newsfirstkannada.com

ಪಿಜಿಯನ್ನೇ ನಂಬಿರೋ ಬೆಂಗಳೂರಿಗರೇ ಹುಷಾರ್​​; ನೀವು ಓದಲೇಬೇಕಾದ ಸ್ಟೋರಿ ಇದು..!

Share :

Published March 19, 2024 at 6:12pm

Update March 19, 2024 at 6:13pm

    ಕಳೆದೊಂದು ವಾರದಿಂದ ಬೆಂಗಳೂರಲ್ಲಿ ಕುಡಿಯೋ ನೀರಿಗೂ ಸಮಸ್ಯೆ

    ಜೀವನ ನಡೆಸಲು ಟ್ಯಾಂಕರ್​ ನೀರಿನ ಮೊರೆ ಹೋದ ಬೆಂಗಳೂರಿಗರು!

    ಸರ್ಕಾರ ರೇಟ್​ ಫಿಕ್ಸ್​ ಮಾಡಿದ್ರೂ ಕ್ಯಾರೇ ಎನ್ನದೆ ಟ್ಯಾಂಕರ್​ ನೀರು ಮಾರಾಟ

ಕಳೆದೊಂದು ವಾರದಿಂದ ಬೆಂಗಳೂರಲ್ಲಿ ಕುಡಿಯೋ ನೀರಿಗೂ ಜನ ಪರದಾಡುವಂತಾಗಿದೆ. ಅದರಲ್ಲೂ ಇಡೀ ಬೆಂಗಳೂರು ಜನ ಟ್ಯಾಂಕರ್ ನೀರಿನ​ ಮೇಲೆಯೇ ಡಿಪೆಂಡ್​ ಆಗಿದ್ದಾರೆ. ಹೀಗಾಗಿ ಟ್ಯಾಂಕರ್ ನೀರಿನ​ ಭಾರೀ ದುಬಾರಿ ಆಗಿದ್ದು, ದೊಡ್ಡ ದಂಧೆ ನಡೆಯುತ್ತಿದೆ. ಈ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ಟ್ಯಾಂಕರ್ ನೀರಿಗೆ​ ರೇಟ್​ ಫಿಕ್ಸ್​ ಮಾಡಿ ಆದೇಶಿಸಿದೆ. ಇಷ್ಟಾದ್ರೂ ಟ್ಯಾಂಕರ್​​ ನೀರು​​ ರೇಟ್​ ಕಡಿಮೆ ಆಗಿಲ್ಲ.

ಹೌದು, ದೇಶದ ವಿವಿಧ ಮೂಲೆಗಳಿಂದ ಬಂದ ಬಹುತೇಕರು ಪಿಜಿಗಳಲ್ಲೇ ಇರುತ್ತಾರೆ. ಅದರಲ್ಲೂ ಬೇರೆ ಊರುಗಳಿಂದ ಬಂದ ಜನರಿಗಾಗಿ ಬೆಂಗಳೂರು ಅತೀ ಹೆಚ್ಚು ಪಿಜಿಗಳನ್ನು ಓಪನ್​ ಮಾಡಲಾಗಿದೆ. ಈಗ ಪಿಜಿಗಳಲ್ಲೂ ನೀರಿನ ಸಮಸ್ಯೆ ಎದುರಾಗಿದೆ. ಒಂದು ಟ್ಯಾಂಕರ್​ ನೀರಿಗೆ ಮಾಲೀಕರು 2,000-2,500 ರೂ. ನೀಡಬೇಕಾದ ಪರಿಸ್ಥಿತಿ ಬಂದಿದೆ.

ಸರ್ಕಾರದ ಆದೇಶಕ್ಕೂ ಕ್ಯಾರೇ ಎನ್ನದ ಜನ ಮತ್ತೆ ಟ್ಯಾಂಕರ್​ ನೀರು ಮಾಫಿಯಾ ಶುರು ಮಾಡಿದ್ದಾರೆ. ಹೀಗಾಗಿ ಪಿಜಿ ಮಾಲೀಕರು ಈ ಟ್ಯಾಂಕರ್​ ನೀರು ಮಾಫಿಯಾಗೆ ಕಡಿವಾಣ ಹಾಕಲು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಿಜಿಯನ್ನೇ ನಂಬಿರೋ ಬೆಂಗಳೂರಿಗರೇ ಹುಷಾರ್​​; ನೀವು ಓದಲೇಬೇಕಾದ ಸ್ಟೋರಿ ಇದು..!

https://newsfirstlive.com/wp-content/uploads/2024/03/PG_News1.bmp

Load More