/newsfirstlive-kannada/media/post_attachments/wp-content/uploads/2025/07/TEAM_INDIA-1.jpg)
ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾದ ಮಾರಕ ಬೌಲಿಂಗ್ ದಾಳಿಗೆ ಇಂಗ್ಲೆಂಡ್ ತಂಡ ಅಲ್ಪ ಮೊತ್ತಕ್ಕೆ ಕುಸಿದಿದೆ. ಇನ್ನಿಂಗ್ಸ್ನಲ್ಲಿ ಆಂಗ್ಲದ ಯಾವೊಬ್ಬ ಬ್ಯಾಟರ್ ಕೂಡ 40 ರನ್ಗಳ ಗಡಿ ದಾಟಲೇ ಇಲ್ಲ. ಹೀಗಾಗಿ 62.1 ಓವರ್ಗಳಲ್ಲಿ 192 ರನ್ಗೆ ಆಲೌಟ್ ಆಗಿದೆ.
ಲಂಡನ್ನ ಲಾರ್ಡ್ಸ್ನ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿದ್ದ ಆಂಗ್ಲ ಪಡೆ 387 ರನ್ಗಳಿಗೆ ಆಲೌಟ್ ಆಗಿತ್ತು. ಇದರ ಬೆನ್ನಲ್ಲೇ ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ ಕೆ.ಎಲ್ ರಾಹುಲ್ ಅವರ ಅದ್ಭುತವಾದ ಶತಕದಿಂದ 387 ರನ್ಗೆ ಆಲೌಟ್ ಆಗಿತ್ತು. ಇದರಿಂದ ಮೊದಲ ಇನ್ನಿಂಗ್ಸ್ ಟೈ ಎಂದೇ ಹೇಳಬಹುದು.
ಇದನ್ನೂ ಓದಿ: ಜೀವ ಕಸಿದ ಹೃದಯ.. ಹಾರ್ಟ್ ಅಟ್ಯಾಕ್ನಿಂದ ಬೆಂಗಳೂರಿನ ಯುವಕ ಚಿಕ್ಕಮಗಳೂರಲ್ಲಿ ನಿಧನ
ಭಾರತದ ಪರ ಬೌಲಿಂಗ್ನಲ್ಲಿ ಮಾರಕ ದಾಳಿ ಮಾಡಿದ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಆಂಗ್ಲ ಬ್ಯಾಟರ್ಗಳನ್ನ ಬೇಟೆಯಾಡಿದರು. ಕಳೆದ ಇನ್ನಿಂಗ್ಸ್ನಲ್ಲಿ 5 ವಿಕೆಟ್ಗಳ ಗೊಂಚಲು ಪಡೆದಿದ್ದ ಯಾರ್ಕರ್ ಸ್ಪೆಷಲಿಸ್ಟ್ ಬುಮ್ರಾ ಅವರು ಈ ಇನ್ನಿಂಗ್ಸ್ನಲ್ಲಿ ಕೇವಲ ಎರಡು ವಿಕೆಟ್ ಕಬಳಿಸಿದರು. ಇನ್ನೊಂದೆಡೆ ಎಂದಿನಂತೆ ತಮ್ಮ ಸಾಮರ್ಥ್ಯ ತೋರಿದ ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದು ಸಂಭ್ರಮಿಸಿದರು. ಇನ್ನು ವಾಷಿಂಗ್ಟನ್ ಸುಂದರ್ 4 ವಿಕೆಟ್ ಕಬಳಿಸಿ ಇಂಗ್ಲೆಂಡ್ಗೆ ಬಿಗ್ ಬ್ರೇಕ್ ಹಾಕಿದರು.
ಸದ್ಯ ಟೀಮ್ ಇಂಡಿಯಾಕ್ಕೆ 193 ರನ್ಗಳ ಗುರಿಯನ್ನು ಇಂಗ್ಲೆಂಡ್ ತಂಡ ನೀಡಿದೆ. ಈ ಅಲ್ಪ ಮೊತ್ತದ ರನ್ಗಳ ಟಾರ್ಗೆಟ್ ಮಾಡಿದರೆ ಶುಭ್ಮನ್ ಗಿಲ್ ಪಡೆ ಮತ್ತೊಂದು ಮನಮೋಹಕ ವಿಜಯ ಪಡೆದಂತೆ ಆಗುತ್ತದೆ. ಸದ್ಯ ಸರಣಿಯಲ್ಲಿ ತಲಾ ಒಂದೊಂದು ಟೆಸ್ಟ್ ಪಂದ್ಯ ಗೆದ್ದಿದ್ದು ಈ ಪಂದ್ಯ ಗೆದ್ದವರು ಸರಣಿಯಲ್ಲಿ ಮುನ್ನಡೆ ಕಾಯ್ದುಕೊಳ್ಳಲ್ಲಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ