ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಲ್ಲಂಗಡಿ ತಿನ್ನೋದ್ರಿಂದ ತುಂಬಾ ಪ್ರಯೋಜನ.. ಎಷ್ಟೊಂದು ಲಾಭ ಗೊತ್ತಾ..?

author-image
Ganesh
Updated On
ಬೇಸಿಗೆಯಲ್ಲಿ ಫ್ರಿಡ್ಜ್​ನಲ್ಲಿಟ್ಟ ಕಲ್ಲಂಗಡಿ ಹಣ್ಣು ತಿನ್ನೋ ಮುನ್ನ ಎಚ್ಚರ! ಓದಲೇಬೇಕಾದ ಸ್ಟೋರಿ
Advertisment
  • ದೇಹದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಲ್ಲಂಗಡಿ
  • ಕಲ್ಲಂಗಡಿ ತಿಂದ್ಮೇಲೆ ಅರ್ಧ ಗಂಟೆ ಏನೂ ಸೇವಿಸಬಾರದು
  • ದೇಹವನ್ನು ನೈಸರ್ಗಿಕವಾಗಿ ಶುದ್ಧೀಕರಿಸಲು ತುಂಬಾ ಒಳ್ಳೆಯದು

ಬೇಸಿಗೆಯ ತಾಪಕ್ಕೆ ಪರಿಹಾರ ನೀಡುವ ಕಲ್ಲಂಗಡಿ ಹಣ್ಣನ್ನು (Watermelon) ಬೆಳಗ್ಗೆ ತಿನ್ನೋದ್ರಿಂದ ದೇಹಕ್ಕೆ ತುಂಬಾ ಒಳ್ಳೆಯದು ಎಂದು ಆರೋಗ್ಯ ತಜ್ಞರು ನಂಬಿದ್ದಾರೆ. ಎದ್ದ ತಕ್ಷಣ ಕಲ್ಲಂಗಡಿ ತಿನ್ನೋದ್ರಿಂದ ದಣಿವು ಮತ್ತು ಆಲಸ್ಯದಂಥ ಸಮಸ್ಯೆಗಳು ದೂರ ಆಗುತ್ತವೆ. ಕಲ್ಲಂಗಡಿಯಲ್ಲಿರುವ ಗುಣಗಳು, ದೇಹದಲ್ಲಿನ ಆಮ್ಲೀಯತೆಯನ್ನು ಕಡಿಮೆ ಮಾಡಿ pH ಪ್ರಾಮಾಣ ಸಮತೋಲನಗೊಳಿಸುತ್ತದೆ. ಇದರಿಂದ ನಮ್ಮ ಅನೇಕ ಸಮಸ್ಯೆಗಳು ನಿವಾರಣೆ ಆಗುತ್ತದೆ ಎಂಬ ಮಾತಿದೆ.

ಇದರಲ್ಲಿರುವ ಸಿಟ್ರುಲಿನ್ (citrulline) ಎಂಬ ವಸ್ತುವು ರಕ್ತನಾಳಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಜೊತೆಗೆ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುವಂತೆ ಮಾಡುತ್ತದೆ..

ಇದನ್ನೂ ಓದಿ: ಸುಟ್ಟು ಕರಕಲಾದ ದೇಹಗಳ ಗುರುತು ಪತ್ತೆ ಹಚ್ಚೋದೇ ಚಾಲೆಂಜ್.. ಡೆಂಟಲ್ ಫೋರೆನ್ಸಿಕ್ ಹೇಗೆ ಕೆಲಸ ಮಾಡುತ್ತೆ?

publive-image

ಕಲ್ಲಂಗಡಿಯಲ್ಲಿ ಉತ್ಕರ್ಷಣ ನಿರೋಧಕಗಳು (antioxidants) ಸಮೃದ್ಧವಾಗಿರುತ್ತವೆ. ನಿಯಮಿತವಾಗಿ ಸೇವಿಸುವುದರಿಂದ ದೇಹವು ಅದರಲ್ಲಿರುವ antioxidants ಹೀರಿಕೊಳ್ಳುತ್ತದೆ. ಜೊತೆಗೆ ಚರ್ಮವನ್ನು ಕಾಂತಿಯುತಗೊಳಿಸಲು ಸಹಾಯ ಮಾಡುತ್ತದೆ. ಹಣ್ಣಿನಲ್ಲಿರುವ ನೀರು ಮತ್ತು ಖನಿಜ ಲವಣಗಳು ಮೂತ್ರಪಿಂಡದ ಕಾರ್ಯವನ್ನು ಸುಲಭಗೊಳಿಸುತ್ತದೆ. ದೇಹವನ್ನು ನೈಸರ್ಗಿಕವಾಗಿ ಶುದ್ಧೀಕರಿಸಲು ಇದು ತುಂಬಾನೇ ಒಳ್ಳೆಯದು.

ಕಲ್ಲಂಗಡಿಯಲ್ಲಿರುವ ನೈಸರ್ಗಿಕ ಕಿಣ್ವಗಳು (Natural enzyme) ನಮ್ಮ ಜೀರ್ಣಾಂಗ ವ್ಯವಸ್ಥೆ ಮೇಲೆ ಸುಧಾರಿಸುತ್ತದೆ. ಇನ್ನೊಂದು ನೆನಪಿಡಬೇಕಾದ ವಿಚಾರ ಏನೆಂದರೆ ಕಲ್ಲಂಗಡಿ ತಿಂದ ನಂತರ ಅರ್ಧ ಗಂಟೆ ಬೇರೆ ಯಾವುದೇ ಆಹಾರ ಸೇವಿಸಬಾರದು. ಈ ಅರ್ಧ ಗಂಟೆಯಲ್ಲಿ ಕಲ್ಲಂಗಡಿಯಲ್ಲಿರುವ ಗುಣವು, ಮತ್ತೊಂದು ಊಟಕ್ಕೆ ದೇಹವನ್ನು ಸಿದ್ಧಗೊಳಿಸುತ್ತದೆ ಅನ್ನೋದು ತಜ್ಞರ ಅಭಿಪ್ರಾಯ.

ಇದನ್ನೂ ಓದಿ: ನಿಮಗಿದು ಗೊತ್ತೇ..! ಐ ಡ್ರಾಪ್​ ತಪ್ಪಾಗಿ ಹಾಕಿಕೊಳ್ಳೋದು ಅಪಾಯಕಾರಿ; ಹೇಗೆ ಗೊತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment