/newsfirstlive-kannada/media/post_attachments/wp-content/uploads/2024/08/wayanad-11.jpg)
ಇದು ಪವಾಡವೋ ಅಥವಾ ಪುಣ್ಯವೋ ಗೊತ್ತಿಲ್ಲ. ವಯನಾಡಿನಲ್ಲಿ ಭೂಕುಸಿತ ಸಂಭವಿಸಿ ಇಂದಿಗೆ ನಾಲ್ಕು ದಿನ. ಭಾರತೀಯ ಸೇನೆ ನಾಲ್ಕು ದಿನಗಳ ಬಳಿಕ ಮನೆಯೊಂದರ ಅವಶೇಷದಡಿ ನಾಲ್ವರನ್ನು ಪತ್ತೆ ಮಾಡಿದ್ದು, ಅವರನ್ನು ರಕ್ಷಿಸುವ ಮೂಲಕ ಜೀವ ಉಳಿಸಿದೆ.
/newsfirstlive-kannada/media/post_attachments/wp-content/uploads/2024/07/Wayanad-landslide8.jpg)
ಪಟವೆಟ್ಟಿನ್ನುನ್​​ ಪ್ರದೇಶದಲ್ಲಿ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರು ಪತ್ತೆಯಾಗಿದ್ದಾರೆ. ಅವರನ್ನು ಕಂಜಿರಕಥೋಟೆ ಕುಟುಂಬದ ಜಾನಿ, ಜೋಮೋಲ್​​, ಅಬ್ರಹಾಂ ಮತ್ತು ಕ್ರಿಸ್ಟಿ ಎಂದು ಗುರುತಿಸಲಾಗಿದೆ. ಭಾರತೀಯ ಸೇನೆ ಅವರನ್ನು ರಕ್ಷಿಸಿ ಹೆಲಿಕಾಪ್ಟರ್​ ಮೂಲಕ ಸುರಕ್ಷಿತ ಸ್ಥಳಕ್ಕೆ ರವಾನಿಸಿದೆ. ಮಹಿಳೆಯ ಕಾಲಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ.
/newsfirstlive-kannada/media/post_attachments/wp-content/uploads/2024/08/wayanad-12.jpg)
ಇದನ್ನೂ ಓದಿ: ಮಗಳ ಮದುವೆಗೆ 4 ತಿಂಗಳು ಬಾಕಿ.. ಅಪ್ಪ-ಅಮ್ಮ, ತಂಗಿಯ ಸಾವಿನ ಶಾಕ್​​ನಿಂದ ಹೊರ ಬಾರದ ಅಕ್ಕ
ವಯನಾಡು ಭೂಕುಸಿತದಲ್ಲಿ ಸುಮಾರು 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 200ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಮುಂಡಕ್ಕೈ ಭಾಗದಲ್ಲಿ ಯಾರೂ ಕೂಡ ಜೀವಂತವಾಗಿರಲು ಸಾಧ್ಯವಿಲ್ಲ ಎಂದು ಭಾರತೀಯ ಸೇನೆ ತಿಳಿಸಿದೆ. ಸದ್ಯ ಶೋಧಕಾರ್ಯ ಮುಂದುವರೆದಿದೆ.
/newsfirstlive-kannada/media/post_attachments/wp-content/uploads/2024/08/wayanad-13.jpg)
ವಯನಾಡು ಭೂಕುಸಿತ ಘನಫೋರವಾಗಿದೆ. ಸಾಕಷ್ಟು ಸಾವು-ನೋವು, ನರಳಾಟ ಸಂಭವಿಸಿದೆ. ಅನೇಕ ಕುಟುಂಬಗಳನ್ನು ಈ ಭೂಕುಸಿತ ಮಣ್ಣುಪಾಲು ಮಾಡಿದೆ. ಸದ್ಯ ಘಟನಾ ಸ್ಥಳದಲ್ಲಿ ವಾಸನೆ ಹೆಚ್ಚಾಗುತ್ತಿದೆಯಂತೆ. ಜೊತೆಗೆ H1N​1 ಭೀತಿ ಶುರುವಾಗಿದೆ. ಮುಂಜಾಗೃತೆ ಕ್ರಮವಹಿಸಿ ಕೆಲಸ ಮಾಡಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us