/newsfirstlive-kannada/media/post_attachments/wp-content/uploads/2023/07/KRS-dam-2.jpg)
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆದಿದೆ. ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ 98 ಅಡಿಗೆ ಏರಿಕೆ ಕಂಡಿದೆ. ಇದರಿಂದಾಗಿ ರೈತರಿಗೆ ಮುಖದಲ್ಲಿ ಮಂದಾಹಾಸ ಮೂಡಿದೆ.
ಮಳೆಯಿಂದಾಗಿ ಕೃಷ್ಣರಾಜ ಸಾಗರಕ್ಕೆ 14,135 ಕ್ಯೂಸೆಕ್ ಒಳಹರಿವು ಬರುತ್ತಿದೆ. 124.80 ಗರಿಷ್ಠ ಮಟ್ಟದ ಡ್ಯಾಂನಲ್ಲಿ ಸದ್ಯ 98.10 ಅಡಿ ನೀರು ಸಂಗ್ರಹವಾಗಿದೆ. 49.452 ಟಿಎಂಸಿ ಗರಿಷ್ಠ ಸಾಮರ್ಥ್ಯದ ಡ್ಯಾಂನಲ್ಲಿ 21.978 ಟಿಎಂಸಿ ನೀರು ಸಂಗ್ರಹವಾಗಿದೆ.
ಇದನ್ನೂ ಓದಿ: ಕಾರು ಹಿಂಬಾಲಿಸಿಕೊಂಡು ಬಂದು ಗ್ಲಾಸ್ ಒಡೆದು ಕಳ್ಳತನ.. ಉದ್ಯಮಿಯಿಂದ 5 ಲಕ್ಷ ರೂಪಾಯಿ ಕಸಿದುಕೊಂಡು ಎಸ್ಕೇಪ್!
ಕೆಆರ್‌ಎಸ್ ಡ್ಯಾಂಗೆ 14,135 ಕ್ಯೂಸೆಕ್ ನೀರು ಹರಿದು ಬರ್ತಿದೆ. ಡ್ಯಾಂನಿಂದ 532 ಕ್ಯೂಸೆಕ್ ನೀರು ಕುಡಿಯುವ ಉದ್ದೇಶಕ್ಕೆ ಹೊರಹರಿಸಲಾಗುತ್ತಿದೆ. ನಿನ್ನೆ 8,787 ಕ್ಯೂಸೆಕ್ ಒಳಹರಿವು ಇತ್ತು.
ಇಂದಿನ ಕೆಆರ್‌ಎಸ್ ನೀರಿನ ಮಟ್ಟ
- ಗರಿಷ್ಠ ಮಟ್ಟ - 124.80 ಅಡಿಗಳು
- ಇಂದಿನ ಮಟ್ಟ - 98.10 ಅಡಿಗಳು
- ಗರಿಷ್ಠ ಸಾಮರ್ಥ್ಯ - 49.452 ಟಿಎಂಸಿ
- ಇಂದಿನ ಸಾಮರ್ಥ್ಯ - 21.978 ಟಿಎಂಸಿ
- ಒಳ ಹರಿವು - 14,135 ಕ್ಯೂಸೆಕ್
- ಹೊರ ಹರಿವು - 532 ಕ್ಯೂಸೆಕ್
ನಿನ್ನೆ ಕೆಆರ್‌ಎಸ್ ನೀರಿನ ಮಟ್ಟ (ಜುಲೈ 2)
- ಗರಿಷ್ಠ ಮಟ್ಟ – 124.80 ಅಡಿ.
- ಇಂದಿನ ಮಟ್ಟ – 96.50 ಅಡಿ.
- ಗರಿಷ್ಠ ಸಾಮರ್ಥ್ಯ – 49.452 ಟಿಎಂಸಿ
- ಇಂದಿನ ಸಾಮರ್ಥ್ಯ- 20.191 ಟಿಎಂಸಿ
- ಒಳ ಹರಿವು – 8,787 ಕ್ಯೂಸೆಕ್
- ಹೊರ ಹರಿವು – 526 ಕ್ಯೂಸೆಕ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ