newsfirstkannada.com

ಮಕ್ಕಳ ಅಶ್ಲೀಲ ವಿಡಿಯೋ ನೋಡುವುದು ಅಪರಾಧ ಅಲ್ಲ, ಆದರೆ.. -ಹೈಕೋರ್ಟ್​

Share :

Published January 13, 2024 at 2:09pm

    ವಿಡಿಯೋಗಳನ್ನು ವೈಯಕ್ತಿಕವಾಗಿ ನೋಡುವುದು ಅಪರಾಧವಲ್ಲ

    ಪೋಕ್ಸೋ ಮತ್ತು ಐಟಿ ಆ್ಯಕ್ಟ್ ಬರುವಂತಹ ವಿಷಯಗಳು ಯಾವ್ಯಾವುದು?

    ಅಶ್ಲೀಲ ವಿಡಿಯೋ ನೋಡಿದ್ದ ವ್ಯಕ್ತಿಯ ವಿಚಾರಣೆ ಮಾಡಿದ ಕೋರ್ಟ್​

ಚೆನ್ನೈ: ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಂಡು ನೋಡುವುದು ಪೋಕ್ಸೊ ಕಾಯ್ದೆ ಮತ್ತು ಐಟಿ ಆ್ಯಕ್ಟ್​ ಅಡಿ ಅಪರಾಧವಲ್ಲ ಎಂದು ಮದ್ರಾಸ್ ಹೈಕೋರ್ಟ್ ಸ್ಪಷ್ಟಪಡಿಸಿದೆ.

ಹೈಕೋರ್ಟ್ ಹೇಳಿದ್ದೇನು..?

ಮದ್ರಾಸ್​ ಹೈಕೋರ್ಟ್​​ನ ನ್ಯಾಯಮೂರ್ತಿ ಎನ್.ಆನಂದ್ ವೆಂಕಟೇಶ್ ಅವರು ಈ ಪ್ರಕರಣವನ್ನು ಆಲಿಸಿದರು. ಮಕ್ಕಳ ಅಶ್ಲೀಲ ವಿಡಿಯೋ ಡೌನ್​ಲೋಡ್ ಮಾಡಿಕೊಂಡು ನೋಡುವುದು ಪೋಕ್ಸೋ ಮತ್ತು ಐಟಿ ಆ್ಯಕ್ಟ್​ ಅಡಿ ಬರುವುದಿಲ್ಲ, ಇದು ಅಪರಾಧವಲ್ಲ. ಪೋಕ್ಸೋ ಮತ್ತು ಐಟಿ ಆ್ಯಕ್ಟ್​ ಅಡಿ ಬರಬೇಕು ಎಂದರೆ ಮಗು ಅಥವಾ ಮಕ್ಕಳನ್ನು ಆರೋಪಿಯಾದವನು ಅಶ್ಲೀಲ ಕೆಲಸಗಳಿಗೆ ಬಳಸಿರಬೇಕು. ಆಗ ತೆಗೆದಂತಹ ಫೋಟೋ, ವಿಡಿಯೋಗಳನ್ನು ಬೇರೆಯವರಿಗೆ ಶೇರ್ ಮಾಡಿದ್ದರೆ ಪಬ್ಲಿಶ್ ಮಾಡಿದ್ದರೆ ಅದು ಅಪರಾಧವಾಗುತ್ತದೆ. ನೋಡುವುದು ಅಪರಾಧವಲ್ಲ ಎಂದು ನ್ಯಾಯಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಏನಿದು ಪ್ರಕರಣ..?

ಅಂಬತ್ತೂರಿನ ವ್ಯಕ್ತಿಯೊಬ್ಬರು (28) ಮಕ್ಕಳ ಅಶ್ಲೀಲ ವಿಡಿಯೋ ಡೌನ್​ಲೋಡ್ ಮಾಡಿಕೊಂಡು ನೋಡಿದ್ದರು. ಈ ಸಂಬಂಧ ವ್ಯಕ್ತಿ ವಿರುದ್ಧ ಕೇಸ್​ ದಾಖಲು ಮಾಡಲಾಗಿತ್ತು. ಕೋರ್ಟ್​​ಗೆ ಹಾಜರಾಗಿದ್ದ ವ್ಯಕ್ತಿ ನಾನು ಅಶ್ಲೀಲ ವಿಡಿಯೋ ನೋಡಿರುವುದು ನಿಜ. ಆದರೆ ಮಕ್ಕಳ ವಿಡಿಯೋಗಳನ್ನು ನೋಡಿಲ್ಲ. ಈ ವ್ಯಸನದಿಂದ ಹೊರ ಬರಲು ಕೌನ್ಸಿಲಿಂಗ್ ತೆಗೆದುಕೊಳ್ಳುತ್ತೇನೆ ಎಂದು ಕೋರ್ಟ್​​ಗೆ ಹೇಳಿದ್ದಾರೆ.

ಪ್ರಕರಣ ಆಲಿಸಿದ ಮದ್ರಾಸ್​ ಹೈಕೋರ್ಟ್,​ ಮಕ್ಕಳ ಅಶ್ಲೀಲ ವಿಡಿಯೋ ನೋಡುವುದು ಪೋಕ್ಸೊ ಕಾಯ್ದೆ ಮತ್ತು ಐಟಿ ಆ್ಯಕ್ಟ್​ ಅಡಿ ಬರುವುದಿಲ್ಲ ಎಂದು ಹೇಳಿ ಕೇಸ್​ ಅನ್ನು ರದ್ದುಗೊಳಿಸಿದೆ. ವೈಯಕ್ತಿಕವಾಗಿ ಅಶ್ಲೀಲ ವಿಡಿಯೋಗಳನ್ನ ನೋಡುವುದು ಅಪರಾಧವಲ್ಲ ಎಂದು ಕೂಡ ಕೋರ್ಟ್​ ಹೇಳಿದೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಕ್ಕಳ ಅಶ್ಲೀಲ ವಿಡಿಯೋ ನೋಡುವುದು ಅಪರಾಧ ಅಲ್ಲ, ಆದರೆ.. -ಹೈಕೋರ್ಟ್​

https://newsfirstlive.com/wp-content/uploads/2023/12/Court-1.jpg

Load More