newsfirstkannada.com

ಹನಿ ನೀರಿಗೂ ಹಾಹಾಕಾರ.. ರೊಚ್ಚಿಗೆದ್ದ ಮಹಿಳೆಯರಿಂದ ಗ್ರಾಮ ಪಂಚಾಯತಿಗೆ ಬೀಗ ಜಡಿದು ಆಕ್ರೋಶ

Share :

Published April 28, 2024 at 6:55am

Update April 28, 2024 at 6:48am

    ಒಣಗಿ ಹೋಗ್ತಿವೆ ರೈತನ 1,000 ಅಡಿಕೆ, 100ಕ್ಕೂ ಹೆಚ್ಚು ತೆಂಗಿನಗಿಡಗಳು

    ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ರು ಪ್ರಯೋಜನವಾಗಿಲ್ಲ

    ಬೆಳೆ ಉಳಿಸಿಕೊಳ್ಳಲು ಸಾಲ ಮಾಡಿ ಟ್ಯಾಂಕರ್ ಮೂಲಕ ಸಸಿಗಳಿಗೆ ನೀರು

ಬರಗಾಲದ ಬಿಸಿಲಿಗೆ ಕೋಟೆನಾಡು ಚಿತ್ರದುರ್ಗದ ರೈತರು ತತ್ತರಿಸಿದ್ದು, ಅಡಿಕೆ ಹಾಗೂ ತೆಂಗು ಬೆಳೆ ಉಳಿಸಿಕೊಳ್ಳುವುದೇ ರೈತರಿಗೆ ದೊಡ್ಡ ಸವಾಲಾಗಿದ್ದು, ಬೆಳೆ ಉಳಿಸಿಕೊಳ್ಳಲು ರೈತ ಸಾವಿರಾರು ರೂಪಾಯಿ ಸಾಲ ಮಾಡಿಕೊಂಡು, ಟ್ಯಾಂಕರ್ ಮೂಲಕ ಸಸಿಗಳಿಗೆ ನೀರುಣಿಸುತ್ತಿದ್ದಾನೆ.

ಇದನ್ನೂ ಓದಿ: ಅಮ್ಮನೇ ನಿಶ್ಚಯ ಮಾಡಿದ ಹುಡುಗನ ಜೊತೆ ‘ಟಗರು’ ಪೋರಿ ಮಾನ್ವಿತಾ ಮದುವೆ; ಯಾವಾಗ?

ಮಳೆ ಇಲ್ಲದೇ ತೆಂಗು, ಅಡಿಕೆ ಮರಗಳು ಒಣಗಿ ಹೋಗಿದ್ದು ಅವುಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್​ ರೈತರು ನೀರು ಹಾಕುತ್ತಿದ್ದಾರೆ. ಮಳೆಗಾಗಿ ಎಲ್ಲ ರೈತರು ಆಕಾಶದೆಡೆಗೆ ನೋಡುತ್ತಿದ್ದಾರೆ. ಹಿರಿಯೂರು ತಾಲೂಕಿನ ಕಾಟನಾಯಕನಹಳ್ಳಿ ಗೊಲ್ಲರಹಟ್ಟಿ ರೈತ ರಾಮಣ್ಣ ಎಂಬವರ ಜಮೀನಿನಲ್ಲಿ ತೆಂಗು, ಅಡಿಕೆ ಮರಗಳು ಒಣಗಿ ಹೋಗುತ್ತಿರುವುದು ನೋವಿನ ಸಂಗತಿ ಆಗಿದೆ.

ಮಳೆ ಕೊರತೆಯಿಂದ ತೆಂಗು, ಅಡಿಕೆ ಗಿಡಗಳು ಒಣಗುತ್ತಿವೆ

ಸುಮಾರು ಎರಡು ಎಕರೆ ಪ್ರದೇಶದಲ್ಲಿ 1000 ಅಡಿಕೆ ಹಾಗೂ 100 ಕ್ಕೂ ಹೆಚ್ಚು ತೆಂಗಿನಗಿಡ ನೆಟ್ಟು ಪೋಷಣೆ ಮಾಡಿದ್ದಾರೆ. ಇನ್ನೇನು ಮರಗಳು ಫಸಲಿಗೆ ಬರುವ ಸಮಯ. ಆದರೆ, ಈ ವರ್ಷ ಮಳೆ ಕೊರತೆಯಾಗಿದ್ದು, ತೆಂಗು ಹಾಗೂ ಅಡಿಕೆ ಗಿಡಗಳು ಒಣಗಲಾರಭಿಸಿವೆ. ಅಡಿಕೆ ಬೆಳೆ ಉಳಿಸಿಕೊಳ್ಳಲು ಕೊಳೆವೆಬಾವಿ ಕೊರೆಯಿಸಿದರೂ ನೀರು ಬರಲಿಲ್ಲ. ಇದರಿಂದ ದಾರಿ ಕಾಣದೆ ರೈತ ಪ್ರತಿದಿನ ಟ್ಯಾಂಕರ್ ಮೂಲಕ ನೀರು ಹಾಯಿಸುತ್ತಿದ್ದಾರೆ. ದೂರದ ಊರುಗಳಿಂದ ನೀರು ಖರೀದಿಸಿ ಟ್ಯಾಂಕರ್‌ ಮೂಲಕ ತಂದು ತೋಟ ಉಳಿಸಿಕೊಳ್ಳುವುದು ಮುಂದಾಗಿದ್ದಾರೆ.

ತೋಟದಲ್ಲಿ ಸಾವಿರಾರು ಅಡಿಕೆ ಮರಗಳು, 100 ತೆಂಗಿನ ಮರಗಳು ಇವೆ. ಅವು ಒಣಗಿ ಹೋಗುತ್ತಿರುವ ಕಾರಣ ಬೇರೆ ಕಡೆಯಿಂದ ನೀರು ದುಡ್ಡುಕೊಟ್ಟು ತಂದು ಟ್ಯಾಂಕರ್ ಮೂಲಕ ಹಾಕುತ್ತಿದ್ದೇವೆ. ಮಳೆ ಇಲ್ಲದಿದ್ದಕ್ಕೆ ಬೋರ್​ ಅಲ್ಲೂ ನೀರಿನಲ್ಲ. ಹೀಗಾಗಿ ಟ್ಯಾಂಕರ್​ ನೀರನ್ನು ಗಿಡಗಳಿಗೆ ಹಾಕುತ್ತಿದ್ದೇವೆ.

ಶಾಂತಕುಮಾರಿ, ರೈತ ಮಹಿಳೆ, ಕಾಟನಾಯಕನಹಳ್ಳಿ

ಇದು ಚಿತ್ರದುರ್ಗದ ರೈತರ ಕಥೆಯಾದ್ರೆ, ಇನ್ನು ಗ್ರಾಮಗಳಲ್ಲಿ ನೀರಿ ಅಭಾವ ಹೇಳ ತೀರದಾಗಿದೆ. ಮೊಳಕಾಲ್ಮೂರು ತಾಲೂಕಿನ ಬಿ.ಜಿ.ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ರು ಪ್ರಯೋಜನವಾಗಿಲ್ಲ. ಇದರಿಂದ ರೊಚ್ಚಿಗೆದ್ದ ಮಹಿಳೆಯರು ಗ್ರಾಪಂ ಕಚೇರಿಗೆ ಬೀಗ ಜಡಿದು ಗ್ರಾ.ಪಂ ಕಚೇರಿಯ ಮುಂದೆ ಅಡುಗೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಟೆನಾಡು ಚಿತ್ರದುರ್ಗದಲ್ಲಿ ಮಳೆ ಕೊರತೆಯಿಂದ ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವರ್ಷವೂ ಮಳೆಯಾಗದಿದ್ದರೆ ಪರಿಸ್ಥಿತಿ ಮತ್ತಷ್ಟು ಭೀಕರವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹನಿ ನೀರಿಗೂ ಹಾಹಾಕಾರ.. ರೊಚ್ಚಿಗೆದ್ದ ಮಹಿಳೆಯರಿಂದ ಗ್ರಾಮ ಪಂಚಾಯತಿಗೆ ಬೀಗ ಜಡಿದು ಆಕ್ರೋಶ

https://newsfirstlive.com/wp-content/uploads/2024/04/CTR_WATER_1.jpg

Load More