newsfirstkannada.com

ಚಿಕ್ಕಬಳ್ಳಾಪುರದಲ್ಲಿ ಆಂಧ್ರ ಸಿಎಂ ಜಗನ್ ಭಾವಚಿತ್ರವುಳ್ಳ ವಾಚ್​ ಸಾಗಾಟ.. 1 ಲಕ್ಷ ರೂಪಾಯಿ ಮೌಲ್ಯದ ಕೈಗಡಿಯಾರ ​ಸೀಜ್ ​

Share :

Published March 21, 2024 at 11:42am

Update March 21, 2024 at 12:53pm

    ಕರ್ನಾಟಕದಲ್ಲಿ ಆಂಧ್ರ ಸಿಎಂ ಭಾವಚಿತ್ರವುಳ್ಳ ವಾಚ್​ ಸಾಗಾಟ

    ಚುನಾವಣಾ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವಾಚ್​ ಸಾಗಾಟದ ವಾಹನ

    1 ಲಕ್ಷ ರೂಪಾಯಿ ಮೌಲ್ಯದ ವಾಚ್ ಸೀಜ್​ ಮಾಡಿದ ಚುನಾವಣಾ ಅಧಿಕಾರಿಗಳು

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾದ ಬೆನ್ನಲ್ಲೇ ಗಿಫ್ಟ್​ ಪಾಲಿಟಿಕ್ಸ್​ ಸದ್ದು ಮಾಡುತ್ತಿದೆ. ನೀತಿ ಸಂಹಿತಿ ಜಾರಿದರೂ ಸಹ ಅಕ್ರಮ ಹಣ, ದುಬಾರಿ ವಸ್ತುಗಳ ಸಾಗಾಟ ಬೆಳಕಿಗೆ ಬರುತ್ತಿದೆ. ಅದರಂತೆಯೇ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಚಿತ್ರವುಳ್ಳ ವಾಚ್​ಗಳು ಚುನಾವಣಾ ಸಿಬ್ಬಂದಿ ಕೈಗೆ ಸಿಕ್ಕಿದೆ. ಸುಮಾರು 1 ಲಕ್ಷ ರೂಪಾಯಿ ಮೌಲ್ಯದ ವಾಚ್​ ಅನ್ನು ಸೀಜ್​ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಚೆಕ್ ಪೋಸ್ಟ್ ಬಳಿ​ ಅಕ್ರಮವಾಗಿ ವಾಚ್​​ ಸಾಗಿಸಲಾಗುತ್ತಿತ್ತು. ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಚಿತ್ರವನ್ನು ಹೊಂದಿರುವ 96 ವಾಚ್​ಗಳನ್ನು ಚುನಾವಣಾ ಸಿಬ್ಬಂದಿ ಸೀಜ್​ ಮಾಡಿದ್ದಾರೆ. 1 ಲಕ್ಷ ರೂಪಾಯಿ ಮೌಲ್ಯದ ಕೈ ಗಡಿಯಾರಗಳನ್ನ ಜಪ್ತಿ ಮಾಡಿದ್ದಾರೆ. ವಾಚ್ ಗಳನ್ನು ಅನಂತಪುರದಿಂದ ಬೆಂಗಳೂರಿಗೆ ಕಾರಿನಲ್ಲಿ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ.

ಅನಂತಪುರದ ವೈಎಸ್ಆರ್ ಕಾಂಗ್ರೆಸ್ ಪಾರ್ಟಿಯ ಬಂಡಿ ನಾಗೇಂದ್ರ ಹಾಗೂ ಗನ್ ಮ್ಯಾನ್ ನಾಗೇಂದ್ರ ವಿರುದ್ಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಪಿ 31 ಹೆಚ್ ಇ 1111 ಸಂಖ್ಯೆಯ ಫಾರ್ಚುನರ್ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿಕ್ಕಬಳ್ಳಾಪುರದಲ್ಲಿ ಆಂಧ್ರ ಸಿಎಂ ಜಗನ್ ಭಾವಚಿತ್ರವುಳ್ಳ ವಾಚ್​ ಸಾಗಾಟ.. 1 ಲಕ್ಷ ರೂಪಾಯಿ ಮೌಲ್ಯದ ಕೈಗಡಿಯಾರ ​ಸೀಜ್ ​

https://newsfirstlive.com/wp-content/uploads/2024/03/jaganmohan-Reddy.jpg

Load More