newsfirstkannada.com

ದೇವರನಾಡಿನಲ್ಲಿ ‘ಗುಡ್ಡದ ಭೂತ’ ತಾಂಡವ.. 3 ಬಾರಿ ಭೂಕುಸಿತ.. ಸಾವಿನ ಸಂಖ್ಯೆ 47ಕ್ಕೆ ಏರಿಕೆ!

Share :

Published July 30, 2024 at 11:06am

Update July 30, 2024 at 11:59am

    ರಾತ್ರಿ ನಿದ್ರೆಗೆ ಜಾರಿದ ಅದೆಷ್ಟೋ ಜನರು ಬೆಳಗಾಗುವಷ್ಟರಲ್ಲಿ ಮಣ್ಣು ಪಾಲು

    150ಕ್ಕೂ ಹೆಚ್ಚು ಜನರು ಮಣ್ಣಿನಡಿಯಲ್ಲಿ ಸಿಲುಕಿರುವ ಸಾಧ್ಯತೆ

    ಬೆಳಗ್ಗಿನ ಜಾವ 2-4 ಗಂಟೆಯ ನಡುವೆ ಭೂಕುಸಿತ ಸಂಭವಿಸಿದೆ

ದೇವರನಾಡಿನಲ್ಲಿ ‘ಗುಡ್ಡೆಯ ಭೂತ’ ತಾಂಡವವಾಡಿದೆ. ರಾತ್ರಿ ನಿದ್ರೆಗೆ ಜಾರಿದ ಅದೆಷ್ಟೋ ಜನರನ್ನು ಸಾವಿನ ಕೂಪಕ್ಕೆ ತಳ್ಳಿದೆ. ಬರೋಬ್ಬರಿ 47 ಜನರು ಸಾವನ್ನಪ್ಪಿರುವ ಸಂಖ್ಯೆ ಸದ್ಯಕ್ಕೆ ಸಿಕ್ಕಿದ್ದು, 150ಕ್ಕೂ ಹೆಚ್ಚು ಜನರು ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ ಎನ್ನಲಾಗುತ್ತಿದೆ.

ವಯನಾಡು ಎಂದರೆ ಭತ್ತದ ಗುಡ್ಡೆಗಳ ನಾಡು. ಆದರೆ ನಿನ್ನೆ ಸುರಿದ ಭಾರೀ ಮಳೆಗೆ ಇಂದು ಅಲ್ಲಿನ ಮುಂಡಕ್ಕೈ ಮತ್ತು ಚೂರಲ್ಮಲಾ ಪ್ರದೇಶವು ಅಕ್ಷರಶಃ ಗುರುತೇ ಸಿಗದಂತಾಗಿ ಹೋಗಿದೆ. ಕಾರಣ ಭೂಕುಸಿತಕ್ಕೆ ಸಿಲುಕಿ 200ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿವೆ. ಹಸಿರು ಬಣ್ಣದಿಂದ ಕಂಗೊಳಿಸುತ್ತಿದ್ದ ಈ ಪ್ರದೇಶವೀಗ ಬರೀ ಮಣ್ಣು, ಮರದ ದಿಮ್ಮಿ, ರಭಸವಾಗಿ ಹರಿಯುವ ನೀರಿನಿಂದ ಕೂಡಿದೆ.

ಇದನ್ನೂ ಓದಿ: ಗುರುತೇ ಸಿಗದ ಊರು.. ಮಣ್ಣಿನಡಿಯಲ್ಲಿ ನೂರಾರು ಜನ.. ಸ್ಮಶಾನದಂತಾದ ವಯನಾಡ್​​

ಒಂದೆರಡಲ್ಲ, 3 ಬಾರಿ ಭೂಕುಸಿತ ಸಂಭವಿಸಿದೆ. ನಸುಕಿನ ಜಾವ 2 ರಿಂದ 4 ಗಂಟೆಯವರೆಗಿನ ನಡುವೆ ಈ ದುರ್ಘಟನೆ ಸಂಭವಿಸಿದೆ. ಅಂಗಡಿ ಮುಂಗಟ್ಟು ಮತ್ತು ವಾಹನಗಳು ನೀರಿನಲ್ಲಿ ತೇಲಿಬಂದಿವೆ.

ಸದ್ಯ ಸ್ಥಳದಲ್ಲಿ ರಕ್ಷಣಾ ತಂಡಗಳು ಕಾರ್ಯ ನಿರ್ವಹಿಸುತ್ತಿವೆ. ಅಗ್ನಿಶಾಮಕ ದಳ, ಎನ್​ಡಿಆರ್​ಎಫ್​ ಮತ್ತು ಸ್ಥಳೀಯ ತಂಡಗಳು ಸೇರಿ ಸುಮಾರು 250 ಜನರು ರಕ್ಷಣೆ ಮಾಡಲು ಮುಂದಾಗಿದ್ದಾರೆ.

ಇದನ್ನೂ ಓದಿ: ಭೀಕರ ಭೂಕುಸಿತ.. ಮೃತರ ಸಂಖ್ಯೆ 24ಕ್ಕೆ ಏರಿಕೆ.. ನೂರಾರು ಮಂದಿ ಜೀವಂತ ಸಮಾಧಿ ಆಗಿರುವ ಆತಂಕ..

ಮುಂಡಕ್ಕೈ ಮತ್ತು ಚೂರಲ್ಮಲಾ ಪ್ರದೇಶದಲ್ಲಿ ಮುಂಜಾನೆ ಭೂಕುಸಿತ ಸಂಭವಿಸಿದೆ. ಬೆಳಗ್ಗಿನ ಜಾವ 2-4 ಗಂಟೆಯ ನಡುವೆ ಭೂಕುಸಿತ ಸಂಭವಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಪಿಣರಾಯಿಗೆ ಕರೆ ಮಾಡಿದ್ದಾರೆ. ಘಟನೆ ಬಗ್ಗೆ ಆಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇವರನಾಡಿನಲ್ಲಿ ‘ಗುಡ್ಡದ ಭೂತ’ ತಾಂಡವ.. 3 ಬಾರಿ ಭೂಕುಸಿತ.. ಸಾವಿನ ಸಂಖ್ಯೆ 47ಕ್ಕೆ ಏರಿಕೆ!

https://newsfirstlive.com/wp-content/uploads/2024/07/Wayanad-landslide11.jpg

Load More