ಶವಗಳ ವಾಸನೆ ಪತ್ತೆ ಹಚ್ಚುತ್ತಿವೆ ಮಾಯಾ ಮತ್ತು ಮರ್ಫಿ.. ರಕ್ಷಣಾ ಕಾರ್ಯದಲ್ಲಿ ಶ್ವಾನಗಳ ಅದ್ಭುತ ಕಾರ್ಯ!

author-image
AS Harshith
Updated On
ಶವಗಳ ವಾಸನೆ ಪತ್ತೆ ಹಚ್ಚುತ್ತಿವೆ ಮಾಯಾ ಮತ್ತು ಮರ್ಫಿ.. ರಕ್ಷಣಾ ಕಾರ್ಯದಲ್ಲಿ ಶ್ವಾನಗಳ ಅದ್ಭುತ ಕಾರ್ಯ!
Advertisment
  • 15 ಅಡಿ ಅಳದಲ್ಲಿರುವ ಶವಗಳನ್ನು ಪತ್ತೆ ಹಚ್ಚುತ್ತವೆ ಈ ಶ್ವಾನಗಳು!
  • ಮನುಷ್ಯನಿಗಿಂತ 40 ಪಟ್ಟು ವಾಸನೆ ಗ್ರಹಿಸುವುದರಲ್ಲಿ ಶ್ವಾನಗಳು ಎತ್ತಿದ ಕೈ
  • ವಯನಾಡಿನಲ್ಲಿ ಸತ್ತ ಶವಗಳನ್ನು ಹುಡುಕಾಡಿ ಪತ್ತೆ ಹಚ್ಚುತ್ತಿವೆ ಮಾಯಾ ಮತ್ತು ಮರ್ಫಿ

ವಯನಾಡಿನ ಮುಂಡಡಕ್ಕೈ ಅಕ್ಷರಶ: ಸ್ಮಶಾನದಂತಾಗಿದೆ. ಘಟನೆ ನಡೆದು ಇಂದಿಗೆ 4 ದಿನ ಕಳೆದಿದೆ. ಸಾವಿನ ಸಂಖ್ಯೆ ದಿನೇ ದಿನೇ ಏರುತ್ತಿದೆ. ಅತ್ತ ಸ್ಮಶಾನದಂತಾದ ಮಂಡಕ್ಕೈನಲ್ಲಿ ವಾಸನೆಯು ಹೆಚ್ಚುತ್ತಿದೆ. ಸತ್ತ ಶವಗಳನ್ನು ಹುಡುಕಾಡಲು ಕಷ್ಟವಾಗುತ್ತಿದೆ. ಇಂತಹ ಸಮಯದಲ್ಲಿ ಶ್ವಾನಗಳಾದ ಮಾಯಾ ಮತ್ತು ಮರ್ಫಿ ಸಹಾಯಕ್ಕಿಳಿದಿವೆ.

publive-image

ಇದನ್ನೂ ಓದಿ: ಭೂಕುಸಿತ ಸಂಭವಿಸಿ ಇಂದಿಗೆ 4 ದಿನ, ಅವಶೇಷದಡಿ ನಾಲ್ವರು ಜೀವಂತ ಪತ್ತೆ.. ಜೀವ ಉಳಿಸಿದ ಸೇನೆಗೊಂದು ಬಿಗ್ ಸೆಲ್ಯೂಟ್​​

ಕೇರಳ ಪೊಲೀಸರ ಕೆ9 ಸ್ಕ್ವಾಡ್​ಗಳಾದ​​​​​ ಮಾಯಾ ಮತ್ತು ಮರ್ಫಿ ಮಣ್ಣಿನಡಿಯಲ್ಲಿ ಸಿಲುಕಿರುವ ಮೃತದೇಹಗಳನ್ನು ಹುಡುಕಾಡುತ್ತಿವೆ. ಈ ಶ್ವಾನಗಳ ಜೊತೆಗೆ ಇಬ್ಬರು ಡಾಗ್​ ಟ್ರೈನಿಂಗ್​ ಫ್ಯಾಕಲ್ಟಿ ಕೂಡ ರಕ್ಷಣಾ ಕಾರ್ಯಚರಣೆಯಲ್ಲಿ ಸಹಾಯ ಮಾಡುತ್ತಿದ್ದಾರೆ.


">August 1, 2024

ಅಂದಹಾಗೆಯೇ ಮಾಯಾ ಮತ್ತು ಮರ್ಫಿಗೆ ವಿಶೇಷ ಟ್ರೈನಿಂಗ್​ ಕೊಡಲಾಗಿದೆ. ಆರ್​ವಿಸಿ ಸೆಂಟರ್​ ಮತ್ತು ಕಾಲೇಜು, ಡಾಗ್​​ ಟ್ರೈನಿಂಗ್​​ ಫ್ಯಾಕಲ್ಟಿಯು ದೇಶದ ಅತ್ಯಂತ ಹಳೆಯ ತರಬೇತಿ ಅಕಾಡೆಮಿಯಾಗಿದೆ. ಮಿಲಿಟರಿ ಶ್ವಾನಗಳಿಗಾಗಿ ಇಲ್ಲಿ ತರಬೇತಿ ನೀಡಲಾಗುತ್ತಿದೆಯಂತೆ. ಮಾಹಿತಿಯಂತೆಯೇ ಒಂಭತ್ತು ವಿಶೇಷ ತಳಿಯ ಶ್ವಾನಗಳಿಗೆ ತರಬೇತಿ ನೀಡಲಾಗುತ್ತಿದೆ.

ಮಾಯಾ ಮತ್ತು ಮರ್ಫಿ ಎರಡು ಬೆಲ್ಜಿಯಂ ಮೆಲನೊಯಿಸ್​​​ ಶ್ವಾನಗಳು. ಇವು ಮಣ್ಣಿನಲ್ಲಿ ಹುದುಗಿರುವ ವಸ್ತುಗಳನ್ನು ಪತ್ತೆ ಮಾಡುವ ಪರಿಣತಿಯನ್ನು ಹೊಂದಿವೆ.

ಇದನ್ನೂ ಓದಿ: ಮಗಳ ಮದುವೆಗೆ 4 ತಿಂಗಳು ಬಾಕಿ.. ಅಪ್ಪ-ಅಮ್ಮ, ತಂಗಿಯ ಸಾವಿನ ಶಾಕ್​​ನಿಂದ ಹೊರ ಬಾರದ ಅಕ್ಕ


">August 2, 2024

ಅಂದಹಾಗೆಯೇ, ಶ್ವಾನಗಳು ವಾಸನೆ ಕಂಡು ಹಿಡಿಯುವುದರಲ್ಲಿ ಚುರುಕಾಗಿರುತ್ತವೆ. ಮನುಷ್ಯನಿಗಿಂತ 40 ಪಟ್ಟು ಹೆಚ್ಚು ವಾಸನೆ ಕಂಡುಹಿಡಿಯುವುದರಲ್ಲಿ ಪ್ರಭಾವಿಯಾಗಿರುತ್ತವೆ. ಇವು ಬಾಂಬ್​, ಡ್ರಗ್ಸ್​​​, ಜೀವಂತ ಮತ್ತು ಸತ್ತ ಮಾನವನ ದೇಹ ಹೀಗೆ ಎಲ್ಲವನ್ನು ಪತ್ತೆಹಚ್ಚುತ್ತವೆ.

ಇದನ್ನೂ ಓದಿ: ಗಲ್ಫ್​​ನಿಂದ ಓಡೋಡಿ ಬಂದ ಮಗನಿಗೆ ಸಿಕ್ಕಿದ್ದು ತಂದೆಯ ಮೃತದೇಹ.. ಅಮ್ಮ, ಹೆಂಡತಿ, ಮಗ ಎಲ್ಲರೂ ನಾಪತ್ತೆ

ಇನ್ನು ತರಬೇತಿ ಪಡೆದ ಮಾಯಾ ಮತ್ತು ಮರ್ಫಿ ಶ್ವಾನ 15 ಅಡಿ ಆಳದಲ್ಲಿರುವ ಶವವನ್ನು ಪತ್ತೆ ಮಾಡುವಷ್ಟು ಪರಿಣಾಮಕಾರಿಯಾಗಿದೆ. ಈ ಶ್ವಾನಗಳು ಇಂತಹ ಸಮಯದಲ್ಲಿ ಶೇ.95ರಷ್ಟು ಉಪಯೋಗಕ್ಕೆ ಬಂದಿವೆ.

ಮಾಹಿತಿ ಪ್ರಕಾರ, ಇಂತಹ ಶ್ವಾನಗಳಿಗೆ 12 ವಾರಗಳ ಕಾಲ ಮೂಲಭೂತ ತರಬೇತಿ. 24 ವಾರಗಳ ಕಾಲ ಸುಧಾರಿತ ತರಬೇತಿ ನೀಡಲಾಗುತ್ತದೆ. ಜೊತೆಗೆ ಅಳವಾದ ಅವಶೇಷದಡಿ ಸಿಲುಕಿರುವ ಮೃತದೇಹಗಳನ್ನು ಈ ಶ್ವಾನಗಳು ವಾಸನೆ ಮೂಲಕ ಪತ್ತೆಹಚ್ಚುತ್ತವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment