/newsfirstlive-kannada/media/post_attachments/wp-content/uploads/2024/08/Shaija.jpg)
ಶೈಜಾ. ಕಳೆದ ಒಂದು ವಾರದಿಂದ ಈ ಮಹಿಳೆ ಮೃತದೇಹಗಳ ಜೊತೆಗಿದ್ದಾರೆ. ಚುರಲ್ಮಲಾದಲ್ಲಿ ನಡೆದ ಭೂಕುಸಿತದಲ್ಲಿ ಬಂದ ಜನರ ಮೃತದೇಹವನ್ನು ಗುರುತಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಸದ್ಯ ಅವರ ಕೆಲಸಕ್ಕೆ ಕೇರಳಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಶೈಜಾ ಮೇಪಾಡಿಯವರು ಒಂದು ವಾರದಿಂದ ಆರೋಗ್ಯ ಕೇಂದ್ರದಲ್ಲಿಯೇ ಇದ್ದರು. ಆಶಾ ಕಾರ್ಯಕರ್ತೆಯಾಗಿದ್ದ ಇವರು, ಮುಂಡಕ್ಕೈನ ಪಂಚಾಯತ್​​ ಸದಸ್ಯೆಯೂ ಹೌದು. ಹೀಗಾಗಿ ಶೈಜಾರಿಗೆ ಮಂಡಕ್ಕೈನ ಪ್ರತಿ ಮನೆಯವರೂ ಗೊತ್ತಿದೆ.
/newsfirstlive-kannada/media/post_attachments/wp-content/uploads/2024/07/WAYANADU-LANDLSIDE-RAIN.jpg)
ವಯನಾಡು ದುರಂತದಲ್ಲಿ ಸಾವನ್ನಪ್ಪಿದವರನ್ನು ಸಂಬಂಧಿಕರಿಗೆ ಗುರುತಿಸಲು ಸಾಧ್ಯವಾಗದೇ ಇದ್ದಾಗ ಶೈಜಾ ಅವರು ಆ ಮೃತದೇಹಗಳನ್ನು ಗುರುತಿಸುತ್ತಿದ್ದರು. ಅನೇಕರು ದುಃಖದ ಮಡುವಿನಲ್ಲಿದ್ದಾಗ ಶೈಜಾರವರೇ ಮೃತದೇಹವನ್ನ ಗುರುತಿಸಿದ್ದಾರೆ. ಮಾಹಿತಿಯ ಪ್ರಕಾರ 100ಕ್ಕೂ ಹೆಚ್ಚು ಮೃತದೇಹಗಳನ್ನು ಗುರುತಿಸುವಲ್ಲಿ ಶೈಜಾರವರು ಸಹಾಯ ಮಾಡಿದ್ದಾರೆ.
ಇದನ್ನೂ ಓದಿ: ಚಿನ್ನದ ಹುಡುಗನಿಗೆ ಈ ನಾಲ್ವರು ಅತಿದೊಡ್ಡ ಎದುರಾಳಿಗಳು.. ನೀರಜ್ ಚೋಪ್ರಾ ಮಿಂಚಲು ಕಾಯುತ್ತಿದೆ ಭಾರತ
‘ರಾತ್ರಿ ಬೆಳಗಾದಂತೆ ಪ್ರತಿ ದಿನ ಫೋನ್​ಕರೆಗಳು ಬರುತ್ತಿದ್ದವು. ಘಟನೆ ಬಗ್ಗೆ ತಿಳಿಯಲು ಕಾಲ್​ ಮಾಡುತ್ತಿದ್ದರು. ಆರೋಗ್ಯ ಇಲಾಖೆಯಿಂದಲೂ ಕರೆ ಬರುತ್ತಿದ್ದವು. ಅಧಿಕಾರಿಗಳು ಕಾಲ್​ ಮಾಡುತ್ತಿದ್ದರು. ಸಾವು-ನೋವು ಬಗ್ಗೆ ಕೇಳುತ್ತಿದ್ದರು. ಮುನ್ನೂರಕ್ಕೂ ಅಧಿಕ ಜನರು ಸಾವನ್ನಪ್ಪಿರಬಹುದು ಎಂದು ಹೇಳಿದೆ. ನಾನು ಬಳಿಕ ಆಸ್ಪತ್ರೆಗೆ ಬಂದೆ ಬೆಳಗಾದಂತೆ ಮೃತದೇಹಗಳು ಬರಲಾರಂಭಿಸಿದವು’ ಎಂದು ಶೈಜಾರವರು ಹೇಳುತ್ತಾರೆ.
/newsfirstlive-kannada/media/post_attachments/wp-content/uploads/2024/07/Wayanad-landslide11.jpg)
ಇದನ್ನೂ ಓದಿ: ಒಂದಾ..ಎರಡಾ.. ಮಳೆಯಾರ್ಭಟಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ಸಾಲು ಸಾಲು ಅವಾಂತರಗಳು
‘ಮೊದಲ ಮೃತದೇಹ ಬಂದಾಗ ಅದರ ಸಂಬಂಧಿಕರು ಗುರುತಿಸಲಿಲ್ಲ. ಇದು ನಮ್ಮವರದ್ದಲ್ಲ ಎಂದು ಹೇಳಿದರು. ಆದರೆ ಬಳಿಕ ನಾನು ಸರಿಯಾಗಿ ಗುರುತಿಸಿ ಅವರಿಗೆ ಹೇಳಿದೆ. ಹುಬ್ಬು, ಉಗುರುಗಳನ್ನು ನೋಡಿ ಶವಗಳನ್ನು ಗುರುತಿಸಿದ್ದೇನೆ’ ಎಂದು ಶೈಜಾರವರು ಹೇಳುತ್ತಾರೆ.
/newsfirstlive-kannada/media/post_attachments/wp-content/uploads/2024/07/wayanad.jpg)
20 ವರ್ಷಗಳಿಂದ ಮುಂಡಕ್ಕೈನಲ್ಲಿ ಶೈಲಜಾ ವಾಸವಿದ್ದಾರೆ. 2019ರಲ್ಲಿ ಭೂಕುಸಿತ ಸಂಭವಿಸಿದಾಗ ಮೇಪಾಡಿಯಲ್ಲಿ ಬಾಡಿಗೆ ಮನೆಯಲ್ಲಿದ್ದರು. 2005ರಲ್ಲಿ ಅವರ ಪತಿ ಸಾಲಬಾಧೆಯಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಬಳಿಕ ಏನು ತೋಚದೆ ಎರಡು ಮಕ್ಕಳ ತಾಯಿ ಶೈಜಾ ಬೇರೊಂದು ಮದುವೆಯಾದರು. ಬಳಿಕ ಪಂಚಾಯತಿ ಸದಸ್ಯರಾಗಿಮ ಉಪಾಧ್ಯಕ್ಷರು ಆದರು.
ಅಂದಹಾಗೆಯೇ ವಯನಾಡು ದುರಂತ ನಡೆದು ಇಂದಿಗೆ 8 ದಿನಗಳು. ಭಯಾನಕ ಭೂಕುಸಿತದ ನೋವು ಜನರ ಮನಸಲ್ಲಿ ಮಾಸದೆ ಉಳಿದಿದೆ. ಸಾಕಷ್ಟು ಜನರು ತನ್ನವರನ್ನು ಕಳೆದುಕೊಂಡ ದುಃಖದಿಂದ ಇನ್ನೂ ಹೊರಬಂದಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us