/newsfirstlive-kannada/media/post_attachments/wp-content/uploads/2024/03/AMRUTHADHARE_1.jpg)
ಸದ್ಯದ ಟಾಪ್ ಮೋಸ್ಟ್ ವಾಚಿಂಗ್ ಸೀರಿಯಲ್ಸ್ಗಳಲ್ಲಿ ಜೀ ವಾಹಿನಿಯ ಅಮೃತಧಾರೆ ಕತೆ ಕೂಡ ಒಂದು. ಅಮೃತಧಾರೆ ಧಾರಾವಾಹಿಯ ಕತೆ ವೀಕ್ಷಕರಿಗೆ ತುಂಬಾನೆ ಇಷ್ಟವಾಗ್ತಿದೆ. ಮಲ್ಲಿ-ಜೈದೇವ್ ಮದುವೆ ಆದ ನಂತರದಲ್ಲಂತೂ ಜನರಿಗೆ ಕಥೆಯ ಎಳೆ ಇನ್ನು ಹೆಚ್ಚಿಗೆ ಕುತೂಹಲ ಮೂಡಿಸಿದೆ.
ಅಮೃತಧಾರೆ ಧಾರಾವಾಹಿಯ ಎಲ್ಲ ಪಾತ್ರಗಳು ವೀಕ್ಷಕರ ಮೈಂಡಲ್ಲಿ ರಿಜಿಸ್ಟರ್ ಆಗಿವೆ. ಇಂದಿನವರೆಗೂ ನಾವೆಲ್ರು ನೋಡ್ಕೊಂಡು ಬಂದಿರೋ ಹಾಗೆ ಸೀರಿಯಲ್ನ ಪ್ರಮುಖ ಪಾತ್ರಗಳಿಗೆ ಹೆಚ್ಚಿನ ರೆಸ್ಪಾನ್ಸ್ ಬರೋದು ಸಹಜ ಆದ್ರೆ, ಇತ್ತೀಚಿನ ಧಾರಾವಾಹಿಗಳಲ್ಲಿ ವೀಕ್ಷಕರಿಗೆ ಎಲ್ಲ ಪಾತ್ರಗಳು ಅಚ್ಚುಮೆಚ್ಚು ಆಗುತ್ತಿವೆ. ಅವರ ಪ್ರತಿಭೆಯನ್ನ ಮನಸೋಯಿಚ್ಛೆ ಹೊಗಳುತ್ತಿದ್ದಾರೆ.
ಇದನ್ನೂ ಓದಿ: ಮೋಹಕ ತಾರೆ ಅಭಿಮಾನಿಗಳಿಗೆ ಬೇಸರದ ಸುದ್ದಿ.. ಶಾಕಿಂಗ್ ನಿರ್ಧಾರ ಅನೌನ್ಸ್ ಮಾಡಿದ ರಮ್ಯಾ; ಏನದು?
ಅಮೃತಧಾರೆಯಲ್ಲಿ ಗೌತಮ್ ದಿವಾನ್ ಮನೆಗೆಲಸದ ಹುಡುಗಿ ಮಲ್ಲಿ ಪಾತ್ರವು ವೀಕ್ಷಕರಿಗೆ ತುಂಬಾ ಫೆವರಿಟ್ ಆಗಿದೆ. ಮಲ್ಲಿ ಪಾತ್ರ ನಿಭಾಯಿಸ್ತಿರೋ ನಟಿ ರಾಧಾ ಭಗವತಿ ಅವರನ್ನ ವೀಕ್ಷಕರು ಹೊಗಳುತ್ತಿದ್ದಾರೆ. ಮಲ್ಲಿಯ ಇನೋಸೆಂಟ್, ಡೈಲಾಗ್ಸ್ ಡೆಲಿವರಿ ಎಲ್ಲವೂ ಆನ್ ಪಾಯಿಂಟ್ ಇದೆ. ಇನ್ನೂ ಮಲ್ಲಿಯ ಪಾತ್ರಕ್ಕೆ ವೀಕ್ಷಕರು ಎಷ್ಟು ಕನೆಕ್ಟ್ ಆಗಿದ್ದಾರೆ ಅಂದ್ರೆ, ಫೋಟೋಸ್, ವಿಡಿಯೋಸ್‌ಗೆ ಕಾಮೆಂಟ್ ಮಾಡ್ತಿದ್ದಾರೆ. ರಾಧಾ ಭಗವತಿ ಅವರ ಇನ್‌ಸ್ಟಾ ಪೇಜ್ ನೋಡೋರ ಸಂಖ್ಯೆ ಹೆಚ್ಚಾಗ್ತಿದೆ.
ಜನರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ
ರಾಧಾ ಭಗವತಿ ಅವರು ಬರೀ ನಟಿ ಅಷ್ಟೆ ಅಲ್ಲ, ಪ್ಯಾಷನೇಟ್ ಸಿಂಗರ್ ಕೂಡ ಹೌದು. ಆಗಾಗ್ಗೆ ಶೂಟಿಂಗ್ ಬಿಡುವಿನ ಸಮಯದಲ್ಲಿ ಹಾಡುಗಳನ್ನ ಹಾಡಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದಕ್ಕೂ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಮೃತಧಾರೆ ಧಾರಾವಾಹಿಯಲ್ಲಿ ಸಹ ಕಲಾವಿದರ ನಟನೆಗೂ ವೀಕ್ಷಕರು ಅಷ್ಟೆ ಪ್ರಾಮುಖ್ಯತೆ ಕೊಟ್ಟು ವೀಕ್ಷಣೆ ಮಾಡ್ತಿರೋದು ಶ್ಲಾಘನೀಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ