/newsfirstlive-kannada/media/post_attachments/wp-content/uploads/2024/08/kerala1.jpg)
ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಗುಡ್ಡದ ಭೂತ ಮರಣ ಮೃದಂಗ ಬಾರಿಸಿದ್ದು ಸಾವಿನ ಸಂಖ್ಯೆ 280ಕ್ಕೆ ದಾಟಿದೆ. ಸಾವಿನ ಸುರಿ ಮಳೆಯಲ್ಲಿ ಬದುಕುಳಿದವರು ಹೋರಾಟ ನಡೆಸ್ತಿದ್ದಾರೆ. ಕೆಸರು ಮಿಶ್ರಿತ ಪ್ರವಾಹದಲ್ಲಿ ಕಣ್ಮರೆಯಾದವರಿಗಾಗಿ ಹುಡುಕಾಟ ಮುಂದುವರಿದಿದೆ. ಜಲಪ್ರಳಯದಿಂದ ಪರಿಸ್ಥಿತಿ ಅಯೋಮಯವಾಗಿದೆ.
ಇದನ್ನೂ ಓದಿ:ಕೇರಳ ಗುಡ್ಡ ಕುಸಿತದಲ್ಲಿ ಕರ್ನಾಟಕದ ಅಜ್ಜಿ, ಮೊಮ್ಮಗ ನಾಪತ್ತೆ.. ಇದೇ ಕುಟುಂಬದ ಮೂವರ ರೋಚಕ ರಕ್ಷಣೆ
ಹೌದು, ಕೇರಳ ರಾಜ್ಯ ಎಂದೆಂದೂ ಕಂಡು ಕೇಳಿರದ ರೀತಿಯಾದ ಭೂಕುಸಿತದ ಮಹಾ ದುರಂತಕ್ಕೆ ಕಾರಣವಾಗಿದೆ. ಇರುಳು ಆವರಿಸಿ ಜನ ಗಾಢ ನಿದ್ರೆಯಲ್ಲಿರುವಾಗಲೇ ಮಳೆ, ಭೂಕುಸಿತದ ರೂಪದಲ್ಲಿ ಯಮಪಾಶ ಹಾಕಿದೆ. ಒಂದು ರಾತ್ರಿ ಮೂರು ಬಾರಿಯ ಗುಡ್ಡದ ಭೂತ ಸಾವಿನ ಸುರಿಮಳೆ ಸುರಿಸಿದೆ.
ಮೆಪ್ಪಾಡಿಯ ಬೆಟ್ಟಪ್ರದೇಶದ ಮುಂಡಕೈ, ಅಟ್ಟಾಮಲೈ, ಚೂರಲ್‌ಮಲಾದಲ್ಲಿ ಮನೆ, ಮಠ, ಮಂದಿರ, ಶಾಲೆಗಳನ್ನು ನಾಮಾವಶೇಷ ಮಾಡಿದೆ. ಒಂದೇ ರಾತ್ರಿಯಲ್ಲಿ ಇಡೀ ಊರಿಗೇ ಊರೇ ಜಲಸಮಾಧಿಯಾಗಿದೆ. ಆದರೆ ಭೂ ಸಮಾಧಿ ಆಗಿರುವವರನ್ನು ಹೊರ ತೆಗೆಯುವುದೇ ರಕ್ಷಣಾ ಸಿಬ್ಬಂದಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇನ್ನು, ಕುಟುಂಬಸ್ಥರನ್ನು ಕಳೆದುಕೊಂಡು ಬದುಕುಳಿದವರು ಕಣ್ಣೀರು ಹಾಕುತ್ತಿದ್ದಾರೆ.
ವಯನಾಡಿನಲ್ಲಿ ಸಂಭವಿಸಿದ ಮಹಾ ದುರಂತದಲ್ಲಿ ತನ್ನ ಗಂಡ ಹಾಗೂ ಮಗನನ್ನು ಕಳೆದುಕೊಂಡ ಕೊಡಗಿನ ಮಹಿಳೆ ಕಣ್ಣೀರಿಟ್ಟಿದ್ದಾರೆ. ಈ ಬಗ್ಗೆ ನ್ಯೂಸ್ ಫಸ್ಟ್ನೊಂದಿಗೆ ಮಾತಾಡಿದ ಲತಾ, ನನ್ನ ಮಗ 3 ತಿಂಗಳ ಮಗುವನ್ನು ಬಿಟ್ಟು ಹೊರಟು ಹೋದ. ನನ್ನ ಗಂಡ ಕೂಡ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಈವರೆಗೂ ಇಬ್ಬರ ಮೃತದೇಹಗಳು ಕೂಡ ಸಿಕ್ಕಿಲ್ಲ. ಪತಿ, ಮಗನಿಗಾಗಿ ಲತಾ ಅವರು ಕಣ್ಣೀರಿಟ್ಟಿದ್ದಾರೆ. ಇನ್ನು ನೊಂದ ಕುಟುಂಬಗಳ ಜೊತೆಗೆ ಮಾತಾಡುತ್ತಿದ್ದ ನ್ಯೂಸ್ ಫಸ್ಟ್ ಪ್ರತಿನಿಧಿ ರವಿ ಪಾಂಡವಪುರ ಅವರು ಕೂಡ ಆ ಕಥೆ ಕೇಳಿ ಕಣ್ಣೀರು ಹಾಕಿರೋ ಪ್ರಸಂಗ ಕೂಡ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ