newsfirstkannada.com

ರಾಜ್ಯದ ಈ ಗ್ರಾಮದ 60 ಕುಟುಂಬಗಳಿಗೆ ಇರೋದು ಒಂದೇ ಬಾವಿ..!

Share :

Published February 20, 2024 at 10:18am

Update February 20, 2024 at 10:26am

    ಮಲೆನಾಡಿನಲ್ಲಿದ್ದರೂ ಕುಡಿಯುವ ನೀರಿಗಾಗಿ ಪರದಾಟ

    ಬೇಸಿಗೆಯಲ್ಲಿ ಬಾವಿಯಲ್ಲಿ ನೀರು ಬತ್ತಿಹೋಗುತ್ತದೆ

    ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ ಗ್ರಾಮಸ್ಥರು

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನ ಕಳಸ ತಾಲೂಕಿನ ಕುಂಬಳಡಿಕೆಯಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಪ್ರವಾಹದ ಸಮಯದಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಮನೆಗಳನ್ನು ನೀಡಲಾಗಿದೆ.

ಆದರೆ ನೀರಿನ ಮೂಲವನ್ನ ಕೊಡ್ಲಿಲ್ಲ. 60 ಕುಟುಂಬಗಳಿಗೆ ಇರೋದು ಕೇವಲ ಒಂದೇ ಬಾವಿ. ಆ ಬಾವಿಯಲ್ಲಿ ನೀರಿದ್ರೆ ನೆಮ್ಮದಿ. ಆದ್ರೆ ಬೇಸಿಗೆ ಶುರುವಾಗ್ತಿದ್ದಂತೆ ಜಲವೇ ಇಲ್ಲದಂತಾಗುತ್ತೆ. ಹೀಗಾಗಿ ಈ ಕುಟುಂಬಗಳು ನೀರಿಗಾಗಿ ಪರದಾಡುವಂತಾಗುತ್ತೆ. ಈಗ ಬೇಸಿಗೆಯ ತಾಪದಿಂದ ಕುಡಿಯುವ ನೀರಿಗಾಗಿ ಹರಸಾಹಸ ಪಡ್ತಿದ್ದಾರೆ.

ಮೂಕ್ಕಾಲು ಕಿಲೋಮೀಟರ್ ಕಾಲ್ನಡಿಗೆಯಲ್ಲಿಯೇ ಹೋಗಿ ನೀರು ತರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಬರೊಬ್ಬರಿ 5 ವರ್ಷಗಳಿಂದ ಕುಡಿಯುವ ನೀರಿಗಾಗಿ ಜನ ಪರದಾಡ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಯಾರೂ ತಲೆ ಕೆಡಿಸಿಕೊಳ್ತಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದ ಈ ಗ್ರಾಮದ 60 ಕುಟುಂಬಗಳಿಗೆ ಇರೋದು ಒಂದೇ ಬಾವಿ..!

https://newsfirstlive.com/wp-content/uploads/2024/02/CKM-WATER-4.jpg

Load More