/newsfirstlive-kannada/media/post_attachments/wp-content/uploads/2025/06/Sai-sudarshan-1.jpg)
ಇಂಡೋ-ಇಂಗ್ಲೆಂಡ್​​ ನಡುವಿನ 2ನೇ ಟೆಸ್ಟ್​​ ಕದನಕ್ಕೆ ಕೌಂಟ್​​ಡೌನ್​ ಶುರುವಾಗಿದೆ. ಟೆಸ್ಟ್​ ಸರಣಿಯ ಮೊದಲ ಪಂದ್ಯವನ್ನ ಕೈ ಚೆಲ್ಲಿರೋ ಟೀಮ್​ ಇಂಡಿಯಾಗೆ ಎಡ್ಜ್​ಬಾಸ್ಟನ್​ನಲ್ಲಿ ಅಗ್ನಿಪರೀಕ್ಷೆ ಕಾದಿದೆ. ಕಳೆದ 58 ವರ್ಷಗಳಲ್ಲಿ ಈ ಸ್ಟೇಡಿಯಂನಲ್ಲಿ ಟೀಮ್​ ಇಂಡಿಯಾ 8 ಟೆಸ್ಟ್​​ ಪಂದ್ಯಗಳನ್ನಾಡಿದೆ. ಈ ಪೈಕಿ ಒಂದೇ ಒಂದು ಪಂದ್ಯವನ್ನೂ ಗೆದ್ದಿಲ್ಲ. ಸತತ ಸೋಲುಂಡಿರೋ ಅನ್​ಲಕ್ಕಿ ಪಿಚ್​​ನಲ್ಲಿ ಅದೃಷ್ಟದ ಹುಡುಕಾಟ ನಡೆಸಬೇಕಿದೆ.
ಇನ್ನು ಇವತ್ತಿನ ಪಂದ್ಯದಲ್ಲಿ ಟೀಂ ಇಂಡಿಯಾದ ಪ್ಲೇಯಿಂಗ್-11ನಲ್ಲಿ ಮಹತ್ವದ ಬದಲಾವಣೆಯ ಸುಳಿವು ಸಿಕ್ಕಿದೆ. ಐಪಿಎಲ್ ಸ್ಟಾರ್ ಸಾಯಿ ಸುದರ್ಶನ್​​ಗೆ ಕೊಕ್ ನೀಡೋದು ಪಕ್ಕಾ ಆಗಿದೆ. ಮೊದಲ ಪಂದ್ಯದಲ್ಲಿ ಅವರ ಪ್ರದರ್ಶನ್ ನಿರಾಸದಾಯಕವಾಗಿತ್ತು. ಹೀಗಾಗಿ 2ನೇ ಟೆಸ್ಟ್​ನಲ್ಲಿ ಅವರನ್ನು ಕೈಬಿಡಲು ಟೀಂ ಇಂಡಿಯಾ ನಿರ್ಧರಿಸಿದೆ.
ಬದಲಿ ಆಟಗಾರ ಯಾರು..?
ಸಾಯಿ ಸುದರ್ಶನ್ ಬದಲಿಗೆ ವಾಷಿಂಗ್ಟನ್ ಸುಂದರ್​ ಅವರನ್ನು ಕಣಕ್ಕೆ ಇಳಿಸಲು ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ಸುದರ್ಶನ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬರುತ್ತಿದ್ದರು. ಸುದರ್ಶನ್ ಪ್ಲೇಯಿಂಗ್​-11ನಿಂದ ಹೊರಗೆ ಇರೋದ್ರಿಂದ ಮೂರನೇ ಕ್ರಮಾಂಕದಲ್ಲಿ ಕನ್ನಡಿಗ ಕರುಣ್ ನಾಯರ್ ಬ್ಯಾಟ್ ಬೀಸಲಿದ್ದಾರೆ.
ಇದನ್ನೂ ಓದಿ: RCB ಸ್ಟಾರ್ ದಯಾಳ್ ಜೊತೆಗಿನ ವಿಡಿಯೋ ಕರೆಯ ಸ್ಕ್ರೀನ್​ಶಾಟ್ ಹಂಚಿಕೊಂಡ ಸಂತ್ರಸ್ತೆ.. ಚಾಟ್ ಕೂಡ ವೈರಲ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ