VIDEO: ಭಾರತ, ಪಾಕ್​ ರೋಚಕ ಪಂದ್ಯ; ಲೈವ್​​ನಲ್ಲೇ ಕೊಹ್ಲಿಯನ್ನು ಕೆಣಕಿದ ಸ್ಟಾರ್​ ಪ್ಲೇಯರ್​

author-image
Ganesh Nachikethu
Updated On
VIDEO: ಭಾರತ, ಪಾಕ್​ ರೋಚಕ ಪಂದ್ಯ; ಲೈವ್​​ನಲ್ಲೇ ಕೊಹ್ಲಿಯನ್ನು ಕೆಣಕಿದ ಸ್ಟಾರ್​ ಪ್ಲೇಯರ್​
Advertisment
  • ಚಾಂಪಿಯನ್ಸ್ ಟ್ರೋಫಿ 2025ರ ಹೈವೋಲ್ಟೇಜ್ ಪಂದ್ಯ
  • ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ, ಪಾಕ್​ ಸೆಣಸಾಟ!
  • ರಾಟ್ ಕೊಹ್ಲಿ ಅವರನ್ನ ಗೇಲಿ ಮಾಡಿದ ವಾಸಿಮ್ ಅಕ್ರಮ್

ಇಂದು ನಡೆಯುತ್ತಿರೋ ಚಾಂಪಿಯನ್ಸ್ ಟ್ರೋಫಿ 2025ರ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಸೆಣಸಾಡುತ್ತಿವೆ. ಇದಕ್ಕೆ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಸಾಕ್ಷಿಯಾಗಿದೆ. ಈ ಪಂದ್ಯದ ಮೇಲೆ ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳ ಚಿತ್ತ ನೆಟ್ಟಿದೆ.

ಇನ್ನು, ರೋಚಕ ಪಂದ್ಯಕ್ಕೂ ಮುನ್ನ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಮ್ ಅಕ್ರಮ್ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರನ್ನು ಗೇಲಿ ಮಾಡಿದ್ದಾರೆ. ಇದು ಟೀಮ್​ ಇಂಡಿಯಾ ಅಭಿಮಾನಿಗಳಿಗೆ ಭಾರೀ ಸಿಟ್ಟು ತರಿಸಿದೆ.

ಏನಂದ್ರು ವಾಸಿಮ್​ ಅಕ್ರಮ್​​?

ಪಾಕ್​ ತಂಡದ ಮಾಜಿ ಕ್ರಿಕೆಟರ್​ ವಾಸಿಮ್ ಅಕ್ರಮ್. ಇವರು ಪಾಕಿಸ್ತಾನಿ ಟಿವಿ ಚಾನೆಲ್‌ವೊಂದರ ಲೈವ್ ಶೋನಲ್ಲಿ ವಿರಾಟ್ ಕೊಹ್ಲಿಯನ್ನು ಗೇಲಿ ಮಾಡಿದ್ದಾರೆ. ಲೈವ್​ ಶೋನಲ್ಲಿ ಟಿವಿ ಚಾನೆಲ್‌ ನಿರೂಪಕ ಕೊಹ್ಲಿ ಬಗ್ಗೆ ಏನಾದರೂ ಚರ್ಚಿಸೋಣ ಎಂದು ಅಕ್ರಮ್​ಗೆ ಹೇಳಿದರು. ಇದಕ್ಕೆ ಅಕ್ರಂ 'ನೀವು ಕೊಹ್ಲಿ ಬಗ್ಗೆ ಮಾತನಾಡಲು ಬಯಸಿದರೆ ಸ್ಟಾರ್ ಸ್ಪೋರ್ಟ್ಸ್ ನೋಡಿ ಎಂದರು. ಇಷ್ಟೇ ಅಲ್ಲ ಅಕ್ರಮ್ ಲೈವ್ ಶೋನಲ್ಲಿ ಜೋರಾಗಿ ನಗಲು ಪ್ರಾರಂಭಿಸಿದರು. ಈ ವಿಡಿಯೋ ಸೋಷಿಯಲ್​​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ.

ಕೊಹ್ಲಿ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದಾರೆ. ಹಾಗಾಗಿ ಇವರನ್ನು ಹಲವರು ಟೀಕಿಸುತ್ತಿದ್ದಾರೆ. ಇಂದಿನ ಹೈವೋಲ್ಟೇಜ್​ ಪಂದ್ಯದಲ್ಲೂ ಕೊಹ್ಲಿ ಮೇಲೆ ಭಾರೀ ನಿರೀಕ್ಷೆ ಇದೆ. ಪಾಕ್​​ ವಿರುದ್ಧ ಕೊಹ್ಲಿ ಉತ್ತಮ ಅಂಕಿ-ಅಂಶಗಳನ್ನು ಕಲೆ ಹಾಕಿದ್ದಾರೆ. ಇದುವರೆಗೂ ತಾನು ಆಡಿರೋ 16 ಏಕದಿನ ಪಂದ್ಯಗಳಲ್ಲಿ 52.15ರ ಸರಾಸರಿಯಲ್ಲಿ 678 ರನ್ ಗಳಿಸಿದ್ದಾರೆ. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​ 100ಕ್ಕೂ ಹೆಚ್ಚು ಇದೆ. ಈ ಪೈಕಿ 3 ಶತಕ ಮತ್ತು 2 ಅರ್ಧಶತಕ ಸಿಡಿಸಿದ್ದು, ಹೈಎಸ್ಟ್​ ಸ್ಕೋರ್​ 183 ರನ್‌ ಆಗಿದೆ.

ಇದನ್ನೂ ಓದಿ:ಪಾಕ್​ ವಿರುದ್ಧ ರೋಚಕ ಪಂದ್ಯ; ಟೀಮ್​ ಇಂಡಿಯಾಗೆ ಕಾಡುತ್ತಿದೆ ಈ ಸ್ಟಾರ್​ ಆಟಗಾರನ ಅನುಪಸ್ಥಿತಿ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment