newsfirstkannada.com

ಅಯ್ಯೋ ದುರಂತ!.. 18 ಫ್ಯಾಮಿಲಿ ಕಾಪಾಡಿದ್ದ ರಿಯಲ್ ಹೀರೋ.. ಕಾರು ಸಮೇತ ಕಣ್ಮುಂದೆಯೇ ಕೊಚ್ಚಿ ಹೋದ

Share :

Published August 4, 2024 at 8:01pm

    ಸರ್ಕಾರದ ಕಾರ್ಯಾಚರಣೆಗೂ ಮೊದಲೇ ಕಾಪಾಡಿದ್ದ ಯುವಕ

    ಮೃತದೇಹ ಸಿಕ್ಕರೂ ಅದು ಆ ಯುವಕನದ್ದಲ್ಲ ಎಂದ ಸ್ಥಳೀಯರು

    ಟೀ ಎಸ್ಟೇಟ್​​​ಗಳಲ್ಲಿದ್ದ ಕುಟುಂಬಗಳ 30 ಜನರನ್ನ ಕಾಪಾಡಿದ್ದನು

ದೇವರನಾಡು ಸಾವಿನಕೂಪವಾಗಿದೆ. ತಮ್ಮವರನ್ನ ಕಳೆದುಕೊಂಡವರ ಸಂತ್ರಸ್ಥರ ರೋಧನೆ ಹೇಳತೀರದಾಗಿದೆ. ಮೃತದೇಹಗಳ ರಾಶಿಯ ನಡುವೆ ಕುಟುಂಬಸ್ಥರ ಕಣ್ಣೀರು ಬಿಟ್ಟು ಎಲ್ಲ ಕೊಚ್ಚಿ ಹೋಗಿದೆ. ಇಂತಹ ಭಯಾನಕ ಭೂಕುಸಿತದಲ್ಲಿ 30 ಜನರನ್ನು ಕಾಪಾಡಿದ್ದ ಕೇರಳದ ಚೂರಾಲ್​ಮಾಲದ ರಿಯಲ್ ಹೀರೋ ಕಾರು ಸಮೇತ ಕೊಚ್ಚಿ ಹೋಗಿದ್ದಾನೆ.

ಇದನ್ನೂ ಓದಿ: ಜಿಮ್​ ವಸ್ತುಗಳ ಸೇಲ್ಸ್​ಮ್ಯಾನ್​ ಮೃತದೇಹ ಪತ್ತೆ.. ಪ್ರಕರಣ ಬೆನ್ನ ಹತ್ತಿದ್ದ ಪೊಲೀಸರಿಗೆ ಶಾಕ್​ ಮೇಲೆ ಶಾಕ್​!

ವಯನಾಡಿನ ಭೂ ಕುಸಿತವಾದಗ 30 ಮಂದಿಯನ್ನು ಕಾಪಾಡಿದ್ದ ಚೂರಾಲ್​ಮಾಲದ ನಿವಾಸಿ ಪ್ರಜೀಶ್ ಮೃತಪಟ್ಟ ಯುವಕ. ಸದ್ಯ ಇವರ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಈ ರೀತಿ ಹುಡುಕುವಾಗ ಶವವೊಂದು ಸಿಕ್ಕಿದೆ. ಆದರೆ ಪ್ರಜೀಶ್ ದೇಹವಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಇಂದಿಗೆ 5 ದಿನಗಳು ಕಳೆಯುತ್ತ ಬಂದರೂ ಮೃತದೇಹ ಮಾತ್ರ ಪತ್ತೆ ಆಗುತ್ತಿಲ್ಲ ಎಂದು ಹೇಳಲಾಗ್ತಿದೆ.

ಇದನ್ನೂ ಓದಿ: Olympics; ಗ್ರೇಟ್​ ಬ್ರಿಟನ್​ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು.. ಸೆಮಿಸ್​​ಗೆ ಎಂಟ್ರಿ ಕೊಟ್ಟ ಟೀಮ್ ಇಂಡಿಯಾ

ಸರ್ಕಾರದ ಕಾರ್ಯಾಚರಣೆ ನಡೆಯುವ ಮೊದಲೇ ಯುವಕ ತನ್ನ ಚಾಣಕ್ಷತನದಿಂದ ಸಂತ್ರಸ್ತರನ್ನು ರಕ್ಷಣೆ ಮಾಡಿದ್ದನು. ಟೀ ಎಸ್ಟೇಟ್​ಗಳಲ್ಲಿ ಇದ್ದಂತಹ ಸುಮಾರು 18 ಕುಟುಂಬಗಳ 30 ಜನರನ್ನು ಮುಂಡಕೈ ರಸ್ತೆಯಿಂದ ಚೂರಲ್​ಮಾಲದ ಶಾಲೆಯ ಮೇಲ್ಭಾಗಕ್ಕೆ ಜೀಪ್​ನಲ್ಲಿ ತಂದು ಬಿಟ್ಟಿದ್ದನು. ತನ್ನದೇ ಆಗಿದ್ದ ಜೀಪ್​ನಲ್ಲಿ 30 ಮಂದಿಯನ್ನು ದಡ ಸೇರಿಸಿದ್ದ ರಿಯಲ್ ಹೀರೋ. ಆದರೆ ರಕ್ಷಣೆ ಮಾಡುತ್ತಿರುವಾಗಲೇ ಪ್ರಜೀಶ್ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕಾರು ಸಮೇತ ಕೊಚ್ಚಿ ಹೋಗಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಕಾವೇರಿ ದಡದ ಮೇಲೆ ಕುಡುಕರ ಅಟ್ಟಹಾಸ.. ಕಾಲೇಜು ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿ, ಕೊಂದ ಗ್ಯಾಂಗ್ 

ಸದ್ಯ ಪ್ರಜೀಶ್​ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಈ ವೇಳೆ ಒಂದು ಮೃತದೇಹ ಸಿಕ್ಕಿದ್ದು ಅದು ಯಾರೆಂದು ಪತ್ತೆ ಮಾಡಲು ಸಾಧ್ಯವಾಗದಷ್ಟು ಕೊಳೆತು ಹೋಗಿದೆ. ಆದರೆ ಅದು ಯುವಕನದ್ದಲ್ಲ ಎಂದು ಸ್ಥಳೀಯರ ವಾದವಾಗಿದೆ. ಚೂರಲ್​ಮಾಲದ ಸುತ್ತಮುತ್ತ ಯಾವುದೇ ಕಾರ್ಯಾಚರಣೆ ನಡೆದರೂ ಯುವಕ ಮುಂಚೂಣಿಯಲ್ಲಿ ಇರುತ್ತಿದ್ದನು. ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ ಕಣ್ಮರೆ ಆಗಿರುವುದು ತುಂಬಾ ನೋವು ಕೊಡುತ್ತಿದೆ ಎಂದು ಅಲ್ಲಿನ ಸಂತ್ರಸ್ತರು ಹೇಳುತ್ತಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯ್ಯೋ ದುರಂತ!.. 18 ಫ್ಯಾಮಿಲಿ ಕಾಪಾಡಿದ್ದ ರಿಯಲ್ ಹೀರೋ.. ಕಾರು ಸಮೇತ ಕಣ್ಮುಂದೆಯೇ ಕೊಚ್ಚಿ ಹೋದ

https://newsfirstlive.com/wp-content/uploads/2024/08/WAYANAD_PRAJISH.jpg

Load More