/newsfirstlive-kannada/media/post_attachments/wp-content/uploads/2025/03/diabetes-best-fruit.jpg)
ಯಾವಾಗ ಸಕ್ಕರೆ ಕಾಯಿಲೆಗಾಗಿ ಉತ್ತಮ ಹಣ್ಣು ಯಾವುದು ಎಂದ ವಿಷಯ ಬರುತ್ತದೆಯೋ ಕರ್ಬೂಜ ಹಣ್ಣು ತುಂಬಾ ಉತ್ತಮ ಎಂದು ಹೇಳಲಾಗುತ್ತದೆ. ಇನ್ನು ಕಲ್ಲಂಗಡಿಯಲ್ಲಿ ಗ್ಲೈಸೆಮಿಕ್ ಅಂಶ ಅತಿಹೆಚ್ಚು ಇರುವುದರಿಂದಾಗಿ ಇದು ಬ್ಲಡ್ನಲ್ಲಿ ಶುಗರ್ ಹೆಚ್ಚಾಗಿಸುವ ಸಾಧ್ಯತೆ ಇರುತ್ತದೆ.
ಇನ್ನು ಮತ್ತೊಂದು ಕಡೆ ಕರ್ಬೂಜವನ್ನು ನೋಡಿದಾಗ ಇದರಲ್ಲಿ ಗ್ಲೈಸೆಮಿಕ್ ಅಂಶ ತುಂಬಾ ಕಡಿಮೆ ಇರುತ್ತದೆ. ಫೈಬರ್ ಅಂಶವನ್ನು ಹೇರಳವಾಗಿ ಹೊಂದಿರುತ್ತದೆ. ಈ ಹಣ್ಣು ಹೆಚ್ಚು ಸೇವಿಸುವುದರಿಂದ ದೇಹದ ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾಗುತ್ತಾ ಬರುತ್ತದೆ. ಇದು ದೇಹವು ಸಕ್ಕರೆ ಅಂಶವನ್ನು ಹೀರಿಕೊಳ್ಳುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ ಹೀಗಾಗಿ ಕರ್ಬೂಜ ಸಕ್ಕರೆ ಕಾಯಿಲೆ ಇರುವವರಿಗೆ ತುಂಬಾ ಒಳ್ಳೆಯ ಹಣ್ಣು.
ಇದನ್ನೂ ಓದಿ: ಊಟವಾದ ಮೇಲೆ ಲವಂಗವನ್ನು ತಿನ್ನಬೇಕು ಏಕೆ? ಇಲ್ಲಿವೆ ಪ್ರಮುಖ 6 ಕಾರಣಗಳು
ಇನ್ನು ಒಂದು ವಿಶೇಷತೆ ಕರ್ಬೂಜದಲ್ಲಿ ಇರುವುದು ಇದರಲ್ಲಿ ವಿಟಮಿನ್ ಎ ಮತ್ತು ಸಿ ಕೂಡ ಇವೆ. ಇದು ಇನ್ಸೂಲಿನ್ ಸೆನ್ಸಿಟಿವಿಟಿಯನ್ನು ಕಡಿಮೆ ಮಾಡುವುದರಲ್ಲಿ ಸಹಾಯಕವಾಗುತ್ತದೆ. ಅದು ಮಾತ್ರವಲ್ಲ ಟೈಪ್ 2 ಸಕ್ಕರೆ ಕಾಯಿಲೆ ಬರದಂತೆ ತಡೆಯುತ್ತದೆ.
ಹೀಗಾಗಿ ಸಕ್ಕರೆ ಕಾಯಿಲೆ ಇದ್ದವರು ಕಲ್ಲಂಗಡಿ ಹಣ್ಣಿಗಿಂತ ಹೆಚ್ಚು ಕರ್ಬೂಜ ಸೇವಿಸುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಕಾರಣ ಕರ್ಬೂಜ ಹಣ್ಣಿನಲ್ಲಿ ಸಕ್ಕರೆ ಕಾಯಿಲೆಗಳನ್ನು ನಿಯಂತ್ರಿಸುವ ಹಾಗೂ ಬಾರದಂತೆ ತಡೆಯುವ ಆರೋಗ್ಯಕರ ಜೀವಸತ್ವ ಹಾಗೂ ಪೋಷಕಾಂಶಗಳು ಇವೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ