newsfirstkannada.com

₹1200 ಕೋಟಿ ವೆಚ್ಚದ ಸಂಸತ್ ಭವನ ಸೋರಿಕೆ; ₹120 ಬಕೆಟ್​ ಮೇಲೆ ಅವಲಂಬಿತ ಆಯ್ತು ಎಂದು ವ್ಯಂಗ್ಯ

Share :

Published August 1, 2024 at 5:32pm

Update August 1, 2024 at 5:36pm

    ರಾಮಮಂದಿರ ಬೆನ್ನಲ್ಲೇ ಸೋರುತ್ತಿರುವ ನೂತನ ಸಂಸತ್ ಭವನ

    ಮೋದಿ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕರು ವಾಗ್ದಾಳಿ

    ಹೊರಗಡೆ ಪೇಪರ್​ ಲೀಕ್, ಒಳಗಡೆ ನೀರು ಲೀಕ್​ ಎಂದು ಲೇವಡಿ

ನವದೆಹಲಿ: ನೂತನ ಸಂಸತ್ ಭವನ ಮಳೆಯಿಂದಾಗಿ ಸೋರುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ. ಸಂಸತ್​ ಭವನದ ಲಾಬಿಯಲ್ಲಿ ನೀರು ಸೋರುತ್ತಿರುವುದರ ವಿಡಿಯೋ ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದ್ದು ಮೋದಿ ಸರ್ಕಾರದ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.

ಇದನ್ನೂ ಓದಿ: KL ರಾಹುಲ್​- ಪಂತ್​ ಮಧ್ಯೆ ವಿಕೆಟ್​ ಕೀಪರ್​ ಸ್ಥಾನಕ್ಕಾಗಿ ಬಿಗ್ ಫೈಟ್​.. ಯಾರಿಗೆ ಸಿಗುತ್ತೆ ಚಾನ್ಸ್​?

ದೆಹಲಿಯಲ್ಲಿ ಮಳೆಯಾಗುತ್ತಿದ್ದು ಹೊಸದಾಗಿ ನಿರ್ಮಾಣವಾದ ಸಂಸತ್ ಭವನದ ಲಾಬಿಯಲ್ಲಿ ನೀರು ಸೋರುತ್ತಿದೆ. ಇದಕ್ಕಾಗಿ ನೀಲಿ ಬಣ್ಣದ ಬಕೆಟ್​ ಅನ್ನು ಇಡಲಾಗಿದ್ದು ಮೇಲಿನಿಂದ ನೀರು ಅದರಲ್ಲಿ ಬೀಳುತ್ತಿವೆ. ಸದ್ಯ ಇದನ್ನು ವಿಡಿಯೋ ಮಾಡಿಕೊಂಡ ಕಾಂಗ್ರೆಸ್​ ಸಂಸದ ಮಾಣಿಕಂ ಟ್ಯಾಗೋರ್ ಅವರು ತಮ್ಮ ಎಕ್ಸ್​ ಅಕೌಂಟ್​​ನಲ್ಲಿ ಶೇರ್ ಮಾಡಿದ್ದಾರೆ. ಇದಕ್ಕೆ ಟ್ಯಾಗ್​ ಲೈನ್ ಬರೆದಿರುವ ಅವರು ಹೊರಗಡೆ ಪೇಪರ್ ಲೀಕ್ ಆಗಿದ್ದರೇ, ಒಳಗಡೆ ನೀರು ಲೀಕ್ ಆಗುತ್ತಿದೆ. ಸಂಸತ್ ಭವನ ನಿರ್ಮಾಣ ಮಾಡಿ ಒಂದು ವರ್ಷ ಕಳೆದಿದೆ ಅಷ್ಟೇ ಮಾಳಿಗೆ ಸೋರಿತ್ತಿದೆ. ರಾಷ್ಟ್ರಪತಿಗಳು ಬರುವ ಮೇನ್​ ದ್ವಾರದಲ್ಲೇ ಈ ರೀತಿ ಆಗಿರುವುದು ಎಷ್ಟು ಸರಿ ಎಂದು ಕೇಳಿದ್ದಾರೆ.

ಇದನ್ನೂ ಓದಿ: IPL 2025; ಶಾರುಕ್​ ಖಾನ್- ಪಂಜಾಬ್​ ತಂಡದ ಓನರ್ ಮಧ್ಯೆ ಭಾರೀ ಗಲಾಟೆ.. ಯಾಕೆ ಗೊತ್ತಾ?

ಇನ್ನು ಈ ಸಂಬಂಧ ತಮ್ಮ ಎಕ್ಸ್​ ಅಕೌಂಟ್​ನಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಟೀಕಿಸಿದ್ದಾರೆ. ಹೊಸ ಸಂಸತ್ತಿಗಿಂತ ಹಳೆಯ ಸಂಸತ್ತು ಶ್ರೇಷ್ಠವಾದದ್ದು ಎಂದು ಇದರಿಂದ ಗೊತ್ತಾಗುತ್ತದೆ ಎಂದಿದ್ದಾರೆ. ಕೋಟ್ಯಂತರ ರೂಪಾಯಿಗಳಿಂದ ನಿರ್ಮಿಸಲಾದ ಹೊಸ ಸಂಸತ್​ನ ಕೆಲ ಸಮಸ್ಯೆಗಳು ಪರಿಹಾರ ಆಗುವವರೆಗೆ ಹಳೆ ಸಂಸತ್​ಗೆ ನಾವು ಯಾಕೆ ಹೋಗಬಾರದು ಎಂದು ಪ್ರಶ್ನಿಸಿದ್ದಾರೆ.

ಆಮ್​ ಆದ್ಮಿ ಪಾರ್ಟಿ ಕೂಡ ಇದಕ್ಕೆ ಟ್ವಿಟ್ ಮಾಡಿದೆ. 1,200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಸಂಸತ್ತು ಈಗ 120 ರೂಪಾಯಿಯ ಬಕೆಟ್ ಮೇಲೆ ಅವಲಂಬಿತವಾಗಿದೆ ಎಂದು ಮೋದಿ ಸರ್ಕಾರದ ಕೆಲಸವನ್ನು ವ್ಯಂಗ್ಯವಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

₹1200 ಕೋಟಿ ವೆಚ್ಚದ ಸಂಸತ್ ಭವನ ಸೋರಿಕೆ; ₹120 ಬಕೆಟ್​ ಮೇಲೆ ಅವಲಂಬಿತ ಆಯ್ತು ಎಂದು ವ್ಯಂಗ್ಯ

https://newsfirstlive.com/wp-content/uploads/2024/08/SAMSATH_BHAVANA.jpg

Load More