80 ಕಿ.ಮೀ ದೂರ ಕೊಚ್ಚಿ ಹೋದ ಶವ.. ರಾಶಿ ರಾಶಿ ಮೃತದೇಹಗಳು; ಕೇರಳದಲ್ಲಿ ಅಂತ್ಯ ಸಂಸ್ಕಾರವೇ ಘನಘೋರ!

author-image
Bheemappa
Updated On
80 ಕಿ.ಮೀ ದೂರ ಕೊಚ್ಚಿ ಹೋದ ಶವ.. ರಾಶಿ ರಾಶಿ ಮೃತದೇಹಗಳು; ಕೇರಳದಲ್ಲಿ ಅಂತ್ಯ ಸಂಸ್ಕಾರವೇ ಘನಘೋರ!
Advertisment
  • ಬ್ರೆಡ್, ಬನ್ನಿಗಾಗಿ ಕೈ ಚಾಚುತ್ತಿರುವ ಐಷಾರಾಮಿ ಬಂಗಲೆಯಲ್ಲಿದ್ದ ವ್ಯಕ್ತಿ
  • ಕಾಳಜಿ ಕೇಂದ್ರಗಳಲ್ಲಿ ಉಪಹಾರ, ಊಟದ ವ್ಯವಸ್ಥೆ ಮಾಡಲಾಗಿದೆ
  • ಚರ್ಚ್‌ನಲ್ಲಿ ಮೃತದೇಹಗಳ ಮುಂದೆ ಪ್ರಾರ್ಥನೆ ಸಲ್ಲಿಸಿ ಅಂತ್ಯ ಸಂಸ್ಕಾರ

ವಯನಾಡಿನ ಮಹಾ ದುರಂತದಲ್ಲಿ ಸಾವನ್ನಪ್ಪಿದ್ದ ಕುಟುಂಬಗಳ ಪರಿಸ್ಥಿತಿ ನಿಜಕ್ಕೂ ಕರುಣಾಜನಕವಾಗಿದೆ. ವಯನಾಡಿನ ಮಣ್ಣಲ್ಲಿ ಮೃತದೇಹಗಳ ರಾಶಿಯ ದೃಶ್ಯ ನಿಜಕ್ಕೂ ದುರಂತ ಭೀಕರತೆಗೆ ಸಾಕ್ಷಿ ಹೇಳ್ತಿದೆ. ಈ ಮಧ್ಯೆ ಕಾಳಜಿ ಕೇಂದ್ರಲ್ಲಿರುವವರ ಕತೆಗಳು ಕರುಳು ಹಿಂಡುತಿವೆ. ಐಷಾರಾಮಿ ಬಂಗಲೆಯಲ್ಲಿದವರು ಬ್ರೆಡ್ ಬನ್ನಿಗಾಗಿ ಕೈ ಚಾಚುವಂತಾಗಿದೆ. ಕೋಟ್ಯಾಧೀಶನಾಗಿದ್ದವನು ಪರದಾಡುವಂತ ಪರಿಸ್ಥಿತಿ ಬಂದೊದಗಿದೆ.

ಇದನ್ನೂ ಓದಿ: ಒಂದೊಂದು ಪೋಸ್ಟ್​​ಗೂ ಒಂದೊಂದು ದೇಶದಲ್ಲಿ ಇರ್ತಾರಾ ದೀಪಿಕಾ ದಾಸ್​.. ಬ್ಯೂಟಿ ಈಗ ಹೋಗಿದ್ದೇಲ್ಲಿಗೆ?

ಪ್ರಕೃತಿ ಮುನಿದ್ರೆ ಮನುಷ್ಯನ ಜೀವನ ಗತಿಯೇ ಬದಲಾಗಿ ಹೋಗುತ್ತೆ. ಜೀವನದ ಹಾದಿಯೇ ದಿಕ್ಕು ತಪ್ಪಿ ಹೋಗುತ್ತೆ. ವಯನಾಡಿನ ಜಲ ಪ್ರಳಯದಲ್ಲಿ ಸಿಲುಕಿ ಬಂದವರದ್ದು ಈಗ ಇದೇ ಪರಿಸ್ಥಿತಿಯಾಗಿದೆ. ಐಷಾರಾಮಿ ಜೀವನ. ಕಾರು ಬೈಕ್ ಅಂತೆಲ್ಲ ಇದ್ದವರು ಪ್ರಕೃತಿ ಕೋಪಕ್ಕೆ ಅಕ್ಷರಶಃ ಬೀದಿಪಾಲಾಗಿದ್ದಾರೆ.

ಇದನ್ನೂ ಓದಿ: ಫಾಲ್ಸ್​ನಲ್ಲಿ ಮುಗ್ಗರಿಸಿ ಬಿದ್ದಿದ್ದ ದೀಪಿಕಾ ದಾಸ್.. ಇನ್​ಸ್ಟಾ ವಿಡಿಯೋ ಕುರಿತು ಬ್ಯೂಟಿ ಹೇಳಿದ್ದೇನು?

publive-image

ಒಂದೇ ಕುಟುಂಬದ ನಾಲ್ವರು ಸಾವು! ಒಬ್ಬರು ಪತ್ತೆ ! ಉಳಿದವರು ನಾಪತ್ತೆ!

ಮಹಾ ದುರಂತದ ಪ್ರಲಾಪಕ್ಕೆ ಕೇರಳದ ಚೂರ್​ಮಲ್​ ನಿವಾಸಿ ಅಶ್ವಿನ್ ಕುಟುಂಬದ ಏಳು ಮಂದಿ ನಾಪತ್ತೆಯಾಗಿದ್ದಾರೆ. ಗುಡ್ಡ ಕುಸಿತದಲ್ಲಿ ನಾಲ್ವರು ಕೊಚ್ಚಿಕೊಂಡು ಹೋಗಿದ್ದು ಮೂವರು ಸಿಕ್ಕಿದ್ದು ಉಳಿದವರು ಎಲ್ಲಿದ್ದಾರೆ ಅನ್ನೋದೆ ಗೊತ್ತಾಗಿಲ್ಲ. ಉಳಿದವರಿಗಾಗಿ ಹುಡುಕಾಟ ನಡೆಸ್ತಿದ್ದೇವೆ ಅಂತ ನೋವು ಹೊರ ಹಾಕಿದ್ದಾರೆ.

ಬಿಪಿ, ಶುಗರ್​ನಿಂದ ಹಿರಿಯ ಜೀವಗಳ ನರಳಾಟ

ಮಹಾ ಪ್ರವಾಹಕ್ಕೆ ವಯನಾಡಿನಲ್ಲಿ ಸಾವಿರಾರು ಮಂದಿ ಸೂರು ಕಳೆದುಕೊಂಡು ಬೀದಿಪಾಲಾಗಿದ್ದಾರೆ. ನಿರಾಶ್ರಿತರನ್ನೆಲ್ಲ ಕಾಳಜಿ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ಮೆಪ್ಪಾಡಿಯ ಸರ್ಕಾರಿ ಪ್ರಾಥಮಿಕ, ಪಿಯು ಕಾಲೇಜಲ್ಲಿ ಕಾಳಜಿ ಕೇಂದ್ರ ಸ್ಥಾಪಿಸಿ ಜನರಿಗೆ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ಕಾಳಜಿ ಕೇಂದ್ರದಲ್ಲಿರುವರಿಗೆ ಉಪಹಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಪರೋಟ, ಉಪ್ಪಿಟ್ಟು, ಬ್ರೆಡ್, ಬಿಸ್ಕತ್, ಬಾಳೆಹಣ್ಣು ನೀಡಲಾಗುತ್ತಿದೆ.

ಇನ್ನು ಕಾಳಜಿ ಕೇಂದ್ರದಲ್ಲಿ ಬಿಪಿ ಶುಗರ್ ಇರೋ ಹಿರಿಯ ಜೀವಗಳು ಪರದಾಡ್ತಿವೆ. ಜ್ವರ, ಕೆಮ್ಮು,‌ ನೆಗಡಿ, ಶೀತದಿಂದ ಜನ ಬಳಳುತ್ತಿದ್ದು, 20 ಕ್ಕೂ ಹೆಚ್ಚು ವೈದ್ಯರಿಂದ ಚಿಕಿತ್ಸೆ ನೀಡಲಾಗ್ತಿದೆ. 70ಕ್ಕೂ ‌ಹೆಚ್ಚು ಸ್ಟಾಫ್ ನರ್ಸ್​ಗಳು ನಿರಾಶ್ರಿತರ ಸೇವೆ ಮಾಡ್ತಿದ್ದಾರೆ.

ಬಟ್ಟೆಗಾಗಿ ಕೋಟ್ಯಾಧೀಶ ಪರದಾಟ! ಮುಚ್ಚಿ ಹೋದ ಮನೆಗಾಗಿ ಕಣ್ಣೀರು

ಚೂರಲ್​ ಮಲದಲ್ಲಿ ವ್ಯಕ್ತಿಯೋರ್ವ ತನ್ನ ಮನೆ ಇದ್ದ ಜಾಗಕ್ಕೆ ಬಂದು ಕಣ್ಣೀರಿಟ್ಟ ಘಟನೆ ನಡೆದಿದೆ. ಬ್ಯಾಗ್​ ಹಾಕೊಂಡು ಬಂದಾತ ಇಲ್ಲಿ ನನ್ನ ಮನೆ ಇತ್ತು. ಈಗ ಇಲ್ಲ ಅಂತ ಕಾರ್ಯಾಚರಣೆ ನಡೆಸುತ್ತಿದ್ದವರ ಮೇಲೆ ಆಕ್ರೋಶ ವ್ಯಕ್ತ ಪಡಿಸುತ್ತಾ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ಕೇರಳದ ಬೆನ್ನಲ್ಲೇ ಬೆಂಗಳೂರಲ್ಲೂ ಭರ್ಜರಿ ಮಳೆ.. ಮನೆಯಿಂದ ಹೊರಬರೋ ಮುನ್ನ ಯೋಚಿಸಿ

ಐಷಾರಾಮಿ ಜೀವನ ನಡೆಸ್ತಿದ್ದ ಅದೆಷ್ಟು ಜನ ವಯನಾಡಿನ ಜಲ ದುರಂತಕ್ಕೆ ಅಕ್ಷರಶಹಃ ಎಲ್ಲವನ್ನ ಕಳೆದುಕೊಂಡು ಕಂಗಲಾಗಿದ್ದಾರೆ. ನಿರಾಶ್ರಿತರ ಕೇಂದ್ರದಲ್ಲಿ ಮುಂಡಕೈ ನಿವಾಸಿಯೊಬ್ಬ ಅಳಲು ತೋಡಿಕೊಂಡಿದ್ದು, ಬಟ್ಟೆಗಾಗಿ ಅಂಗಲಾಚುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರಕೃತಿಯ ವಿಕೋಪಕ್ಕೆ ನೆನ್ನೆವರೆಗೂ ರೆಸಾರ್ಟ್, ಜೀಪು,‌ ಐಷಾರಾಮಿ‌ ಜೀವನ ನಡೆಸುತ್ತಿದ್ದವರು ಇಂದು ಏನೂ ಇಲ್ಲದಂತವರಾಗಿ ಕಾಳಜಿ ಕೇಂದ್ರದಲ್ಲಿ ಬದುಕು ದೂಡುವಂತ ಸ್ಥಿತಿ ಬಂದಿದೆ.

ಇದನ್ನೂ ಓದಿ:ಕೇರಳ ಭೂಕುಸಿತ, 300 ಜನ ಸಾವನ್ನಪ್ಪಿದ್ದಾರಾ..? ಬೆಚ್ಚಿ ಬೀಳಿಸೋ ಸತ್ಯ ಬಿಚ್ಚಿಟ್ಟ ಸ್ಥಳೀಯ ನಿವಾಸಿ 

publive-image

ಮೆಪ್ಪಾಡಿಯ ಸ್ಮಶಾನದಲ್ಲಿ ಸಾಲು ಸಾಲು ಅಂತ್ಯಸಂಸ್ಕಾರ

ಕೇರಳದ ಮೆಪ್ಪಾಡಿಯ ಚರ್ಚ್‌ನಲ್ಲಿ ಶವಗಳ ಮುಂದೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಅಂತ್ಯ ಸಂಸ್ಕಾರ ನೇರವೇರಿಸಲಾಗಿದೆ. ಶವಸಂಸ್ಕಾರಕ್ಕೂ ಮುನ್ನ ಪಾದ್ರಿಗಳಿಂದ ವಿಶೇಷ ಪ್ರಾರ್ಥನೆ ಸಲ್ಲಿಸಿ ಗುಡ್ಡ ಕುಸಿತದಲ್ಲಿ ಮೃತರಾದ 3 ಮೃತದೇಹಗಳ ಅಂತ್ಯಕ್ರಿಯೆ ನೇರವೇರಿಸಿದ್ದಾರೆ. ಇನ್ನು ಗುರುತು ಸಿಗದ 26 ಮೃತದೇಹಗಳ ಸಾಮೂಹಿಕ ಅಂತ್ಯಕ್ರಿಯೆ ಮಾಡಲಾಗಿದೆ. ಮೆಪ್ಪಾಡಿ ಸರ್ಕಾರಿ ಜಾಗದಲ್ಲಿ ಜಿಲ್ಲಾಡಳಿತದಿಂದ ಅಂತ್ಯಕ್ರಿಯೆ ಮಾಡಲಾಗಿದ್ದು, ಗ್ಯಾಸ್ ಬರ್ನರ್, ಸೌದೆಗಳನ್ನ ಬಳಸಿಕೊಂಡು ಅಂತ್ಯ ಸಂಸ್ಕಾರ ನೇರವೇರಿಸಲಾಗಿದೆ. ಅಂತ್ಯಕ್ರಿಯೆಯನ್ನ ನಡೆಸಿ ಕುಟುಂಬಸ್ಥರಿಗೆ ಚಿತಾ ಭಸ್ಮ ಹಸ್ತಾಂತರ ಮಾಡಲಾಗಿದೆ.

80 ಕಿ. ಮೀ ದೂರದಲ್ಲಿ ಶವಪತ್ತೆ! 

ಮೆಪ್ಪಾಡಿ ಗುಡ್ಡದಲ್ಲಿ ಭೂಕುಸಿತ ಸಂಭವಿಸಿದ್ದು ಪ್ರವಾಹದ ಅಬ್ಬರ ಮುಂಡಕೈ, ಚೂರಲ್ ಮಾಲಾ, ಸೂಚಿಪಾರಾ ವಾಟರ್‌ ಫಾಲ್ಸ್ ಮುಖಾಂತರ ಪೋತುಕಲ್‌ವರೆಗೂ ಸಾಗಿರೋ ತಲುಪಿದೆ. ಅಂದರೆ ಮೆಪ್ಪಾಡಿ ಗುಡ್ಡದಿಂದ ಪೋತುಕಲ್‌ವರೆಗೆ 80 ಕಿ.ಮೀ ಅಂತರವಿದ್ದು, ಶವಗಳು 80 ಕಿ.ಮೀವರೆಗೆ ಕೊಚ್ಚಿಕೊಂಡು ಹೋಗಿದೆ ಎನ್ನಲಾಗಿದೆ.

ವಯನಾಡಿ ಭೂಮಿ ದುರಂತ ಭೂಮಿಯಾಗಿದೆ. ಗುಡ್ಡದ ಭೂತಕ್ಕೆ ವಯನಾಡಿನ ಜನರ ನೆಮ್ಮದಿಗೆ ಕೊಳ್ಳಿ ಬಿದ್ದಿದೆ. ಬದುಕು ಬೀದಿಪಾಲಾಗಿದೆ. ತಲೆ ಮೇಲಿನ ಸೂರು ಮಣ್ಣುಪಾಲಾಗಿದೆ. ಮುಂದಿನ ಭವಿಷ್ಯ ಏನು ಅನ್ನೋ ಉತ್ತರ ಸಿಗದ ಪ್ರಶ್ನೆಯೊಂದೆ ಉಳಿದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment