/newsfirstlive-kannada/media/post_attachments/wp-content/uploads/2025/01/ROHIT-16.jpg)
ರೋಹಿತ್ ಶರ್ಮಾ ಅವರನ್ನ ಸಿಡ್ನಿ ಟೆಸ್ಟ್​ನಿಂದ ಕೈಬಿಡಲಾಗಿದೆ. ಉಪನಾಯಕ ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾದ ನಾಯಕತ್ವ ವಹಿಸಿಕೊಂಡಿದ್ದಾರೆ. ದಿಢೀರ್ ಗಾಯ ಹಿನ್ನೆಲೆಯಲ್ಲಿ ಬುಮ್ರಾ ಕೂಡ ಮೈದಾನದಿಂದ ಹೊರ ಹೋಗಿದ್ದಾರೆ. ವಿರಾಟ್ ಕೊಹ್ಲಿ ಟೀಂ ಇಂಡಿಯಾದ ನಾಯಕರಾಗಿ ಮುನ್ನಡೆಸ್ತಿದ್ದಾರೆ.
ಪ್ಲೇಯಿಂಗ್-11ನಿಂದ ಹೊರಗಿರುವ ರೋಹಿತ್ ಎರಡನೇ ದಿನವಾದ ಇಂದು ‘ವಾಟರ್ ಬಾಯ್’ ಆಗಿ ಕಾಣಿಸಿಕೊಂಡರು. ಸಿಡ್ನಿ ಟೆಸ್ಟ್‌ನ ಎರಡನೇ ದಿನದ ಡ್ರಿಂಕ್ಸ್ ಬ್ರೇಕ್ ಸಮಯದಲ್ಲಿ, ರೋಹಿತ್ ಶರ್ಮಾ ಪಾನೀಯಗಳೊಂದಿಗೆ ಮೈದಾನಕ್ಕೆ ಇಳಿದರು. ಈ ಸಂದರ್ಭದಲ್ಲಿ ಟೀಂ ಇಂಡಿಯಾದ ಕಮಾಂಡರ್ ಬುಮ್ರಾಗೆ ಸಲಹೆಗಳನ್ನು ನೀಡಿದರು. ಬುಮ್ರಾ ಮತ್ತು ರಿಷಬ್ ಪಂತ್ ಜೊತೆ ಮಾತನಾಡುತ್ತಿರುವುದು ಕಂಡುಬಂದಿದೆ.
/newsfirstlive-kannada/media/post_attachments/wp-content/uploads/2025/01/ROHIT-SHARMA-5-1.jpg)
ಸಿಡ್ನಿ ಟೆಸ್ಟ್‌ನಿಂದ ರೋಹಿತ್ ಶರ್ಮಾ ಕೈಬಿಟ್ಟಿದ್ದೇಕೆ?
ಸಿಡ್ನಿ ಟೆಸ್ಟ್‌ಗೆ ಮೊದಲು ರೋಹಿತ್ ಶರ್ಮಾ ಈ ಸರಣಿಯಲ್ಲಿ ಮೂರು ಟೆಸ್ಟ್‌ಗಳನ್ನು ಆಡಿದ್ದಾರೆ. ಅವರ ನೇತೃತ್ವದಲ್ಲಿ ತಂಡ ಸೋಲನ್ನು ಕಂಡಿದೆ. ಮೂರರಲ್ಲಿ ಎರಡು ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದಿದೆ. ಇನ್ನೊಂದು ಡ್ರಾ ಮಾಡಿಕೊಂಡಿದೆ. ಅಲ್ಲದೇ ತಮ್ಮ ಬ್ಯಾಟ್​ನಿಂದ ರನ್ ಬಾರದ ಹಿನ್ನೆಲೆಯಲ್ಲಿ ಪಂದ್ಯದಿಂದ ಹೊರಗುಳಿದಿದ್ದಾರೆ.
ತಂಡದ ಸ್ಕೋರ್ ಹೇಗಿದೆ..?
ಮೊದಲ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ 4 ರನ್​ಗಳ ಮುನ್ನಡೆ ಸಾಧಿಸಿದೆ. ಅಂದರೆ ಎರಡನೇ ದಿನವಾದ ಇಂದು ಆಸ್ಟ್ರೇಲಿಯಾ ಬ್ಯಾಟ್ಸ್​​ಮನ್​​ಗಳನ್ನು ಕಟ್ಟಿಹಾಕುವಲ್ಲಿ ಭಾರತದ ಬೌಲರ್ಸ್​ ಯಶಸ್ವಿಯಾದರು. ಕೇವಲ 181 ರನ್​ಗಳಿಗೆ ಆಲೌಟ್ ಮಾಡಿದರು. 4 ರನ್​ಗಳ ಮುನ್ನಡೆಯನ್ನು ಕಾಯ್ದುಕೊಂಡು ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಸಂಕಷ್ಟಕ್ಕೆ ಒಳಗಾಗಿದೆ. 6 ವಿಕೆಟ್ ಕಳೆದುಕೊಂಡು 141 ರನ್​​ಗಳಿಸಿದೆ. ಆ ಮೂಲಕ ಭಾರತವು 145 ರನ್​ಗಳ ಮುನ್ನಡೆ ಸಾಧಿಸಿದೆ.
ಇದನ್ನೂ ಓದಿ:SBIನಲ್ಲಿ 13,735 ಉದ್ಯೋಗಗಳು.. ಕೆಲವೇ ದಿನಗಳು ಬಾಕಿ, ಈ ಕೂಡಲೇ ಅಪ್ಲೇ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us