ಡ್
ಮೊದಲು ಅಶ್ವಿನ್ ಮೇಲುಗೈ, ಆಮೇಲೆ ಸುಂದರ್ ಮೇಲುಗೈ
ರಚಿನ್ ರವೀಂದ್ರ ಔಟ್ ಮಾಡಿದ ಮೇಲೆ ಸುಂದರ್ಗೆ ಲಕ್
ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ನ್ಯೂಜಿಲೆಂಡ್ ಟೀಮ್ ಅನ್ನು ಕೇವಲ 259 ರನ್ಗಳಿಗೆ ರೋಹಿತ್ ಪಡೆ ಆಲೌಟ್ ಮಾಡಿದೆ. ಇದಕ್ಕೆ ಮುಖ್ಯ ಕಾರಣವಾಗಿದ್ದು ಭಾರತದ ಯಂಗ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್. ಕಿವೀಸ್ ಬ್ಯಾಟ್ಸ್ಮನ್ಗಳ ಕ್ರೀಸ್ಗೆ ಬಂದಷ್ಟೇ ವೇಗದಲ್ಲಿ ಸುಂದರ್ ಪೆವಿಲಿಯನ್ ದಾರಿ ತೋರಿಸಿದರು.
ಪುಣೆಯಲ್ಲಿರುವ ಮಹಾರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕಿವೀಸ್ ಕ್ಯಾಪ್ಟನ್ ಟಾಮ್ ಲಾಥಮ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್ಗೆ ಆಗಮಿಸಿದ ಓಪನರ್ಸ್ ಕೆಲ ಹೊತ್ತು ಭಾರತದ ಬೌಲರ್ಗಳನ್ನ ಕಾಡಿದರು. ಆದರೆ ಇದಕ್ಕೆ ಆರ್.ಅಶ್ವಿನ್ ಅವರು ಬ್ರೇಕ್ ಹಾಕಿದರು. ಮೊದಲು ನ್ಯೂಜಿಲೆಂಡ್ ಬ್ಯಾಟ್ಸ್ಮನ್ಗಳ ಮೇಲೆ ಆರ್ ಅಶ್ವಿನ್ ಭರ್ಜರಿ ಸವಾರಿ ನಡೆಸಿದ್ದರು. ಮೊದಲ 3 ವಿಕೆಟ್ಗಳನ್ನ ಅಶ್ವಿನ್ ಪಡೆದಿದ್ದರು. ಆದರೆ ಬಳಿಕ ಯಾವ ವಿಕೆಟ್ ಕೂಡ ಅವರಿಗೆ ಬೀಳಲಿಲ್ಲ. ಇದೇ ವೇಳೆ ಸುಂದರ್ ಕೈಚಳಕ ಆರಂಭವಾಯಿತು.
ಇದನ್ನೂ ಓದಿ: ಬೇಲೆಕೇರಿ ಅದಿರು ಕೇಸ್; ಕಾಂಗ್ರೆಸ್ MLA ಸತೀಶ್ ಸೈಲ್ ಅರೆಸ್ಟ್.. ಇಂದು ಕೋರ್ಟ್ನಿಂದ ಶಿಕ್ಷೆ ಪ್ರಕಟ
ಆಲ್ರೌಂಡರ್ ಆಗಿ ಅಖಾಡಕ್ಕೆ ಇಳಿದ ವಾಷಿಂಗ್ಟನ್ ಸುಂದರ್ ಅದ್ಭುತ ಸ್ಪೆಲ್ಗಳನ್ನ ಮಾಡಿದರು. ಸುಂದರ್ ಸ್ಪಿನ್ಗೆ ನ್ಯೂಜಿಲೆಂಡ್ ಬ್ಯಾಟರ್ಸ್ ಹಣ್ಣೆಲೆಗಳಂತೆ ಉದುರಿದರು. 65 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ರಚಿನ್ ರವೀಂದ್ರ ಅವರ ವಿಕೆಟ್ ಅನ್ನು ವಾಷಿಂಗ್ಟನ್ ಸುಂದರ್ ಉರುಳಿಸಿದರು. ಇದರ ಬೆನ್ನಲ್ಲೇ ಸುಂದರ್ಗೆ ಅದೃಷ್ಟ ಕುಲಾಯಿಸಿತು. ರಚಿನ್ ವಿಕೆಟ್ ಪಡೆದ ಬಳಿಕ 6 ವಿಕೆಟ್ಗಳು ಸುಂದರ್ ಪಾಲಾದವು.
23 ಓವರ್ಗಳನ್ನ ಮಾಡಿದ ಯಂಗ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ 4 ಓವರ್ ಮೇಡಿನ್ ಮಾಡಿದ್ದಲ್ಲದೇ ಕೇವಲ 59 ರನ್ ನೀಡಿ 7 ವಿಕೆಟ್ಗಳನ್ನ ಉರುಳಿಸಿದರು. ಸುಂದರ್ ಸ್ಪಿನ್ ಮುಂದೆ ಕಿವೀಸ್ ಆಟಗಾರರು ಅಕ್ಷರಶಃ ನೆಲಕಚ್ಚಿದರು. ಈ ಮೂಲಕ ಸುಂದರ್ ತಮ್ಮ ವೃತ್ತಿ ಜೀವನದಲ್ಲೇ 59 ರನ್ಗೆ 7 ವಿಕೆಟ್ ಪಡೆದು ಸಂಭ್ರಮಿಸಿದರು. ಈ ಮೊದಲ ಇನ್ನಿಂಗ್ಸ್ನಲ್ಲಿ ಎಲ್ಲ ವಿಕೆಟ್ಸ್ ಅನ್ನ ಇಬ್ಬರು ಸ್ಪಿನ್ನರ್ಗಳು ಪಡೆದಿದ್ದಾರೆ. ಪಂದ್ಯದಲ್ಲಿ ಕಿವೀಸ್ 259 ರನ್ಗಳಿಗೆ ಆಲೌಟ್ ಆಗಿದ್ದು ಟೀಮ್ ಇಂಡಿಯಾ 16 ರನ್ಗೆ ಒಂದು ಕಳೆದುಕೊಂಡಿದ್ದು ಕ್ರೀಸ್ನಲ್ಲಿ ಜೈಸ್ವಾಲ್ ಹಾಗೂ ಶುಭ್ಮನ್ ಗಿಲ್ ಇದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ