‘ಅಮ್ಮ, ಅಪ್ಪ ಎಲ್ಲಿ..’ ತಂಗಿಯ ಶವದ ಮುಂದೆ ಅಕ್ಕ ರೋದನೆ.. ಭೂಕುಸಿತಕ್ಕೆ ಸ್ಮಶಾನವಾದ ಮದುವೆ ಸಂಭ್ರಮ..

author-image
Ganesh
Updated On
‘ಅಮ್ಮ, ಅಪ್ಪ ಎಲ್ಲಿ..’ ತಂಗಿಯ ಶವದ ಮುಂದೆ ಅಕ್ಕ ರೋದನೆ.. ಭೂಕುಸಿತಕ್ಕೆ ಸ್ಮಶಾನವಾದ ಮದುವೆ ಸಂಭ್ರಮ..
Advertisment
  • ಡಿಸೆಂಬರ್​ನಲ್ಲಿ ಹಿರಿಯ ಮಗಳ ಮದುವೆ ನಡೆಯಬೇಕಿತ್ತು
  • ಭೂಕುಸಿತದಲ್ಲಿ ಮನೆಯಲ್ಲಿದ್ದ 7 ಮಂದಿಯೂ ನಾಪತ್ತೆ ಆಗಿದ್ದಾರೆ
  • ಕೇರಳದಲ್ಲಿ ಸಂತ್ರಸ್ತ ಕುಟುಂಬಸ್ಥರ ಕಣ್ಣೀರ ಕತೆಗಳು

ಮನೆಯ ಹಿರಿಯ ಮಗಳ ಹೆಸರು ಶ್ರುತಿ. ಡಿಸೆಂಬರ್​​ನಲ್ಲಿ ಮದುವೆ ನಡೆಯಬೇಕಿತ್ತು. ಮಗಳ ಮದುವೆ ಸಂಭ್ರಮದಲ್ಲಿದ್ದ ಮನೆ ಖುಷಿಯಿಂದ ತೇಲಾಡುತ್ತಿತ್ತು. ಯಾರಿಗೆ ಗೊತ್ತಿತ್ತು ಹೇಳಿ..? ಒಂದು ದಿನ ಮನೆಯ ಕನಸನ್ನು ವಿನಾಶ ಮಾಡಲು ಮಳೆರಾಯ ಯಮರೂಪದಲ್ಲಿ ಬರುತ್ತಾನೆ ಎಂದು. ಶಿವಣ್ಣ-ಸಬೀತಾ ದಂಪತಿಯ ಕುಟುಂಬದಲ್ಲಿ ಆಗಿದ್ದೂ ಇದೇ!

ಹೌದು, ಕೇರಳ ಗುಡ್ಡ ದುರಂತದ ಬಳಿಕ ಸಂತ್ರಸ್ತ ಕುಟುಂಬದೊಳಗಿನ ಕಣ್ಣೀರ ಕತೆಗಳು ಒಂದೊಂದೇ ಹೊರ ಬರುತ್ತಿವೆ. ಅಂತೆಯೇ ಇದು ಕೂಡ ಒಂದು. ವಯನಾಡಿನ ಶಿವಣ್ಣ-ಸಬೀತಾ ದಂಪತಿ ಮನೆಯಲ್ಲಿ ಒಟ್ಟು 7 ಮಂದಿ ಅನೋನ್ಯವಾಗಿದ್ದರು. ಹಿರಿಯ ಮಗಳು ಶ್ರುತಿ ಮದುವೆ ನಡೆಯಬೇಕಿದ್ದರಿಂದ ಅದೇ ಸಂಭ್ರಮದಲ್ಲೇ ಮೊನ್ನೆ (ಮಂಗಳವಾರ) ರಾತ್ರಿ ಊಟ ಮಾಡಿ ಮಲಗಿದ್ದರು.

ಇದನ್ನೂ ಓದಿ:ಕೇರಳ ಭೂಕುಸಿತಕ್ಕೆ 3 ಕಾರಣಗಳು; ಬೆಟ್ಟ, ಗುಡ್ಡ ಕುಸಿಯುವ ಹಿಂದಿನ ಸತ್ಯ ಬಿಚ್ಚಿಟ್ಟ ವಿಜ್ಞಾನಿ..!

publive-image

ಆದರೆ ಕೇರಳದಲ್ಲಿ ಕಳೆದ 15 ದಿನಗಳಿಂದ ಸುರಿದ ಭಾರೀ ಮಳೆಗೆ ವಯನಾಡು ಜಿಲ್ಲೆ ತತ್ತರಿಸಿ ಹೋಗಿತ್ತು. ವಯನಾಡಿನ ಭೂಕುಸಿತದ ಕೇಂದ್ರ ಚುರಲ್ಮಳದಲ್ಲಿರುವ ವೆಲ್ಲರ್ಮಲಾ ಶಾಲೆ ಬಳಿಯೇ ಶಿವಣ್ಣ ದಂಪತಿ ಮನೆ ಇತ್ತು. ಚುರಲ್ಮಳದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಭೂಕುಸಿತದಲ್ಲಿ ಶಿವಣ್ಣ ಕುಟುಂಬದ 7 ಮಂದಿ ನಾಪತ್ತೆ ಆಗಿದ್ದರು. ಅಲ್ಲದೇ ಶಿವಣ್ಣರ ಮನೆ ಸ್ವಲ್ಪ ಗಟ್ಟಿಮುಟ್ಟು ಇದೆ, ಮಳೆಗೆ ಏನೂ ಆಗಲ್ಲ ಎಂದು ಪಕ್ಕದ ಮನೆಯ ಬೊಮಳಪ್ಪನ್ ಹಾಗೂ ಇವರ ಕುಟುಂಬ ಕೂಡ ಶಿವಣ್ಣ ಮನೆಗೆ ಬಂದಿತ್ತು. ಇದೀಗ ಅವರೂ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದನ್ನೂ ಓದಿ:ಕೇರಳ ಗುಡ್ಡ ಕುಸಿತದಲ್ಲಿ ಕರ್ನಾಟಕದ ಅಜ್ಜಿ, ಮೊಮ್ಮಗ ನಾಪತ್ತೆ.. ಇದೇ ಕುಟುಂಬದ ಮೂವರ ರೋಚಕ ರಕ್ಷಣೆ

ದುಃಖದ ವಿಚಾರ ಏನೆಂದರೆ ನಾಪತ್ತೆಯಾಗಿದ್ದ ಶಿವಣ್ಣರ ಕಿರಿಯ ಪುತ್ರಿ ಶ್ರೇಯಾ ಶವವಾಗಿ ಸಿಕ್ಕಿದ್ದಾಳೆ. ಮದುಮಗಳು ಶ್ರುತಿ ಹೇಗೋ ಪ್ರಾಣ ಸಂಕಟಕ್ಕೆ ಸಿಲುಕಿ ಅಪಾಯದಿಂದ ಪಾರಾಗಿದ್ದು, ತಂಗಿ ಶವ ನೋಡಿ ಕಣ್ಣೀರು ಇಡುತ್ತಿದ್ದಾಳೆ. ಕೋಝಿಕೋಡ್​ನ ಮಿಮ್ಸ್ ವೈದ್ಯಕೀಯ ಆಸ್ಪತ್ರೆಯಲ್ಲಿ ತಂಗಿಯ ಶವದ ಮುಂದೆ ರೋದಿಸುತ್ತಿದ್ದು, ಅಪ್ಪ, ಅಮ್ಮ, ಅಜ್ಜಿ, ಅಜ್ಜನ ಬರುವಿಕೆಗಾಗಿ ಕಾಯುತ್ತಿದ್ದಾಳೆ. ಆದರೆ ಇಲ್ಲಿಯವರೆಗೆ ಕಾಣೆಯಾಗಿರುವ ಇವರ ಕುಟುಂಬದ ಬಗ್ಗೆ ಮಾಹಿತಿಯೇ ಇಲ್ಲ ಎಂದು ವರದಿಯಾಗಿದೆ.

ಇದನ್ನೂ ಓದಿ:ಆರ್​ಸಿಬಿಗೆ ದೊಡ್ಡ ಲಾಸ್​; ತಂಡ ತೊರೆಯಲು ನಿರ್ಧರಿಸಿದ ಬಿಗ್​ ಪ್ಲೇಯರ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment