/newsfirstlive-kannada/media/post_attachments/wp-content/uploads/2024/10/Priyanka-Gandhi-Siddaramaiah.jpg)
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಕೇರಳದ ವಯನಾಡು ಲೋಕಸಭೆ ಉಪ ಚುನಾವಣೆಗೆ ಇಂದು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಕಣ್ಣು ಹಾಯಿಸಿದಷ್ಟೂ ದೂರ ಕಾಂಗ್ರೆಸ್ ಕಾರ್ಯಕರ್ತರು.. ಬೃಹತ್ ರೋಡ್ ಶೋ.. ಜನರತ್ತ ಕೈ ಬೀಸುತ್ತಾ ವಿಶ್​ ಮಾಡುತ್ತಿರುವ ರಾಹುಲ್, ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ಹಾಗೂ ಪ್ರಿಯಾಂಕಾ ಗಾಂಧಿ ಪರ ಮೊಳಗಿದ ಜಯಘೋಷ. ಈ ಎಲ್ಲಾ ದೃಶ್ಯಗಳು ಇಂದು ಕೇರಳದ ವಯನಾಡು ಕ್ಷೇತ್ರದಲ್ಲಿ ಕಂಡು ಬಂತು.
/newsfirstlive-kannada/media/post_attachments/wp-content/uploads/2024/10/Priyanka-Gandhi-Wayanad-By-Election.jpg)
ವಯನಾಡು ‘ಕೈ’ ಕಲಿಯಾಗಿ ಪ್ರಿಯಾಂಕಾ ಗಾಂಧಿ ನಾಮಪತ್ರ
ರೋಡ್ ಶೋ, ಸಾವಿರಾರು ಅಭಿಮಾನಿಗಳು.. ರಣಕಹಳೆ
ಸಂಸದ ರಾಹುಲ್ ಗಾಂಧಿಯಿಂದ ತೆರವಾಗಿದ್ದ ವಯನಾಡು ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ಕಣಕ್ಕಿಳಿದಿದ್ದಾರೆ. ಈ ಮೂಲಕ ಗಾಂಧಿ ಕುಟುಂಬದ ಮತ್ತೊಂದು ಕುಡಿ ಪ್ರಿಯಾಂಕ ಗಾಂಧಿ ಚುನಾವಣಾ ರಾಜಕೀಯದ ಮೊದಲ ಹೆಜ್ಜೆ ಇರಿಸಿದಂತಾಗಿದೆ.
ನಿನ್ನೆಯೇ ದೆಹಲಿಯಿಂದ ಮೈಸೂರಿಗೆ ಆಗಮಿಸಿದ್ದ ಪ್ರಿಯಾಂಕಾ ಗಾಂಧಿ ಇಂದು ಬೆಳಗ್ಗೆ ವಯನಾಡು ತಲುಪಿದ್ದರು. ವಯನಾಡಲ್ಲಿ ಕಾಂಗ್ರೆಸ್ ನಾಯಕರು ಅದ್ಧೂರಿ ಸ್ವಾಗತ ಕೋರಿದ್ದು, ಬಳಿಕ ಭರ್ಜರಿ ರೋಡ್ ಶೋ ಮೂಲಕ ಪ್ರಿಯಾಂಕ ಗಾಂಧಿ ಮಿಂಚು ಹರಿಸಿದರು. ರೋಡ್​ ಶೋ ವೇಳೆ ಸಾವಿರಾರು ಕಾರ್ಯಕರ್ತರು, ಬೆಂಬಲಿಗರು ಭಾಗಿಯಾಗಿದ್ರು.
/newsfirstlive-kannada/media/post_attachments/wp-content/uploads/2024/10/Siddaramaiah-Priyanka-Gandhi.jpg)
ರೋಡ್ ಶೋ ಮೂಲಕ ಬಂದು ಪ್ರಿಯಾಂಕ ನಾಮಿನೇಷನ್!
ರೋಡ್​ಶೋ ಮೂಲಕ ಆಗಮಿಸಿದ ಪ್ರಿಯಾಂಕ ಗಾಂಧಿ ವಯನಾಡಿನ ಕಲ್ಪೆಟ್ಟಾ ಪುರಸಭೆಯ ಕಚೇರಿಯಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಈ ವೇಳೆ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಾಥ್ ನೀಡಿದರು.
ಇದನ್ನೂ ಓದಿ: ಹ್ಯಾಟ್ರಿಕ್ ಗೆಲುವು.. 5 ಬಾರಿ ಪಕ್ಷದಿಂದ ಪಕ್ಷಕ್ಕೆ ಜಂಪ್; ಸಿ.ಪಿ ಯೋಗೇಶ್ವರ್ ರಾಜಕೀಯದ ಇತಿಹಾಸ ಇಲ್ಲಿದೆ
ಬೃಹತ್ ವೇದಿಕೆಯಲ್ಲಿ ಕಾಂಗ್ರೆಸ್​​ ನಾಯಕರ ಶಕ್ತಿಪ್ರದರ್ಶನ
ನಾಮಪತ್ರ ಸಲ್ಲಿಕೆ ಬಳಿಕ ಬೃಹತ್ ಸಾರ್ವಜನಿಕ ಸಮಾವೇಶದ ಮೂಲಕ ಕಾಂಗ್ರೆಸ್ ನಾಯಕರು ಶಕ್ತಿ ಪ್ರದರ್ಶನ ನಡೆಸಿದರು. ಸೋನಿಯಾಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವರು ಉಪಸ್ಥಿತರಿದರು. ವಯನಾಡು ಜನರನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಲು ಬೆಂಬಲ ನೀಡಿದ್ದಕ್ಕೆ ಧನ್ಯವಾದ ತಿಳಿಸಿದ್ರು.
ನನ್ನ ಸಹೋದರ, ಸಹೋದರಿಯರೇ ಇಡೀ ಜಗತ್ತೇ ವಿರುದ್ಧವಿದ್ದಾಗ ನನ್ನ ಸಹೋದರನ ಜೊತೆ ನಿಂತಿದ್ದೀರಿ, ನೀವು ನಿಮ್ಮ ಶಕ್ತಿಯನ್ನು ಅವನಿಗೆ ನೀಡಿದ್ದೀರಿ, ಹೋರಾಟ ಮಾಡಲು ಧೈರ್ಯ ತುಂಬಿದ್ದೀರಿ, ನಿಮ್ಮ ಈ ಬೆಂಬಲಕ್ಕಾಗಿ ನಮ್ಮ ಇಡೀ ಕುಟುಂಬ ಋಣಿಯಾಗಿದೆ.
- ಪ್ರಿಯಂಕಾ ಗಾಂಧಿ, ವಯನಾಡು ಕಾಂಗ್ರೆಸ್ ಅಭ್ಯರ್ಥಿ
ಇದನ್ನೂ ಓದಿ:ಅಲಕ್ ಪಾಂಡೆ, ಭಾರತ ಕಂಡ ಅತ್ಯಂತ ಶ್ರೀಮಂತ ಶಿಕ್ಷಕ! ಇವರ ಬಳಿ ಇರೋ ಆಸ್ತಿ ಎಷ್ಟು ಸಾವಿರ ಕೋಟಿ?
ಕೇರಳದಲ್ಲೂ ಸಿಎಂ ಸಿದ್ದರಾಮಯ್ಯ ಪರ ಕ್ರೇಜ್!
ಇವತ್ತು ಸಿಎಂ ಸಿದ್ದರಾಮಯ್ಯ, ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ಮುಗಿಸಿಕೊಂಡು ಕೇರಳ ತಲುಪಿದ್ದು ಸ್ವಲ್ಪ ತಡವಾಗಿತ್ತು. ಅಷ್ಟೊತ್ತಿಗೆ ರಾಹುಲ್ ಗಾಂಧಿ ಭಾಷಣ ಆರಂಭಿಸಿದ್ದರು. ಈ ವೇಳೆ ಸಿದ್ದರಾಮಯ್ಯ ಆಗಮಿಸಿದಾಗ ಹೋ ಎಂದು ಕೂಗಿದ ಜನ, ಚಪ್ಪಾಳೆ ತಟ್ಟುತ್ತಾ ಶಿಳ್ಳೆ ಹೊಡೆಯುತ್ತಾ ಜೈಕಾರ ಹಾಕಿದರು. ರಾಹುಲ್ ಗಾಂಧಿ ಕೂಡ ಸ್ವಲ್ಪ ಹೊತ್ತು ತಮ್ಮ ಭಾಷಣ ನಿಲ್ಲಿಸಿ ಸಂತಸ ವ್ಯಕ್ತಪಡಿಸಿದರು. ಬಳಿಕ ಸಿದ್ದರಾಮಯ್ಯ ಕೈ ಮುಗಿದು ಜನರತ್ತ ಕೈಬೀಸಿದರು.
ಮುಂದಿನ ನವೆಂಬರ್ 13 ರಂದು ವಯನಾಡು ಉಪಚುನಾವಣೆಯ ಲೋಕಸಭಾ ಕ್ಷೇತ್ರಕ್ಕೆ ಮತದಾನ ನಡೆಯಲಿದೆ. ಅಲ್ಲಿಯವರೆಗೂ ಪ್ರಿಯಾಂಕಗಾಂಧಿ ಕಲ್ಪೆಟ್ಟದಲ್ಲಿಯೇ ಇದ್ದುಕೊಂಡು ಪ್ರಚಾರ ನಡೆಸಲಿದ್ದಾರೆ. ಪ್ರಿಯಾಂಕಾ ಗಾಂಧಿ ಮೊದಲ ಬಾರಿಗೆ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ. ಅದರಲ್ಲೂ ತಮ್ಮ ಸಹೋದರ ರಾಹುಲ್ ಗಾಂಧಿ ಎರಡು ಬಾರಿ ಗೆದ್ದಿದ್ದ ವಯನಾಡು ಕ್ಷೇತ್ರದಿಂದ ಕಣಕ್ಕಿಳಿಯುತ್ತಿರುವುದು ವಿಶೇಷವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us